ರಕ್ಷಿತ್ ಶೆಟ್ಟಿ ಜತೆಗಿನ ನನ್ನ ಒಡನಾಟ ಸ್ಯಾಂಡಲ್ ವುಡ್ ಪ್ರವೇಶಕ್ಕೆ ದಾರಿಯಾಯಿತು: ಸೆನ್ನಾ ಹೆಗ್ಡೆ

ದಿಗಂತ್, ಪೂಜಾ ದೇವರಿಯಾ ಜೋಡಿಯ ’ಕಥೆಯೊಂದು ಶುರುವಾಗಿದೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಸೆನ್ನಾ ಹೆಗ್ಡೆ ಎನ್ನುವ ಹೊಸ ನಿರ್ದೇಶಕನೊಬ್ಬರ ಆಗಮನವಾಗುತ್ತಿದೆ.
’ಕಥೆಯೊಂದು ಶುರುವಾಗಿದೆ’  ಚಿತ್ರದ ಒಂದು ದೃಶ್ಯ
’ಕಥೆಯೊಂದು ಶುರುವಾಗಿದೆ’ ಚಿತ್ರದ ಒಂದು ದೃಶ್ಯ
ಬೆಂಗಳೂರು: ದಿಗಂತ್, ಪೂಜಾ ದೇವರಿಯಾ ಜೋಡಿಯ ’ಕಥೆಯೊಂದು ಶುರುವಾಗಿದೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಸೆನ್ನಾ ಹೆಗ್ಡೆ ಎನ್ನುವ ಹೊಸ ನಿರ್ದೇಶಕನೊಬ್ಬರ ಆಗಮನವಾಗುತ್ತಿದೆ. ’ಕಥೆಯೊಂದು.... ಚಿತ್ರ ಈ ವಾರ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಎಕ್ಸ್ ಪ್ರೆಸ್ ಸೆನ್ನಾ ಹೆಗ್ಡೆ ಅವರೊಂಡನೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.
ಕಾಸರಗೋಡು ಜಿಲ್ಲೆ ಕನ್ನಂಗಾಡುವಿನಲ್ಲಿ ಜನಿಸಿದ ಸೆನ್ನಾ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ.ಇಂಜಿನಿಯರಿಂಗ್ ಮುಗಿಸಿ ಆಸ್ಟ್ರೇಲಿಯಾದಲ್ಲಿ ಮಾಸ್ಟರ್ಸ್ ವ್ಯಾಸಂಗ ಮಾಡಿದ್ದ ಸೆನ್ನಾ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಅಮೆರಿಕಾದಲ್ಲಿ ನಾಲ್ಕು ವರ್ಷ ಕಾಲ ಕೆಲಸ ಮಾಡಿದ್ದಾರೆ. ಬಳಿಕ ಅವರು ಜಾಹೀರಾತು ಕ್ಷೇತ್ರದತ್ತ ಹೊರಳಿದರು. ಅಲ್ಲಿ ಅವರು ಬಹುಬೇಗನೇ  ಸೃಜನಾತ್ಮಕ ನಿರ್ದೇಶಕ ಎಂದು ಗುರುತಿಸಿಕೊಂಡರು. "ನಾನು ನನ್ನ ಇಷ್ಟದ ಚಿತ್ರ ನಿರ್ದೇಶನಕ್ಕಾಗಿ ನಾನು ಭಾರತಕ್ಕೆ ಮರಳಿದೆ.ಮೊದಲಿಗೆ ನಾನು  0-41 * ಎನ್ನುವ ಸಾಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದೆ. ಇದಕ್ಕೆ ಏಳು ಲಕ್ಷ ರು. ಖರ್ಚಾಗಿದ್ದು ನನ್ನ ನೆರೆ ಹೊರೆಯವರನ್ನೇ ನಟ ನಟಿಯರನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಈ ಚಿತ್ರ ನೋಡಿದ್ದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದರಿಂದ ನಾನು ಮತ್ತೆ ದೊಡ್ಡ ಚಿತ್ರಗಳ ನಿರ್ದೇಶನದಲ್ಲಿ ತೊಡಗಿಕೊಳ್ಳಲು ಸ್ಪೂರ್ತಿ ದೊರಕಿತು" ಸೆನ್ನಾ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಜತೆ ನಾನು ಸಂಪರ್ಕ ಬೆಳೆಸಿದ್ದು ಸ್ಯಾಂಡಲ್ ವುಡ್ ಪ್ರವೇಶಿಸುವುದಕೆ ನನಗೆ ಅನುಕೂಲವಾಗಿತ್ತು ಎನ್ನುವ ಸೆನ್ನಾ ರಕ್ಷಿತ್ ಶೆಟ್ಟಿಯ 'ಉಳಿದವರು ಕಂಡ್ಂತೆ’ ಚಿತ್ರದಲ್ಲಿ ಸ್ಕ್ರಿಪ್ಟ್ ಸಮಾಲೋಚಕನಾಗಿ ಕೆಲಸ ಮಾಡಿದ್ದರು."ರಕ್ಷಿತ್ ಕಿರಿಕ್ ಪಾರ್ಟಿ ಚಿತ್ರ ಮಾಡಿದ ಸಮಯದಲ್ಲಿ ನಾನು ನನ್ನ ಕಥೆಯೊಂದನ್ನು ಅವರಿಗೆ ಹೇಳಿದ್ದೆ. ಇದನ್ನು ಮೆಚ್ಚಿದ ಅವರು ತಾನು ಚಿತ್ರಕ್ಕೆ ಬಂಡವಾಳ ತೊಡಗಿಸುವುದಾಗಿ ಭರವಸೆ ನೀಡಿದ್ದರು. ಆಗಿನಿಂದಲೂ ನನಗೆ ನನ್ನ ಚಿತ್ರದಲ್ಲಿ ದಿಗಂತ್ ನಟಿಸಬೇಕು ಎಂದಿತ್ತು. ರಕ್ಷಿತ್ ಶೆಟ್ಟಿ ನನನ್ಗೆ ದಿಗಂತ್ ಅವರ ಪರಿಚಯ ಮಾಡಿಸಿದರು. ಹತ್ತು ನಿಮಿಷದ ಕಥೆ ಕೇಳಿದ್ದ ದಿಗಂತ್ ತಾನು ಚಿತ್ರದಲ್ಲಿ ನಟಿಸಲು ಸಮ್ಮತಿಸಿದ್ದರು!"
"ಒಂದು ಚಿತ್ರದ ಯಶಸ್ಸಿಗೆ, ಸೋಲಿಗೆ ನಿರ್ದೇಶಕನೇ ಮುಖ್ಯ ಕಾರಣ. ಹೀಗಾಗಿ ನನಗೆ ನನ್ನ ಇತಿಮಿತಿಗಳೇನು ಎನ್ನುವುದು ತಿಳಿದಿದೆ.  ನನ್ನಲ್ಲಿ ಇನ್ನೂ ಕೆಲವು ಕಥೆಗಳಿದ್ದರೂ ಈ ಚಿತ್ರದ ನಂತರ ಭವಿಷ್ಯದಲ್ಲಿ ನಾನು ಇನ್ನಷ್ಟು ಚಿತ್ರಗಳನ್ನು ನಿರ್ದೇಶನ ಮಾಡುತ್ತೇನೆ."
ಸೆನ್ನಾ ಮಾನವ ಸಂಬಂಧವನ್ನು ಅತ್ಯಂತ ಸರಳವಾಗಿ ಪರಿಭಾವಿಸುತ್ತಾರೆ.ಬರಹಗಾರ ಮತ್ತು ಚಲನಚಿತ್ರೋದ್ಯಮಿಯಾಗಿ  ಸೆನ್ನಾ ಅವರಿಗೆ ಮಾನವೀಯ ಸಮ್ಬಂಧಗಳ ಸಂಕೀರ್ಣತೆಯ ಕುರಿತು ಬಹಳ ಆಸಕ್ತಿ ಇದೆ."ಚಿತ್ರದ ಸಂಭಾಷಣೆಗಳೊಡನೆ ಪ್ರೇಕ್ಷಕರೊಡನೆ ಸಂಪರ್ಕಿಸಲು ನಾನು ಬಯಸುತ್ತೇನೆ.ಚಲನಚಿತ್ರಗಳುಜನರು ನಡೆಸುವ ದಿನ ದಿನದ ಹೋರಾಟಕ್ಕೆ ಸಂಬಂಧಿಸಿರುತ್ತದೆ. ಹಾಗಿದ್ದಾಗಲೇ ಜನರಿಗೆ ಚಿತ್ರದ ಮೇಲೆ ಆಸಕ್ತಿ ಹುಟ್ಟಲು ಸಾಧ್ಯ." ’ಡೆಡ್ ಮ್ಯಾನ್ ವಾಕಿಂಗ್’  ತನ್ನ ಸಾರ್ವಕಾಲಿಕ ಮೆಚ್ಚಿನ ಚಿತ್ರ ಎನ್ನುವ ಸೆನ್ನಾ ಆ ಚಲನಚಿತ್ರದಲ್ಲಿ ಮಾನವ ಭಾವನೆಗಳ ಸರಳತೆ ಮತ್ತು ಸಂಕೀರ್ಣತೆಯ ನಡುವಿನ ಸಂಬಂಧವನ್ನು ನಾನು ಇಷ್ಟಪಟ್ಟಿದ್ದೇನೆ.ಇದು ಒಬ್ಬ ಅಪರಾಧಿಯನ್ನು ನೇಣಿಗೆ ಹಾಕುವ ಕಥೆಯನ್ನು ಹೊಂದಿದೆ. ನಾನು ಸಹ ಆ ಮಾರ್ಗದಲ್ಲೇ ಚಿತ್ರ ನಿರ್ದೇಶಿಸಲು ಬಯಸುತ್ತೇನೆ ಎನ್ನುತ್ತಾರೆ.
ಸೆನ್ನಾ ಬರವಣಿಗೆಯಲ್ಲಿ ತೊಡಗುವವಏಳೆ ಶಾಂತಿ ಮತ್ತು ಮೌನವನ್ನು ಇಷ್ಟಪಡುತಾರೆ. ಇದು, ಅವರಿಗೆ ತಮ್ಮ ಸ್ಕ್ರಿಪ್ಟ್ ಬಗ್ಗೆ ಷ್ಟವಾಗಿ ದೃಶ್ಯೀಕರಿಸುವುದು ಮತ್ತು ಅದನ್ನೇ ಕಾಗದಕ್ಕೆ ಇಳಿಸಲು ಸಹಾಯ ಮಾಡಲಿದೆ. "ಚಿತ್ರದ ಕಥೆಯನ್ನು ನಾನು ಇಂಗ್ಲೀಷ್ ನಲ್ಲಿ ಬರೆದಿದ್ದೇನೆ. ಸಂಭಾಷಣೆ ಬರಹಗಾರರಾದ  ಅಭಿಜಿತ್ ಮಹೇಶ್  ಮತ್ತು ನಾನು ಕುಳಿತು ಇದನ್ನು ಕನ್ನಡ ಡ ಪ್ರೇಕ್ಷಕರಿಗೆ ಸರಿಹೊಂದುವಂತೆ ಭಾಷಾಂತರ ಮತ್ತು ರೂಪಾಂತರಗೊಳಿಸಿದ್ದೇವೆ. ಬರಹಗಾರನಿಂದ ಉತ್ತಮ ಚಿತ್ರವೊಂದನ್ನು ನಿರೀಕ್ಷಿಸಬಹುದು. ಹಾಗೆಯೇ ಉತ್ತಮ ನಟ ನಟಿಯರಿಂದಲೂ ಸಹ ಇದು ಸಾಧ್ಯ. ಕಥೆಯೊಂದು.... ಚಿತ್ರದ ಎಲ್ಲಾ ನಟ ನಟಿಯರು, ತಂತ್ರಜ್ಞರು ತಮ್ಮದೇ ರೀತಿಯಲ್ಲಿ ಚಿತ್ರಕ್ಕೆ ಕೊಡುಗೆ ಕೊತ್ಟಿದ್ದಾರೆ" ನಿರ್ದೇಶಕರು ಹೇಳಿದ್ದಾರೆ.
ಕಥೆ ಓದಿದ್ದ ರಕ್ಷಿತ್ ಅದನ್ನು ಮೆಚ್ಚಿದರು, ಬಳಿಕ ಪುಷ್ಕರ್ ಸಹ.ಮೆಚ್ಚಿದ್ದಾರೆ. ರಕ್ಷಿತ್ ಚಿತ್ರಕ್ಕಾಗಿ ಕೆಲವು ಹೊಸ ಹೊಳಹುಗಳನ್ನು ನೀಡಿದ್ದರು. ಇದು ನನ್ನ ಚಿತ್ರದಲ್ಲಿ ಕೆಲಸ ಮಾಡಿದೆ. ಇನ್ನುಳಿದಂತೆ ಇಬ್ಬರೂ ನಿರ್ಮಾಪಕರು ನನ್ನ ಮೇಲೆ ಭರವಸೆ ಇಟ್ಟಿದ್ದರು. ಅವರು ಎಂದಿಗೂ ನನ್ನ ಕೆಲಸದಲ್ಲಿ ಮೂಗು ತೂರಿಸಲಿಲ್ಲ. ಚಿತ್ರವನ್ನು ಸೆನ್ಸಾರ್ ಗೆ ಕಳಿಸುವ ಮುನ್ನ ಅಹ ರಕ್ಷಿತ್ ಕಚ್ಚಾ ಪ್ರತಿಯೊಂದನ್ನು ನೋಡಿದ್ದಾರೆ. ಅಂತಿಮವಾಗಿ ಪ್ರೇಕ್ಷಕರಿಗೆ ಉತ್ತಮ ಕಥೆಯೊಂದನ್ನು ನೀಡಿದ್ದೇನೆ ಎಂದು ನಾನು ಭಾವಿಸುತ್ತೇನೆ." ಸೆನ್ನಾ ಹೆಗ್ಡೆ ಭರವಸೆಯಿಂದ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com