'ಮಂದೊಂದು ದಿನ ನಾನು ರಾಜಕೀಯಕ್ಕೆ ಬರುತ್ತೇನೆ, ಅದಕ್ಕೂ ಮುನ್ನ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು'

ನಟ ನಿಖಿಲ್ ಕುಮಾರ್ ಕುಟುಂಬಕ್ಕೆ ಬಹು ದೊಡ್ಡ ರಾಜಕೀಯ ಹಿನ್ನೆಲೆಯಿದೆ. ತಾತ ದೇವೇಗೌಡ ಮಾಜಿ ಪ್ರಧಾನಿ, ತಂದೆ ಕುಮಾರ ಸ್ವಾಮಿ ರಾಜ್ಯದ ...
ನಿಖಿಲ್ ಕುಮಾರ್
ನಿಖಿಲ್ ಕುಮಾರ್
Updated on
ಬೆಂಗಳೂರು:  ನಟ ನಿಖಿಲ್ ಕುಮಾರ್ ಕುಟುಂಬಕ್ಕೆ ಬಹು ದೊಡ್ಡ ರಾಜಕೀಯ ಹಿನ್ನೆಲೆಯಿದೆ. ತಾತ ದೇವೇಗೌಡ ಮಾಜಿ ಪ್ರಧಾನಿ, ತಂದೆ ಕುಮಾರ ಸ್ವಾಮಿ ರಾಜ್ಯದ ಮುಖ್ಯಮಂತ್ರಿ, ತಾಯಿ ಅನಿತಾ ಕೂಡ ರಾಜಕಾರಣಿ, ಸದ್ಯ ಮುಖ್ಯಮಂತ್ರಿಯ ಮಗನಾಗಿ ತಮಗಿರುವ ಒತ್ತಡ ಹಾಗೂ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಮುಂದಾಗಿದ್ದಾರೆ,. ಜನ ನನ್ನತ್ತ ನೋಡುತ್ತಿದ್ದಾರೆ, ಇದು ನನ್ನನ್ನು ಜವಬ್ದಾರಿ ಹೊರಿಸುತ್ತಿದೆ ಎಂದು ನನಗನ್ನಿಸುತ್ತಿದೆ ಎಂದು ನಿಖಿಲ್ ಹೇಳಿದ್ದಾರೆ.
ಆದರೆ ಸಿನಿಮಾ ನಿಖಿಲ್ ಮೊದಲ ಆದ್ಯತೆ, ತಮ್ಮ ತಂದೆ ಕುಮಾರ ಸ್ವಾಮಿ ನಿರ್ಮಾಪಕರಾಗಿದ್ದವರು ಚನ್ನಾಂಬಿಕಾ ಪ್ರೊಡಕ್ಷನ್ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ, ಹೀಗಾಗಿ ಸಿನಿಮಾ ಕ್ಷೇತ್ರದ ಕಡೆಗೆ ನಿಖಿಲ್ ಒಲವು ಹೆಚ್ಚಲು ತಮ್ಮ ತಂದೆಯ ಬೆಂಬಲ ಕೂಡ ಕಾರಣವಾಗಿದೆ. 
ಸದ್ಯ ಸೀತಾರಾಮ ಕಲ್ಯಾಣ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ. ಅವರ ಹೀರೋ ಆಗುವ ಕನಸು ರಾತ್ರೋರಾತ್ರಿ ನಡೆದದ್ದಲ್ಲಾ, ಅದಕ್ಕಾಗಿ ಅವರು ಕಠಿಣ ಶ್ರಮ ಪಟ್ಟಿದ್ದಾರೆ, ಸಿನಿಮಾ ಇಂಡಸ್ಚ್ರಿಗೆ ಕಾಲಿಡುವ ಮುನ್ನ ತರಬೇತಿ ಪಡೆದಿದ್ದಾರೆ, ನಾನು ಕಮರ್ಷಿಯಲ್ ಹೀರೋ ಆಗಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿದೆ, ಜೊತೆಗೆ ಹೆಚ್ಚಿನ ಪ್ರಮಾಣದ ಪ್ರೇಕ್ಷಕರನ್ನು ತಲುಪಬೇಕು,  ನಾನು ಸೂಪರ್ ಸ್ಟಾರ್ ಆಗಬೇಕೋ ಅಥವಾ ಉತ್ತಮ ನಟನಾಗಬೇಕೋ ಎಂದು ಒಂದು ವೇಳೆ ನೀವು ನನ್ನ ಪ್ರಶ್ನಿಸಿದರೇ , ಯಾವುದೇ ಹಿಂಜರಿಕೆಯಿಲ್ಲದೇ ನಾನು ಎರಡನೇಯದನ್ನು ಒಪ್ಪಿಕೊಳ್ಳುತ್ತೇನೆ. ನೀವು ಉತ್ತಮ ನಟನಾಗಬೇಕಾದರೇ ಡ್ಯಾನ್ಸ್, ಆ್ಯಕ್ಷನ್ ಹಾಗೂ ಭಾವನೆಗಳನ್ನು ವ್ಯಕ್ತ ಪಡಿಸುವಿಕೆ ಚೆನ್ನಾಗಿ ಬಂದರೆ ಮಾತ್ರ ನೀವು ಉತ್ತಮ ನಟನಾಗಲು ಸಾಧ್ಯ, ಪ್ರತಿ ಸಿನಿಮಾದಲ್ಲಿ ಉತ್ತಮವಾದದನ್ನು ನೀಡುವ ಕಡೆಗೆ ನನ್ನ ಗಮನ ಕೇಂದ್ರೀಕರಿಸುತ್ತೇನೆ.
ತಮ್ಮ ಮೊದಲ ಚಿತ್ರದ ನಂತರ ಈಗ ತಮ್ಮ ನಟನೆಯಲ್ಲಿ ಮತ್ತಷ್ಟು ಸುಧಾರಿಸಿರುವುದಾಗಿ ನಿಖಿಲ್ ಒಪ್ಪಿಕೊಳ್ಳುತ್ತಾರೆ, ಅದು ನನಗೆ ಸಂತೋಷ ನೀಡುತ್ತದೆ, ಸೀತಾರಾಮ ಕಲ್ಯಾಣ ಆ್ಯಕ್ಷನ್ ಸಿನಿಮಾ, ಮತ್ತೊಂದು ಟೀಸರ್ ನಲ್ಲಿ ನನ್ನ ಕಾರ್ಯಕ್ಷಮತೆ ಬಗ್ಗೆ ನೋಡುವಿರಿ, ಇದು ಮಾಸ್ ಪ್ರೇಕ್ಷಕರನ್ನು  ಹೇಗೆ ತಲುಪಬೇಕು ಎಂಬ ಪ್ರಯೋಗ ಮಾಡಲು ಇದು ಉತ್ತಮ ಸಮಯವಾಗಿದೆ ಎಂದು ಹೇಳಿದ್ದಾರೆ.
ನನ್ನನ್ನು ನಟನಾಗಿ ತರಬೇತಿ ಮಾಡಿವರಿಗೆ ಈ ಎಲ್ಲಾ ಕ್ರೆಡಿಟ್ ಸಲ್ಲಬೇಕು. ವಿಶೇಷವಾಗಿ ನಿರ್ದೇಶಕ ಹರ್ಷ ಮತ್ತು ಸ್ಟಂಟ್ ಮಾಸ್ಟರ್  ರಾಮ್ ಲಕ್ಷ್ಮಣ್ ಅವರಿಗೆ, ಅವರ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾರೆ, ಈ ಸಿನಿಮಾದಲ್ಲಿ ನೀವು ವಿಭಿನ್ನವಾದ ನಿಖಿಲ್ ನನ್ನು ಕಾಣುತ್ತೀರಿ ಎಂದು ಆತ್ಮವಿಶ್ವಾಸದಿಂದ ಹೇಳುವೆ., ಈ ಸಿನಿಮಾದಲ್ಲಿ ನಿಖಿಲ್ ರಾಜಕಾರಣಿ ಮಗ ಮತ್ತು ನಟ ಎರಡು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ, ಮುಂಬರಕುವ ದಿನಗಳಲ್ಲಿ ರಾಜಕೀಯ ಸೇರುವ ಇರಾದೆ ಹೊಂದಿರುವ ನಿಖಿಲ್ ಅದರ ಮೊದಲ ಹೆಜ್ಜೆ ಇಟ್ಟಿದ್ದಾರೆ,. ಮುಂದೊಂದು ದಿನ ರಾಜಕಾರಣದ ಭಾಗವಾಗಿರುವೆ,ಅದಕ್ಕೂ ಮುನ್ನ ನಾನು ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಈಗಾಗಲೇ ಹಲವು ನಿರ್ದೇಶಕರುಗಳ ಜೊತೆ ಚರ್ಚೆ ನಡೆದಿದೆ. ನಾನು ಯುವ ನಿರ್ದೇಶಕರುಗಳ ಜೊತೆ  ಹಾಗೂ ಅಭಿರುಚಿ ಹೊಂದಿರುವ ನಿರ್ದೇಶಕರುಗಳ ಜೊತೆ ಕೆಲಸ ಮಾಡಲು ಬಯಸುತ್ತೇನೆ, ನನಗೆ ಕೆಲಸ ಮಾಡುವಾಗ ಅಹಂಕಾರ ಅಡ್ಡ ಬರುವುದು ಇಷ್ಟವಿಲ್ಲ, ಸಿನಿಮಾ ಆಗಲಿ ರಾಜಕಾರಣ ಆಗಲಿ , ನನಗೆ ನನ್ನ ತಾಯಿ ಮತ್ತು ತಂದೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ, ಅದುಪ ನನ್ನ ಅದೃಷ್ಟ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com