ಜಯಲಲಿತಾರನ್ನು 'ಸರ್ವಾಧಿಕಾರಿ'ಯಂತೆ ಬಿಂಬಿಸಿದ ತಮಿಳು ಬಿಗ್ ಬಾಸ್: ಕಮಲ್ ಹಾಸನ್ ವಿರುದ್ಧ ದೂರು

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ’ಸರ್ವಾಧಿಕಾರಿ’ ಎನ್ನುವಂತೆ ಚಿತ್ರಿಸಿದ್ದ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ
ಕಮಲ್ ಹಾಸನ್
ಕಮಲ್ ಹಾಸನ್
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ’ಸರ್ವಾಧಿಕಾರಿ’ ಎನ್ನುವಂತೆ ಚಿತ್ರಿಸಿದ್ದ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ.
ಬಿಗ್ ಬಾಸ್ ಸೀಜನ್ 2 (ತಮಿಳು)  ರಿಯಾಲಿಟಿ ಶೋ  ಎಪಿಸೋಡ್ ಒಂದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು "ಸರ್ವಾಧಿಕಾರಿಯಾಗಿ" ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ  ಪೊಲೀಸರಿಗೆ ದೂರು ನೀಡಲಾಗಿದೆ. ಈ ಮೂಲಕ ಹಿರಿಯ ನಟ ಕಮಲ್ ಹಾಸನ್ ಇನ್ನೊಮ್ಮೆ ವಿವಾದದ ಕೇಂದ್ರವಾಗಿದ್ದಾರೆ.
ವಕೀಲೆ ಲೌಸಲ್. ರಮೇಶ್ ಈ ದೂರು ನಿಡಿದ್ದು "ಮಕ್ಕಳ್‌ ನೀಧಿ ಮೈಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಈ ರಿಯಾಲಿಟಿ ಶೋ ಅನ್ನು ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಳ್ಳುತ್ತಿದ್ದಾರೆ.ಅವರು ರಿಯಾಲಿಟಿ ಶೋ ನಲ್ಲಿ ಜಯಲಲಿತಾ ವರನ್ನು"ಕೀಳಾಗಿ" ಚಿತ್ರಿಸಿದ್ದಾರೆ. ಕಮಲ್ ಹಾಗೂ ಈ ಕಾರ್ಯಕ್ರಮದ ನಿರ್ಮಾಪಕರು ಮಾಜಿ ಮುಖ್ಯಮಂತ್ರಿ "ಅಮ್ಮ" ನನ್ನು ಸರ್ವಾಧಿಕಾರಿ ಎನ್ನುವಂತೆ ತೋರಿಸಲು ಯತ್ನಿಸಿದ್ದಾರೆ.ಹೀಗಾಗಿ ಈ ಕಾರ್ಯಕ್ರಮವನ್ನು ನಿಷೇಧಿಸಬೇಕು" ಎಂದಿದ್ದಾರೆ.
ತಮಿಳು ಬಿಗ್ ಬಾಸ್ ರಿಯಾಲಿಟಿ ಶೋ ಸಂಚಿಕೆಯೊಂದರಲ್ಲಿ ಒಂದು ನಿರ್ದಿಷ್ಟ ಟಾಸ್ಕ್ ಮಾಡುತ್ತಿರುವಾಗ ಕಮಲ್ "ರಾಜ್ಯವನ್ನಾಳಿದ್ದ ಸರ್ವಾಧಿಕಾರಿಗಳ ಗತಿ ಏನಾಯಿತೆನ್ನುವುದು ನೀನು ಬಲ್ಲೆಯಾ?" ಎಂದು ಕೇಳಿದ್ದರು. ಆ ಹೇಳಿಕೆಯು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನೇ ಕುರಿತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆ ನಿರ್ದಿಷ್ಟ ಸಂಚಿಕೆಯಲ್ಲಿ ಮನೆಯ ನಿವಾಸಿಯೊಬ್ಬರು ಸರ್ವಾಧಿಕಾರಿಯಂತೆ ವರ್ತಿಸುವ ಟಾಸ್ಕ್ ಇದ್ದಿತ್ತು. ಇದರಲ್ಲಿ ಐಶ್ವರ್ಯಾ ದತ್ತಾ ಸರ್ವಾಧಿಕಾರಿಯ ಪಾತ್ರ ನಿರ್ವಹಿಸುವ ಅಧಿಕಾರ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com