ಕೆ.ಮಂಜು, ರಕ್ಷಿತ್ ಶೆಟ್ಟಿಯಿಂದ ಸದ್ಯದಲ್ಲಿಯೇ ಚಿತ್ರಕ್ಕೆ ಚಾಲನೆ

ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡ ಒಪ್ಪಂದವೊಂದಕ್ಕೆ ಬದ್ಧರಾಗಿದ್ದಾರೆ ನಿರ್ಮಾಪಕ ಮಂಜು ಮತ್ತು...
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ
Updated on: 

ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡ ಒಪ್ಪಂದವೊಂದಕ್ಕೆ ಬದ್ಧರಾಗಿದ್ದಾರೆ ನಿರ್ಮಾಪಕ ಮಂಜು ಮತ್ತು ನಟ ರಕ್ಷಿತ್ ಶೆಟ್ಟಿ. ಅದು ಯಾವ ಸಿನಿಮಾ, ನಿರ್ದೇಶಕರು ಯಾರು ಎಂಬಿತ್ಯಾದಿಗೆ ನಿರ್ಮಾಪಕ ಮಂಜು ಉತ್ತರಿಸಿದ್ದಾರೆ.

ಯೋಗರಾಜ್ ಭಟ್ಟರು ನನಗೊಂದು ಕಥೆಯನ್ನು ವಿವರಿಸಿದ್ದಾರೆ. ಅದು ರಕ್ಷಿತ್ ಶೆಟ್ಟಿಗೆ ಹೊಂದಿಕೆಯಾಗುತ್ತದೆ ಎಂದು ಭಾವಿಸಿದ್ದೇನೆ. ನಾವೆಲ್ಲರೂ ಒಟ್ಟು ಸೇರಿದರೆ ಚಿತ್ರ ಮಾಡಬಹುದು. ಈಗ ರಕ್ಷಿತ್ ಶೆಟ್ಟಿ ಮತ್ತು ನಾನು ಸಿನಿಮಾವೊಂದನ್ನು ಮಾಡುತ್ತಿದ್ದೇವೆ ಎಂದು ಖಚಿತಪಡಿಸಿದರು.

ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ನಾಲ್ಕು ವರ್ಷಗಳ ಹಿಂದೆಯೇ ನಾವು ಒಟ್ಟು ಸೇರಬೇಕಾಗಿತ್ತು. ಈಗ ರಕ್ಷಿತ್ ಶೆಟ್ಟಿ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ ಕೂಡ ಮುಂದಿನ ವರ್ಷ ನಾವು ಒಟ್ಟಾಗಿ ಸಿನಿಮಾ ಮಾಡಲಿದ್ದೇವೆ ಎಂದರು.

ಕೆ ಮಂಜು ಅವರು ಇದೀಗ ತಮ್ಮ ಪುತ್ರನ ಪಡ್ಡೆಹುಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ನಂತರ ರವಿಚಂದ್ರನ್ ಅವರ ಚಿತ್ರವೊಂದು ಬಾಕಿಯಿದೆ. ರಕ್ಷಿತ್ ಶೆಟ್ಟಿಯವರು ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com