ಒಂದೆಡೆ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದರೆ, ಮತ್ತೊಂದೆಡೆ ಯುಎಫ್ಒ ಸಮಸ್ಯೆಯಿಂದಾಗಿ ಕೆಲವೆಡೆ ಪ್ರದರ್ಶನವೇ ಸಾಧ್ಯವಾಗಿಲ್ಲ. 80 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಕೇವಲ 23 ಸೆಂಟರ್ ಗಳಲ್ಲಿ ಮಾತ್ರ ಚಿತ್ರ ರಿಲೀಸ್ ಆಗಿದೆ. ಅಸಮಾಧಾನಗೊಂಡಿರುವ ಚಿತ್ರ ತಂಡ ಫಿಲ್ಮ್ ಚೇಂಬರ್ ಗೆ ದೂರು ನೀಡಲು ಮುಂದಾಗಿದೆ.