ಖ್ಯಾತ ಹಿನ್ನೆಲೆ ಗಾಯಕ ಹರಿಹರನ್ ಗೆ ಆಳ್ವಾಸ್‌ ವಿರಾಸತ್‌ 2019 ಪ್ರಶಸ್ತಿ

ಖಾತ ಹಿನ್ನೆಲೆ ಗಾಯಕ, ಪದ್ಮಶ್ರೀ ಪುರಸ್ಕೃತರಾದ ಹರಿಹರನ್ ಅವರಿಗೆ ಆಳ್ವಾಸ್‌ ವಿರಾಸತ್‌ 2019 ಪ್ರಶಸ್ತಿ ಲಭಿಸಿದೆ.
ಹರಿಹರನ್
ಹರಿಹರನ್
ಮೂಡಬಿದಿರೆ: ಖಾತ ಹಿನ್ನೆಲೆ ಗಾಯಕ, ಪದ್ಮಶ್ರೀ ಪುರಸ್ಕೃತರಾದ ಹರಿಹರನ್ ಅವರಿಗೆ ಆಳ್ವಾಸ್‌ ವಿರಾಸತ್‌ 2019 ಪ್ರಶಸ್ತಿ ಲಭಿಸಿದೆ.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿವರ್ಷ ನಡೆಸುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಈ ಬಾರಿ 25 ನೇ ವರ್ಷ ಆಚರಿಸುತ್ತಿದೆ. ಈ ಸಾಲಿನ ಕಾರ್ಯಕ್ರಮವು 2019 ಜನವರಿ 4 ರಿಂದ 6 ರವರೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಹರಿಹರನ್ ಅವರೊಗೆ ಅವರಿಗೆ ಆಳ್ವಾಸ್‌ ವಿರಾಸತ್‌ 2019 ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ಡಾ. ಮೋಹನ್ ಆಳ್ವ ಹೇಳಿದ್ದಾರೆ.
ಹಿಂದಿ , ತಮಿಳು, ಮಲಯಾಳಂ, ಕನ್ನಡ, ಮರಾಠಿ, ಭೋಜಪುರಿ ಮತ್ತು ತೆಲುಗು ಚಿತ್ರರಂಗದ ಹಿನ್ನೆಲೆಗಾಯಕರಾಗಿ ಗುರುತಿಸಿಕೊಂಡಿರುವ ಹರಿಹರನ್ ಪ್ರಸಿದ್ಧ ಗಜಲ್ ಗಾಯಕರೂ, ಮತ್ತು ಭಾರತೀಯ ಫ್ಯೂಷನ್ ಸಂಗೀತದ ಆದ್ಯಪ್ರವರ್ತಕರಲ್ಲಿ ಒಬ್ಬರೂ ಹೌದು ತಿರುವನಂತಪುರಂ ಹರಿಹರನ್ ಅನಂತ ಸುಬ್ರಮಣ್ಯನ್ ಅವರು ಹರಿಹರನ್ ಎಂದೇ ಪ್ರಖ್ಯಾತರಾದವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com