'ಚಂಬಲ್' ಹೀರೋ ಆದ ಸತೀಶ್ ನೀನಾಸಂ, ಚಿತ್ರದಲ್ಲಿ 25 ರಂಗ ಕಲಾವಿದರ ಅಭಿನಯ!
ಅಯೋಗ್ಯ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಸತೀಶ್ ನೀನಾಸಂ ಇದೀಗ "ಚಂಬಲ್" ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೇಕಬ್ ವರ್ಗೀಸ್ ಅವರ ಈ ಚಿತ್ರದ ಶೂಟಿಂಗ್ ಇದಾಗಲೇ ಪೂರ್ಣವಾಗಿದ್ದು ....
ಬೆಂಗಳೂರು: ಅಯೋಗ್ಯ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಸತೀಶ್ ನೀನಾಸಂ ಇದೀಗ "ಚಂಬಲ್" ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜೇಕಬ್ ವರ್ಗೀಸ್ ಅವರ ಈ ಚಿತ್ರದ ಶೂಟಿಂಗ್ ಇದಾಗಲೇ ಪೂರ್ಣವಾಗಿದ್ದು ಮುಂದಿನ ವಾರ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ಸೋನು ಗೌಡ ನಾಯಕಿಯಾಗಿರುವ ಈ ಚಿತ್ರದಲ್ಲಿ ಕಿಶೋರ್, ಪವನ್ ಕುಮಾರ್ ಮತ್ತು ರೋಜರ್ ನಾರಾಯಣ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.
ಇನ್ನೂ ವಿಶೇಷವೆಂದರೆ "ಚಂಬಲ್" ಚಿತ್ರದಲ್ಲಿ ಸತೀಶ್ ಜತೆಗೆ ಇನ್ನೂ ಸುಮಾರು 25 ನೀನಾಸಂ ಸಂಸ್ಥೆಯ ರಂಗ ಕಲಾವಿದರು ತೆರೆ ಹಂಚಿಕೊಳ್ಳುತ್ತಿದ್ದಾರೆ.ನೀನಾಸಂ ರಂಗ ಸಂಸ್ಥೆಯ ಮುಖ್ಯಸ್ಥರಾದ ಚಿದಂಬರ ರಾವ್ ಜಂಬೆ ಅವರೂ ಸಹ ಚಿತ್ರದಲ್ಲಿ ಪಾತ್ರ ವಹಿಸಿರುವುದು ಗಮನಾರ್ಹ.
ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ ಸಿ. ಸ್ಯಾಮ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸಶಿಕುಮಾರ್ ಛಾಯಾಗ್ರಹಣವಿದೆ. ಇನ್ನು ಚಿತ್ರ ನಿರ್ದೇಶಕ ಜೇಕಬ್ ತಮ್ಮ ಸ್ವಂತ ಬ್ಯಾನರ್ ನಲ್ಲಿಯೇ ಈ ಚಿತ್ರ ತಯಾರಿಸಿದ್ದಾರೆ.