ನಟ ರಿಷಿ
ಸಿನಿಮಾ ಸುದ್ದಿ
ಸಿನಿಮಾ ಆಯ್ಕೆಯಲ್ಲಿ ನಿಧಾನವಾದರೂ ಪ್ರಧಾನವಾಗಿದ್ದೇನೆ; ನಟ ರಿಷಿ
ಸಿನಿಮಾಗಳ ಆಯ್ಕೆ ವಿಚಾರದಲ್ಲಿ ನಟ ರಿಷಿ ನಿಧಾನವಾಗಿ ಜಾಗ್ರತೆಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ...
ಸಿನಿಮಾಗಳ ಆಯ್ಕೆ ವಿಚಾರದಲ್ಲಿ ನಟ ರಿಷಿ ನಿಧಾನವಾಗಿ ಜಾಗ್ರತೆಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆಪರೇಶನ್ ಅಲಮೇಲಮ್ಮ ಮೂಲಕ ಗುರುತಿಸಿಕೊಂಡಿರುವ ಅವರ ಸಿನಿಮಾಗಳು ಯಾವುದೂ ನಂತರ ಬಿಡುಗಡೆಯಾಗಲಿಲ್ಲ. ಈ ಮಧ್ಯೆ ಹೇಮಂತ್ ಆರ್ ರಾವ್ ಅವರ ಕವಲುದಾರಿಯ ಚಿತ್ರೀಕರಣ ಮುಗಿಸಿದ್ದಾರೆ.
ಇನ್ನೊಂದೆಡೆ ಜಾಕಬ್ ವರ್ಗೀಸ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ನಿಧಾನ ಎಂದು ಅನಿಸಿದರೂ ಸರಿಯಾದ ದಾರಿಯಲ್ಲಿಯೇ ಹೋಗುತ್ತಿದ್ದೇನೆ ಎನಿಸುತ್ತದೆ. ಕವಲುದಾರಿಯ ಟೀಸರ್ ಬಿಡುಗಡೆಯಾಗಬೇಕಿದೆ. ಇದನ್ನು ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಕುತೂಹಲನಾಗಿದ್ದೇನೆ ಎನ್ನುತ್ತಾರೆ ರಿಷಿ.
ಕವಲುದಾರಿ ದಸರಾ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತೊಂದು ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆಯಲ್ಲಿ ರಿಷಿ ಇದ್ದಾರೆ.

