ರಾಜು ಜೇಮ್ಸ್ ಬಾಂಡ್ ಗೆ ಮೃದುಲಾ ನಾಯಕಿ

ರಾಜು ಜೇಮ್ಸ್ ಬಾಂಡ್ ಗೆ ನಾಯಕಿ ಸಿಕ್ಕಿದ್ದಾಳೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಚಿತ್ರದಲ್ಲಿ ರಾಜು ಕನ್ನಡ...
ದೀಪಕ್ ಮಧುವನಹಳ್ಳಿ, ಮೃದುಲಾ ಮತ್ತು ಗುರುನಂದನ್
ದೀಪಕ್ ಮಧುವನಹಳ್ಳಿ, ಮೃದುಲಾ ಮತ್ತು ಗುರುನಂದನ್
Updated on

ರಾಜು ಜೇಮ್ಸ್ ಬಾಂಡ್ ಗೆ ನಾಯಕಿ ಸಿಕ್ಕಿದ್ದಾಳೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಚಿತ್ರದಲ್ಲಿ ರಾಜು ಕನ್ನಡ ಮೀಡಿಯಂ ಖ್ಯಾತಿಯ ಗುರುನಂದನ್ ನಟಿಸುತ್ತಿದ್ದಾರೆ. ಉತ್ತರ ಕರ್ನಾಟಕ ಹುಡುಗಿಯ ಪಾತ್ರಕ್ಕೆ ನಾಯಕಿ ಹುಡುಕಾಟ ನಡೆಸುತ್ತಿದ್ದ ಚಿತ್ರತಂಡ ಆಡಿಶನ್ ಬಳಿಕ ಮೃದುಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಪಂಜಾಬ್ ನಲ್ಲಿ ನಡೆದ ಬ್ಯಾಂಕ್ ದರೋಡೆಯ ನೈಜ ಘಟನೆಯನ್ನಾಧರಿಸಿದ ಚಿತ್ರ ಇದಾಗಿದ್ದು ಕನ್ನಡ ಪ್ರೇಕ್ಷಕರಿಗೆ ತಕ್ಕಂತೆ ಬದಲಾವಣೆ ಮಾಡಲಾಗುತ್ತದೆ.

ಕರ್ಮ ಬ್ರೊ ನಿರ್ಮಾಣದಲ್ಲಿ ಚಿತ್ರ ತಯಾರಾಗುತ್ತಿದ್ದು ನಾಳೆ ಮುಹೂರ್ತ ನಡೆಯಲಿದೆ. ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಯಾಮರಾಕ್ಕೆ ಚಾಲನೆ ನೀಡಲಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಷ್ ಕ್ಲಾಪ್ ಮಾಡಲಿದ್ದಾರೆ. ಜಿ ಟಿ ದೇವೇಗೌಡರಿಂದ ಟೀಸರ್ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ ಮೊದಲ ವಾರದಿಂದ ಚಿತ್ರ ಶೂಟಿಂಗ್ ಪ್ರಾರಂಭವಾಗಲಿದೆ.

ಅನಿವಾಸಿ ಭಾರತೀಯರಾದ ಕಿರಣ್ ಭರ್ತೂರ್ ಮತ್ತು ಮಂಜುನಾಥ್ ವಿಶ್ವಕರ್ಮ ಚಿತ್ರ ತಯಾರಿಸುತ್ತಿದ್ದು ರಾಜು ಜೇಮ್ಸ್ ಬಾಂಡ್ ಗೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಜಗದೀಶ್ ನಾಡನಳ್ಳಿ ಬರೆಯಲಿದ್ದಾರೆ. ಮನೋಹರ್ ಜೋಶಿ ಅವರ ಛಾಯಾಗ್ರಹಣ ಮತ್ತು ಸಂಗೀತ ಅನೂಪ್ ಸೀಳಿನ್ ಮತ್ತು ಅಕ್ಷಯ್ ಪಿ ರಾವ್ ಸಂಕಲನ ಒದಗಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com