ಹಣ ವಂಚನೆ ಆರೋಪ: ಕಿಚ್ಚ ಸುದೀಪ್ ವಿರುದ್ಧ ಕಾಫಿ ಎಸ್ಟೇಟ್ ಮಾಲಿಕ ದೂರು

ಕನ್ನಡ ಮನರಂಜನೆ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತದ್ದ ವಾರಸ್ದಾರ ಚಿತ್ರೀಕರಣ ಸಂದರ್ಭದಲ್ಲಿ ...
ವಾರಸ್ದಾರ ಧಾರವಾಹಿ ಪೋಸ್ಟರ್
ವಾರಸ್ದಾರ ಧಾರವಾಹಿ ಪೋಸ್ಟರ್

ಬೆಂಗಳೂರು: ಕನ್ನಡ ಮನರಂಜನೆ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ವಾರಸ್ದಾರ ಚಿತ್ರೀಕರಣ ಸಂದರ್ಭದಲ್ಲಿ ಬಳಸಿದ ತಮ್ಮ ಮನೆ ಮತ್ತು ಕಾಫಿ ಎಸ್ಟೇಟ್ ಗೆ ನಿಗದಿಪಡಿಸಿದ್ದ ಹಣ ನೀಡದೆ ಚಿತ್ರೀಕರಣ ತಂಡ ವಂಚಿಸಿದೆ ಎಂದು ನಟ ಕಿಚ್ಚ ಸುದೀಪ್ ವಿರುದ್ಧ ಎಸ್ಟೇಟ್ ಮಾಲಿಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ದೂರು ನೀಡಿದ್ದಾರೆ.

ಕೆಲ ಸಮಯಗಳ ಹಿಂದೆ ಖಾಸಗಿ ಮನರಂಜನೆ ವಾಹಿನಿಯಲ್ಲಿ ವಾರಸ್ದಾರ ಎಂಬ ಧಾರವಾಹಿ ಪ್ರಸಾರವಾಗುತ್ತಿತ್ತು. ಅದನ್ನು ನಟ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣ ಮಾಡಲಾಗಿತ್ತು. ಕೆಲ ಸಮಯಗಳವರೆಗೆ ಪ್ರಸಾರವಾಗಿ ನಂತರ ಯಶಸ್ಸು ಕಾಣದೆ ಧಾರವಾಹಿ ನಿಂತು ಹೋಗಿತ್ತು. ಇದರ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಎಂಬುವವರ ಮನೆ ಮತ್ತು ಕಾಫಿ ತೋಟವನ್ನು ಬಾಡಿಗೆಗೆ ತಂಡ ಪಡೆದಿತ್ತು.

ಧಾರವಾಹಿ ಸಂದರ್ಭದಲ್ಲಿ ಕಾಫಿ ತೋಟ ಸಾಕಷ್ಟು ಹಾನಿಗೀಡಾಗಿವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮುಖ್ಯಮಂತ್ರಿಗಳಿಗೆ ಮಾಲಿಕ ದೀಪಕ್ ಮಯೂರ್ ದೂರು ನೀಡಿದ್ದಾರೆ. ಧಾರವಾಹಿಗೆಂದು ಪಡೆದ ಮನೆ ಮತ್ತು ತೋಟಕ್ಕೆ ಮಾಡಿಕೊಂಡ ಒಪ್ಪಂದದಂತೆ ಹಣ ನೀಡದೆ ನಿರ್ಮಾಣ ತಂಡ ತಮಗೆ ಅನ್ಯಾಯ ಮಾಡಿದೆ. ಧಾರವಾಹಿ ನಿಂತುಹೋದ ನಂತರ ತಾವು ಹಣ ಕೇಳಿದಾಗ ನೀಡುತ್ತಿಲ್ಲ. ಕಾಫಿ ತೋಟ ಕೂಡ ಸಾಕಷ್ಟು ಹಾನಿಗೀಡಾಗಿದೆ. ಈ ಬಗ್ಗೆ ನ್ಯಾಯ ಕೊಡಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಈ ವಿಷಯ ನಟ ಕಿಚ್ಚ ಸುದೀಪ್ ಅವರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಏನು ಕ್ರಮ ಕೈಗೊಳ್ಳಿದೆ ಎಂದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com