ಕಾನೂನು ಎತ್ತಿ ಹಿಡಿಯುವ ವಕೀಲರಿಂದ ಪ್ರೀತಿ ಪಾಠ ಹೇಳಿಸುತ್ತಿದ್ದಾರೆ ಸುಧೀರ್ ಶಾನ್ ಬೋಗ್!

ನಯ್ ರಾಜ್ ಕುಮಾರ್ ಮತ್ತು ಲತಾ ಹೆಗಡೆ ಅಭಿನಯದ ಅನಂತ್ v/s ನುಸ್ರುತ್ ಸಿನಿಮಾ ನಿರ್ದೇಶನದ ಮೂಲಕ ಸುಧೀರ್ ಶಾನ್ ಭೋಗ್ ಸ್ಯಾಂಡಲ್ ವುಡ್ ಗೆ ,...
ಅನಂತ್ v/s ನುಸ್ರುತ್ ಸಿನಿಮಾ ಸ್ಟಿಲ್
ಅನಂತ್ v/s ನುಸ್ರುತ್ ಸಿನಿಮಾ ಸ್ಟಿಲ್
ಬೆಂಗಳೂರು: ವಿನಯ್ ರಾಜ್ ಕುಮಾರ್ ಮತ್ತು ಲತಾ ಹೆಗಡೆ ಅಭಿನಯದ ಅನಂತ್ v/s ನುಸ್ರುತ್ ಸಿನಿಮಾ ನಿರ್ದೇಶನದ ಮೂಲಕ ಸುಧೀರ್ ಶಾನ್ ಭೋಗ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.
ಈ ಸಿನಿಮಾ ಮೂಲಕ ಪ್ರೀತಿಯ ಕಥೆ ಹೇಳಲು ಕಾತುರರಾಗಿದ್ದಾರೆ, ತಮ್ಮ ಕಥೆಯನ್ನು ದೃಶ್ಯಗಳ ಮೂಲಕ ವಿವರಿಸಿದ್ದಾರೆ. ದೃಶ್ಯ ಮಾಧ್ಯಮ ಕಥೆ ಹೇಳಲು ಒಂಮದು ಅದ್ಭುತ ಸಾಧನ ಎಂದು ನಂಬಿರುವ ಸುಧೀರ್, ರಾಷ್ಟ್ರೀಯ ಪ್ರಶಸ್ತಿ ಪಡೆದ ತುಳು ಸಿನಿಮಾ ಮಡಿಪು ನಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮದ ಕಥೆಯ ಈ ಸಿನಿಮಾದಲ್ಲಿ ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ, ಗಂಡು ಮತ್ತು ಹೆಣ್ಣಿನ ನಡುವಿನ ಪವಿತ್ರ ಸಂಬಂಧವನ್ನು ಸಿನಿಮಾದಲ್ಲಿ ಹೇಳಲಾಗಿದೆ, ಸಿನಿಮಾ ವಕೀಲರನ್ನು ಒಳಗೊಂಡಿದ್ದು ಅಪರೂಪವಾಗಿದೆ ಎಂದು ಸುಧೀರ್ ತಿಳಿಸಿದ್ದಾರೆ.
ವಕೀಲರ ಜೀವನದಲ್ಲಿ ಪ್ರೀತಿ ಪ್ರೇಮ ಎಂಬ ವಿಷಯ ಬಂದಾಗ ಯಾವ ರೀತಿ ಇರುತ್ತದೆ ಎಂಬ ಐಡಿಯಾ ಹೊಳೆದಾಗ ಅದನ್ನು ಸಿನಿಮಾ ಕಥೆಯಾಗಿ ಬದಲಾಯಿಸಲು ಚಿಂತಿಸಿದರಂತೆ, ಅದಾದ ನಂತರ ಅದೊಂದು ರೋಮ್ಯಾಂಟಿಕ್ ಸಿನಿಮಾವಾದಿ ಬದಲಾಯಿತು. ನಾಯಕಿ ಲತಾ ಹೆಗಡೆ ಅವರನ್ನು ಜಡ್ಜ್ ಆಗಿ ತೋರಿಸಲು ನಿರ್ಧರಿಸಲಾಗಿತ್ತು, ಆದರೆ ಹಲವು ಸಂಶೋಧನೆ ಬಳಿಕ ತಿಳಿಯಿತು, ಹಲವು ಯುವ ನ್ಯಾಯಾಧೀಶರ ನೇಮಕವಾಗಿದೆ ಎಂಬುದು ನಿಧನವಾಗಿ ತಿಳಿಯಿತು, 
ಕಾಲೇಜು ವಿದ್ಯಾರ್ಥಿಗಳನ್ನು ಹೊರತು ಪಡಿಸಿದರೇ ವಕೀಲರು ಮರಗಳನ್ನು ಸುತ್ತುವುದಿಲ್ಲ, ಭಾವನೆಗಳು ಮಾತ್ರ ಅಲ್ಲಿರುತ್ತವೆಸ ಅದೇ ವಾಸ್ತವ ಕೂಡ, ವಕೀಲಯ ವಯಕ್ತಿಕ ಜೀವನ ಪ್ರೀತಿ ಪ್ರೇಮದ ಬಗ್ಗೆ ಹೆಚ್ಚಿನ ಸಿನಿಮಗಳಿಲ್ಲ, ಹೀಗಾಗಿ ಈ ರೀತಿಯ ಸಿನಿಮಾ ಮಾಡಲು ನಿರ್ದರಿಸಿದೆ ಎಂದು ಹೇಳಿರುವ ಅವರು ಈ ಕಥೆಗಾಗಿ ಸುಮಾರು 8 ವಕೀಲರನ್ನು ಸಂಪರ್ಕಸಿ ಮಾಹಿತಿ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com