ವಾಸು... ಚಿತ್ರದ ಶೀರ್ಷಿಕೆ ನನ್ನ ಡೈಲಾಗ್ ಆಗಿರಲಿದೆ: ನಿಶ್ವಿಕಾ ನಾಯ್ಡು

ನಾಯಕಿ ಪಾತ್ರವಿಲ್ಲದೆ ’ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರ ಸಂಪೂರ್ಣವಾಗುವುದೇ ಇಲ್ಲ ಎಂದು ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಹೇಳಿದ್ದಾರೆ.
ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು
ಬೆಂಗಳೂರು: ನಾಯಕಿ ಪಾತ್ರವಿಲ್ಲದೆ ’ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರ ಸಂಪೂರ್ಣವಾಗುವುದೇ ಇಲ್ಲ ಎಂದು ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಹೇಳಿದ್ದಾರೆ. ಅಜಿತ್ ವಾಸನ್ ಉಗ್ಗಿನ ನಿರ್ದೇಶನದ, ಅನೇಶ್ ತೇಜೇಶ್ವರ್ ನಾಯಕನಾಗಿರುವ ’ವಾಸು....’ ಚಿತ್ರ ಈ ವಾರ ತೆರೆ ಕಾಣುತ್ತಿದೆ.
"ಶೀರ್ಷಿಕೆಯು ನಾಯಕ ಪ್ರಧಾನವೆನ್ನಿಸಿದರೂ ಆದರೆ ಚಿತ್ರದಲ್ಲಿ ನಾನು ಇದೇ ಡೈಲಾಗ್ ಹೇಳಿದ್ದೇನೆ!. ಇಷ್ಟಕ್ಕೂ ನಾನು ಮೊದಲ ಬಾರಿಗೆ ಚಿತ್ರದ ಶೀರ್ಷಿಕೆ ಕೇಳಿದಾಗ ನಿರ್ದೇಶಕರು ಈ ಹೆಸರನ್ನೇ ಏಕೆ ಆಯ್ಕೆ ಮಾಡಿಕೊಂಡರೆಂದು ತಿಳಿಯಲಿಲ್ಲ. ಆದರೆ ಆಡಿಷನ್ ನಡೆಯುವಾಗ ತಿಳಿದು ಬಂದಂತೆ ಚಿತ್ರದಲ್ಲಿ ಇದು ನನ್ನ ಸಂಭಾಷಣೆಯ ಒಂದು ಸಾಲಾಗಿ ಬರುತ್ತದೆ. ನನ್ನ ಸಂಭಾಷನೇಯಲ್ಲಿ ಬರುವ ಸಾಲು ಚಿತ್ರದ ಶೀರ್ಷಿಕೆಯಾಗಿರುವುದು ನನಗೆ ಖುಷಿ ಕೊತ್ಟಿದೆ." ನಿಶ್ವಿಕಾ ಹೇಳಿದ್ದಾರೆ.
ಇದಾಗಲೇ ಕೀಂ ಚೈತನ್ಯ ನಿರ್ದೇಶನದ ’ಅಮ್ಮ ಐ ಲವ್ ಯು’ ನಲ್ಲಿ ಕಾಣಿಸಿಕೊಂಡಿರುವ ನಿಶ್ವಿಕಾಗೆ ’ವಾಸು....’  ಎರಡನೇ ಕನ್ನಡ ಚಿತ್ರ. ಆದರೆ ನಿಶ್ವಿಕಾಗೆ ನಾಯಕಿಯಾಗಿ ವಾಸು.... ಪ್ರಥಮ ಚಿತ್ರವಾಗಿರುವ ಕಾರಣ ಇದು ಅವರ ಜೀವನದಲ್ಲಿ ವಿಶೇಷ ಕ್ಷಣವಾಗಿದೆಯಂತೆ. "ಮೊದಲಿಗೆ ಈ ಆಫರ್ ಸಿಕ್ಕಾಗ ನನಗೆ ಉತ್ಸಾಹ ಜತೆಗೆ ಭಯವೂ ಆಗಿತ್ತು. ಏಕೆಂದರೆ ನಾನು ನಟನೆಯನ್ನು ನನ್ನ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದೆ ಎಂದು ನಿರ್ಧರಿಸುತ್ತಿದ್ದ ಸಮಯಕ್ಕೇ ನನಗೆ ಈ ಅವಕಾಶ ದೊರಕಿತ್ತು. ಮೊದಲ ದಿನ ಕ್ಯಾಮರಾ ಎದುರಿಸುವಾಗ ಮಾತ್ರ ನಿಜಕ್ಕೂ ತಳಮಳ ಉಂಟಾಗಿತ್ತು. ಸೆಟ್ ನಲ್ಲಿ ಎಲ್ಲರನ್ನೂ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆದರೆ ಅಂತಿಮವಾಗಿ ಎಲ್ಲರೂ ಸ್ನೇಹಿತರಾದರು "
ಕಮರ್ಷಿಯಲ್ ಚಿತ್ರದಲ್ಲಿ ನಾಯಕಿಗೆ ಸಿಕ್ಕುವ ಪ್ರಾಮುಖ್ಯತೆ ಏನು ಎಂದು ಪ್ರಶ್ನಿಸಲು "ಪ್ರತಿಯೊಬ್ಬ ಕಲಾವಿದೆಗೆ ಸಹ ಇದು ಪ್ರಮುಖವಾಗಿರುತ್ತದೆ" ಎನ್ನುವ ನಿಶ್ವಿಕಾಗೆ ವಾಸು.... ಅವರಲ್ಲಿನ ಎಲ್ಲಾ ಅಭಿನಯ ಕೌಶಲ್ಯಗಳನ್ನು ಬೆಳಕಿಗೆ ತರಲು ಅವಕಾಶ ಕೊಟ್ಟಿದೆಯಂತೆ. ಚಿತ್ರದಲ್ಲಿನ ನಾಯಕಿಯ ಪಾತ್ರಕ್ಕೆ ಹಲವು ಆಯಾಮಗಳಿದೆ ಎನ್ನುವ ಅವರು ಇದು ಕೇವಲ ನಿರ್ದೇಶಕನ ಮಟ್ಟಿಗೆ ನಾಯಕನ ಪ್ರೀತಿಗೆ ಪಾತ್ರವಾಗುವ ನಟನೆಯಷ್ಟೇ ಅಲ್ಲ ಬದಲಿಗೆ ನನ್ನ ವೃತ್ತಿ ಬದುಕಿಗೆ ಬೆಂಬಲವಾಗಬಹುದಾದ ಗಟ್ಟಿ ಪಾತ್ರವಾಗಿದೆ ಎನ್ನುತ್ತಾರೆ.
ನಾಯಕ ನಟ, ನಿರ್ಮಾಪಕರಗಿರುವ ಅನೀಶ್ ತೇಜೇಶ್ವರ್ ಕುರಿತು ಮಾತನಾಡಿದ ನಿಶ್ವಿಕಾ "ಕೆಲ ಬಾರಿ ಅವರು ಕಿರಿಕಿರಿ ಎಂದೆನಿಸಿದರೂ ಅವರೊಬ್ಬ ಜವಾಬ್ದಾರಿಯುತ ನಟ ಮತ್ತು ನಿರ್ಮಾಪಕ ಎಂದು ನಾನು ಭಾವಿಸುತ್ತೇನೆ. ಅವರು ಚಿತ್ರನಿರ್ಮಾಣದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನನಗೆ ಕ್ಯಾಮರಾ ಹಿಂದಿನ ಸ್ಕಿಲ್ ಗಳನ್ನು ಅರಿಯಲು ಬಹಳ ಸಹ್ಕಾರಿಯಾಗಿತ್ತು. ಸಿನಿಮಾ ಬಗ್ಗೆ ನನಗೆ ಉತ್ತಮ ತಿಳುವಳಿಕೆ ಪಡೆಯಲು ನನಗೆ ಇದು ಸಹಕಾರಿಯಾಗಿತ್ತು" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com