ಕಾಸ್ಟಿಂಗ್ ಕೌಚ್ ನ್ನು ಸಮರ್ಥಿಸಿಕೊಂಡ ನೃತ್ಯ ನಿರ್ದೇಶಕಿ ಸರೋಜ್ ಖಾನ್!

ಟಾಲಿವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಚರ್ಚೆಗಳು ತೀವ್ರವಾಗುತ್ತಿದ್ದು, ಕಾಸ್ಟಿಂಗ್ ಕೌಚ್ ವಿರುದ್ಧ ಹಲವರು ದನಿ ಎತ್ತಿದ್ದರೆ, ಬಾಲಿವುಡ್ ನ ನೃತ್ಯ ನಿರ್ದೇಶಕಿ
ಸರೋಜ್ ಖಾನ್
ಸರೋಜ್ ಖಾನ್
ಮುಂಬೈ: ಟಾಲಿವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಚರ್ಚೆಗಳು ತೀವ್ರವಾಗುತ್ತಿದ್ದು, ಕಾಸ್ಟಿಂಗ್ ಕೌಚ್ ವಿರುದ್ಧ ಹಲವರು ದನಿ ಎತ್ತಿದ್ದರೆ, ಬಾಲಿವುಡ್ ನ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಮಾತ್ರ ಕಾಸ್ಟಿಂಗ್ ಕೌಚ್ ಸಂಸ್ಕೃತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ವೃತ್ತಿ ಜೀವನದಲ್ಲಿ ಸುಮಾರು 2000 ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಸರೋಜ್ ಖಾನ್, ಕಾಸ್ಟಿಂಗ್ ಕೌಚ್ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತದೆ. ಕಾಸ್ಟಿಂಗ್ ಕೌಚ್ ಕನಿಷ್ಠ ಜೀವನೋಪಾಯವನ್ನಾದರೂ ನೀಡುತ್ತದೆ ಎಂದು ಸರೋಜ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಕಾಸ್ಟಿಂಗ್ ಕೌಚ್ ಸಂಸ್ಕೃತಿ ಶತಮಾನಗಳಿಂದ ನಡೆಯುತ್ತಿದೆ. ಬಾಲಿವುಡ್ ನ್ನು ದೂಷಿಸುವುದು ಸರಿಯಲ್ಲ ಎಂದು ಸರೋಜ್ ಖಾನ್ ಹೇಳಿದ್ದು, ಮಹಿಳೇಯರಿಂದ ಒಬ್ಬರಲ್ಲಾ ಮತ್ತೊಬ್ಬರು ಯಾವಾಗಲೂ ಪ್ರಯೋಜನ ಪಡೆಯಲು ಯತ್ನಿಸುತ್ತಾರೆ. ಸರ್ಕಾರಿ ಅಧಿಕಾರಿಗಳೂ ಈ ರೀತಿಯ ಕೆಲಸ ಮಾಡುತ್ತಾರೆ. ಹಾಗಾದರೆ ನಾವು ಸಿನಿಮಾ ರಂಗವನ್ನಷ್ಟೇ ಏಕೆ ದೂಷಿಸುತ್ತೇವೆ, ಇಲ್ಲಿ ಕಾಸ್ಟಿಂಗ್ ಕೌಚ್ ನಿಂದ ಕನಿಷ್ಟ ಜೀವನೋಪಾಯವಾದರೂ ಸಿಗುತ್ತದೆ ಎಂದಿದ್ದಾರೆ.
ಒಂದು ವೇಳೆ ಯಾವುದೆ  ಹೆಣ್ಣಿಗೆ ತನ್ನ ಪ್ರತಿಭೆಯ ಬಗ್ಗೆ ವಿಶ್ವಾಸವಿದ್ದರೆ ಕಾಸ್ಟಿಂಗ್ ಕೌಚ್ ಗೆ ಏಕೆ ಒಪ್ಪಿಗೆ ಸೂಚಿಸುತ್ತಾಳೆ? ಯಾರಾದರೂ ಕಾಸ್ಟಿಂಗ್ ಕೌಚ್ ನಂತಹ ಸಂಸ್ಕೃತಿಗೆ ಬೀಳುವುದು ಬೇಡ ಎಂದು ನಿರ್ಧರಿಸಿದರೆ ಕಾಸ್ಟಿಂಗ್ ಕೌಚ್ ಗೆ ಒಪ್ಪಿಗೆ ಸೂಚಿಸುವುದಿಲ್ಲ ಎಂದು ಸರೋಜ್ ಖಾನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com