ಟಗರು ಚಿತ್ರದ ಪೋಸ್ಟರ್
ಸಿನಿಮಾ ಸುದ್ದಿ
'ದುನಿಯಾ' ಬಿಡುಗಡೆ ದಿನವೇ 'ಟಗರು' ತೆರೆಗೆ; ನಿರ್ದೇಶಕ ಸೂರಿ ಹೇಳಿದ್ದೇನು?
ಸೂರಿ ನಿರ್ದೇಶನದ 2007ರ ಫೆಬ್ರವರಿ 23ರಂದು ಬಿಡುಗಡೆಯಾಗಿದ್ದ ದುನಿಯಾ ಸಿನಿಮಾ ಮತ್ತೆ ಸುದ್ದಿಯಲ್ಲಿದೆ....
ಸೂರಿ ನಿರ್ದೇಶನದ 2007ರ ಫೆಬ್ರವರಿ 23ರಂದು ಬಿಡುಗಡೆಯಾಗಿದ್ದ ದುನಿಯಾ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಸೂಪರ್ ಹಿಟ್ ಆಗಿದ್ದ ಸಿನಿಮಾ ವಿಜಯ್ ಹೆಸರಿನಿಂದೊಗೆ ದುನಿಯಾ ಕೂಡ ಸೇರ್ಪಡೆಗೊಂಡಿತು. ಸರಿಯಾಗಿ 10 ವರ್ಷಗಳ ನಂತರ ಅದೇ ತಾರೀಖಿನಂದು ಸೂರಿಯವರ ಟಗರು ಚಿತ್ರ ಬಿಡುಗಡೆಯಾಗುತ್ತಿದೆ.
ಈ ಬಗ್ಗೆ ನಿರ್ದೇಶಕ ಸೂರಿ ಹೇಳುವುದು ಹೀಗೆ: ಇದು ಸಾಮಾನ್ಯವಾಗಿ ನಾವು ಮದುವೆಯ ದಶಮಾನೋತ್ಸವ ಆಚರಿಸಿಕೊಂಡಂತೆ. ಚಿತ್ರದ ಬಿಡುಗಡೆ ಬಗ್ಗೆ ನನಗೂ ಕುತೂಹಲವಿದೆ,ಹಾಗೆಂದು ದುನಿಯಾ ಮತ್ತು ಟಗರು ಚಿತ್ರಗಳ ನಡುವೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ. ದುನಿಯಾ ಚಿತ್ರ ನನಗೆ ಈಗ ಫ್ಲ್ಯಾಶ್ ಬ್ಯಾಕ್ ಆಗಿದ್ದು ಅಂತಹ ಮತ್ತೊಂದು ದುನಿಯಾ ಚಿತ್ರವನ್ನು ನನ್ನ ವೃತ್ತಿಜೀವನದಲ್ಲಿ ಮಾಡುವೆ ಎನ್ನುವ ಭರವಸೆ ನನಗಿಲ್ಲ. ಇಂದು ನನಗೆ ಟಗರು ಚಿತ್ರ ಮುಖ್ಯವಾಗಿದೆ ಎನ್ನುತ್ತಾರೆ ಸೂರಿ.
ದುನಿಯಾ ಚಿತ್ರ ನಮಗೆಲ್ಲಾ ಹೊಸ ಅನುಭವವಾಗಿತ್ತು. ಈಗ ನನ್ನ ಜೊತೆ ನಿರ್ಮಾಪಕರಾದ ಕೆಪಿ ಶ್ರೀಕಾಂತ್ ಇದ್ದಾರೆ. ಅವರು ಚಿತ್ರ ಬಿಡುಗಡೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು, ನನ್ನದೇನಿದ್ದರೂ ನಿರ್ದೇಶನದ ಕೆಲಸ ಮಾತ್ರ ಎಂದರು.
ಶಿವರಾಜ್ ಕುಮಾರ್, ಮಾನ್ವಿತಾ ಹರೀಶ್, ಭಾವನಾ, ದುನಿಯಾ ವಿಜಯ್, ವಶಿಷ್ಟ ಸಿಂಹ ಅವರು ಮುಖ್ಯ ಭೂಮಿಕೆಯಲ್ಲಿರುವ ಟಗರು ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ