ನಟ ಯಶ್
ಸಿನಿಮಾ ಸುದ್ದಿ
2 ವರ್ಷಗಳ ನಂತರ ಗಡ್ಡಕ್ಕೆ ಕತ್ತರಿ ಹಾಕಿದ ರಾಕಿಂಗ್ ಸ್ಟಾರ್: ಯಶ್ ನ್ಯೂ ಲುಕ್
ಎರಡು ವರ್ಷಗಳ ನಂತರ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ....
ಬೆಂಗಳೂರು: ಎರಡು ವರ್ಷಗಳ ನಂತರ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.
ಯಶ್ ಕೆಜಿಎಫ್ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ತಲೆ ಕೂದಲನ್ನು ಬೆಳೆಸಿಕೊಂಡಿದ್ದರು. ಯಶ್ ಅವರ ಈ ಹೊಸ ವೇಷ ನೋಡಿ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದರೆ.
ಯಶ್ ತಮ್ಮ ಗಡ್ಡ ಹಾಗೂ ಉದ್ದನೆಯ ಕೂದಲಿಗೆ ಕತ್ತರಿ ಹಾಕುತ್ತಿರುವ ವಿಡಿಯೋವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ರಾಧಿಕಾ ಈಗ ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಜೊತೆ ನೀವೆಲ್ಲರೂ ಕಾಯುತ್ತಿರುವ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಮುಕ್ತಿ ಸಿಗುತ್ತಿದೆ. ನನ್ನ ಗಂಡ ಹೇಗೆ ಕಾಣಿಸುತ್ತಿದ್ದರು ಎಂದು ನನಗೆ ನೆನಪಿಲ್ಲ. ಸದ್ಯ ಕಿರಾತಕ ಚಿತ್ರತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಂದಾಗಿ ಯಶ್ ತಮ್ಮ ಗಡ್ಡ ಹಾಗೂ ಉದ್ದನೆಯ ಕೂದಲನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ನನಗೆ ನನ್ನ ಗಡ್ಡ ತೆಗೆಯಲು ಇಷ್ಟವಿಲ್ಲ. ಏಕೆಂದರೆ ಎರಡು ವರ್ಷದಿಂದ ನನ್ನ ಗಡ್ಡ ನನ್ನ ಜೊತೆಯಲ್ಲೇ ಇತ್ತು. ಆದರೆ ನನ್ನ ಗಡ್ಡ ಬೇರೆಯವರಿಗೆ ಇಷ್ಟವಿಲ್ಲ. ಹಾಗಾಗಿ ನಾನು ಗಡ್ಡ ತೆಗೆಯುತ್ತಿದ್ದೀನಿ. ಗಡ್ಡ ಇರಲಿ ಎಂದು ನಿರ್ದೇಶಕರ ಹತ್ತಿರ ಮನವಿ ಮಾಡಿಕೊಂಡೆ. ಆದರೆ ಅದಕ್ಕೆ ಅವರು ಸಮ್ಮತಿಸಲಿಲ್ಲ. ಸದ್ಯ ನಾನು ಗಡ್ಡ ತೆಗೆಯುವುದರಿಂದ ಎಲ್ಲರಿಗೂ ಖುಷಿಯಾಗುತ್ತಿದೆ. ಆದರೆ ನನಗೆ ಬೇಜರಾಗುತ್ತಿದೆ ಎಂದು ಯಶ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ