ಜಲಮಾಲಿನ್ಯದ ಕುರಿತು ಜಾಗೃತಿಗಾಗಿ ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

ಕೆರೆಗಳ ಮಾಲಿನ್ಯದ ಕುರಿತಂತೆ ಜನಸಾಮಾನ್ಯರಲ್ಲಿ ಜಾಗೃತಿ ಮುಡಿಸುವ ಸಲುವಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್....
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
ಬೆಂಗಳೂರು: ಕೆರೆಗಳ ಮಾಲಿನ್ಯದ ಕುರಿತಂತೆ ಜನಸಾಮಾನ್ಯರಲ್ಲಿ ಜಾಗೃತಿ ಮುಡಿಸುವ ಸಲುವಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಸಿಲ್ಲಿಕಾನ್ ಸಿಟಿ ಬೆಂಗಳೂರು ಇಲ್ಲಿನ ಕೆರೆಗಳಿಗಾಗಿ ಹೆಸರಾಗಿದ್ದು ಇತ್ತೀಚೆಗೆ ಜನರ ನಿರ್ಲಕ್ಷ ದ ಕಾರಣ ಹಲವು ಕೆರೆಗಳು ಮಲಿನವಾಗಿದೆ.ಪರಿಸರವಾದಿಗಳು ಮತ್ತು ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ನಗರದಲ್ಲಿನ 262 ಕೆರೆಗಳ ಸುರಕ್ಶ್ಘತೆಗೆ ಕ್ರಮ ಕೈಗೊಳ್ಳಬೇಕೆಂದುಕರ್ನಾಟಕಕ್ಕೆ ಕರೆ ನೀಡಿದವು.  ಅಲ್ಲದೆ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿ ಎನ್‍ಜಿಟಿ ತೀರ್ಪು ಸಹ ನೀಡಿತ್ತು. ಇದೀಗ ಈ ವಿಚಾರ ಸಂಬಂಧ ಜನರ ಮನಸೆಳೆಯಲು ನಟಿ ರಶ್ಮಿಕಾ ತಾವು ಕೆರೆಯೊಳಗೆ ಫೋಟೋಶೂಟ್ ಮಡಿಸಿಕೊಂಡಿದ್ದಾರೆ.

ಪ್ರಮುಖ ಕನ್ನಡ ಮತ್ತು ತೆಲುಗು ಚಲನಚಿತ್ರ ನಟ ರಶ್ಮೀಕಾ ಮಂಡಣ್ಣ ನಗರದ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಮಾಲಿನ್ಯಕ್ಕೆ ಹೆಸರಾದ ಬೆಳ್ಳಂದೂರು ಕೆರೆಯಲ್ಲಿ ಅಂಡರ್‍ವಾಟರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ನಗರದ ಬೃಹತ್ ಕೆರೆಗಳಲ್ಲಿ ಒಂದಾದ ಬೆಳ್ಳಂದೂರು ಕೆರೆ ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ ತ್ಯಾಜ್ಯ ಸೇರಿದ್ದ ಕಾರಣ ಮಾಲಿನ್ಯಕ್ಕೆ ಈಡಾಗಿದ್ದು ಇತ್ತೀಚೆಗೆ ರಾಸಾಯನಿಕಗಳಿಂದ ವಿಪರೀತ ನೊರೆ ಹಾಗೂ ಬೆಂಕಿಯೂ ತೋರಿ ಬಂದಿತ್ತು.

ರಶ್ಮಿಕಾ ತಾವು ಕೆರೆಯಲ್ಲಿ ತೆಗೆಸಿದ್ದ ಫೋಟೋಗಳನ್ನು ಟ್ವಿಟ್ಟರ್ ಹಾಗೂ ಇನ್ ಸ್ಟಾಗ್ರಾಮ್ ಗಳಲ್ಲಿ ಹಂಚಿಕೊಂಡಿದ್ದಾರೆ. ಸನ್ಮತಿ ಡಿ. ಪ್ರಸಾದ್ ನಿರ್ದೇಶಿಸಿದ್ದ ಈಫೋಟೋಶೂಟ್ ಜತೆಗೆ ಟ್ವೀಟ್ ಮಾಡಿರುವ ರಶ್ಮಿಕಾ "ಕೆರೆಯ ದುಸ್ಥಿತಿಯನ್ನು ಕಂಡು ನನ್ನ ಹೃದಯ ಒಡೆಯಿತು ಎಂದು ಹೇಳಿಕೊಂಡಿದ್ದಾರೆ.

"ನಾನು ಬೆಳ್ಳಂದೂರು ಕೆರೆಯಲ್ಲಿ ಶೂಟ್ ಮಾಡುವವರೆಗೂ ನನಗೆ ಈ ಕೆರೆ ಬಗ್ಗೆ ಗೊತ್ತಿರಲಿಲ್ಲ. ಇದು ನಿಜವಾಗಿಯೂ ನನ್ನ ಹೃದಯವನ್ನು ಒಡೆಯಿತು. ಈಗ ಬೆಳ್ಳಂದೂರು ಕೆರೆ ಇರುವ ಸ್ಥಿತಿಗೆ ಮುಂದೆ ಬೇರೆ ಕೆರೆಗಳು ಬರಬಹುದು" ಎಂದು ನಟಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com