ಅವನೇ ಶ್ರೀಮನ್ನಾರಾಯಣದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಬಾಲಾಜಿ ಮನೋಹರ್

ವಿಷಯ ಪ್ರಧಾನ ಚಿತ್ರಗಳ ನಟನೆಯಿಂದ ಖ್ಯಾತರಾಗಿರುವ ಬಾಲಾಜಿ ಮನೋಹರ್....
ರಕ್ಷಿತ್ ಶೆಟ್ಟಿ-ಬಾಲಾಜಿ ಮನೋಹರ್
ರಕ್ಷಿತ್ ಶೆಟ್ಟಿ-ಬಾಲಾಜಿ ಮನೋಹರ್
Updated on
ವಿಷಯ ಪ್ರಧಾನ ಚಿತ್ರಗಳ ನಟನೆಯಿಂದ ಖ್ಯಾತರಾಗಿರುವ ಬಾಲಾಜಿ ಮನೋಹರ್ ಇತ್ತೀಚೆಗೆ ಚೂರಿಕಟ್ಟೆ ಸಿನಿಮಾಗಳಿಂದ ಗಮನಸೆಳೆದರು. ಇದೀಗ ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಸಂಪಾದಕರಾಗಿ ನಿರ್ದೇಶಕರಾಗಿರುವ ಸಚಿನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದ್ದಾರೆ.ಚಿತ್ರಕ್ಕೆ ಕಥೆಯನ್ನು ರಕ್ಷಿತ್ ಶೆಟ್ಟಿ ಬರೆದಿದ್ದು ಮುಖ್ಯ ಪಾತ್ರವನ್ನು ನಟಿಸುತ್ತಿದ್ದಾರೆ. ಚಿತ್ರದ ಪಾತ್ರಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಮಾರ್ಚ್ 1ರಿಂದ ಒಂದೇ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಶೂಟಿಂಗ್ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈಗಾಗಲೇ ಚಿತ್ರೀಕರಣದ ಸ್ಥಳಗಳನ್ನು ನಿಗದಿಪಡಿಸಿದೆ. ಇತರ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.
ರಕ್ಷಿತ್ ಪರಮ್ವಾಹ್ ಸ್ಟುಡಿಯೊ, ಪುಷ್ಕರ್ ಫಿಲ್ಮ್ಸ್ ಮತ್ತು ಹೆಚ್ ಕೆ ಪ್ರಕಾಶ್ ಜಂಟಿ ಸಂಸ್ಥೆಗಳಿಂದ ತಯಾರಾಗುತ್ತಿರುವ ಚಿತ್ರವೇ ಅವನೇ ಶ್ರೀಮನ್ನಾರಾಯಣ.80ರ ದಶಕದ ಛಾಯೆ ಚಿತ್ರದಲ್ಲಿ ಕಾಣಲಿದ್ದು, ಚರಣ್ ರಾಜ್ ಅವರ ಸಂಗೀತ ಮತ್ತು ಕರ್ಮ್ ಚಾವ್ಲಾ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com