ಬೆಂಗಳೂರಿನಲ್ಲಿ ನಡೆಯುತ್ತಿದ್ದ 'ಮಜಾ ಟಾಕೀಸ್' ಶೂಟಿಂಗ್ ಮುಗಿಸಿಕೊಂಡು ಬರುವ ವೇಳೆ ಮುಂಜಾನೆ 7.10ರ ಸುಮಾರಿಗೆ ಕಾರು ಅಪಘಾತಕ್ಕೆ ಈಡಾಗಿದೆ. ಮಂಡ್ಯ ರಮೇಶ್ ತಾವೇ ಕಾರ್ ಚಾಲನೆ ಮಾಡಿಕೊಂಡು ಮೈಸೂರಿಗೆ ವಾಪಾಸಾಗುತ್ತಿದ್ದರು. ಆಗ ಎದುರಿನಿಂದ ಬಂದ ಲಾರಿಗೆ ಕಾರ್ ಡಿಕ್ಕಿ ಆಗುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ.