ನಾಯಕನ ನಂತರ ವಿಲನ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ

ಒಂದು ಮೊಟ್ಟೆಯ ಕಥೆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿರುವ ರಾಜ್ ಬಿ ಶೆಟ್ಟಿ ಇನ್ನು ಕೆಲ ....
ಅಮ್ಮಚಿ ಎಂಬ ನೆನಪು ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ
ಅಮ್ಮಚಿ ಎಂಬ ನೆನಪು ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ
Updated on
ಒಂದು ಮೊಟ್ಟೆಯ ಕಥೆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿರುವ ರಾಜ್ ಬಿ ಶೆಟ್ಟಿ ಇನ್ನು ಕೆಲ ಸಮಯಗಳವರೆಗೆ ನಟನೆಯತ್ತ ಗಮನಹರಿಸಲು ಮುಂದಾಗಿದ್ದಾರೆ. ಆಸಕ್ತಿಕರವಾದ ಸವಾಲಿನ ಪಾತ್ರಗಳನ್ನು ಒಪ್ಪಿಕೊಳ್ಳಲು ರಾಜ್ ಶೆಟ್ಟಿಯವರು ನಿರ್ಧರಿಸಿದ್ದಾರೆ.
ಅವರ ಮುಂದಿನ ಸಿನಿಮಾದ ಶೀರ್ಷಿಕೆ ಬಹಳ ಆಕರ್ಷಕವಾಗಿದೆ. ಅದರ ಹೆಸರು ಅಮ್ಮಚಿ ಎಂಬ ನೆನಪು. ತಮ್ಮ ಕಹಿ ನೆನಪುಗಳನ್ನು ನೆಗೆಟಿವ್ ಪಾತ್ರದ ಮೂಲಕ ತೋರಿಸಲು ರಾಜ್ ಬಿ ಶೆಟ್ಟಿ ಮುಂದಾಗಿದ್ದಾರೆ.
ಮಹಿಳಾ ಸಶಕ್ತೀಕರಣದ ಬಗ್ಗೆ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ರಂಗಭೂಮಿ ಹಿನ್ನೆಲೆ ಕಲಾವಿದರು ಬಹಳ ಮಂದಿ ಇದ್ದಾರೆ. ಪ್ರಕಾಶ್ ಪಿ ಶೆಟ್ಟಿ ಮತ್ತು ಅವರ ತಂಡ ಚಿತ್ರಕ್ಕೆ ಬಂಡವಾಳ ಹೂಡಿದೆ. ಪ್ರಕಾಶ್ ಅವರ ಪತ್ನಿ ಚಂಪಾ ಪಿ ಶೆಟ್ಟಿ ನಾಟಕ ನಿರ್ದೇಶಕಿಯಾಗಿ ಹೆಸರು ಮಾಡಿದವರು. ಕುಂದಾಪುರ ಕನ್ನಡ ಭಾಷೆಯಲ್ಲಿರುವ ಸಿನಿಮಾವನ್ನು ಕನ್ನಡದ ಖ್ಯಾತ ಸಾಹಿತಿ ವೈದೇಹಿಯವರು ಬರೆದ ಮೂರು ಕಿರು ಕಥೆಗಳನ್ನು ಆಧರಿಸಿದ ಅಕ್ಕು ನಾಟಕದಿಂದ ತೆಗೆದುಕೊಳ್ಳಲಾಗಿದೆ.
ಅಕ್ಕು ನಾಟಕವನ್ನು ನಿರ್ದೇಶಿಸಿದ್ದ ಚಂಪಾ ಪಿ ಶೆಟ್ಟಿ ಇದೀಗ ಬೆಳ್ಳಿತೆರೆಗೆ ತರುತ್ತಿದ್ದಾರೆ. ನಾಟಕದಲ್ಲಿ ಗಮನ ಸೆಳೆದಿದ್ದ ಪಾತ್ರವಾಗಿದ್ದ ಅಮ್ಮಾಚಿ ಸಿನಿಮಾದಲ್ಲಿ ಮುಖ್ಯ ಪಾತ್ರವಾಗಲಿದೆ.
ಸಿನಿಮಾದ ಕೆಲವು ಫೋಟೋಗಳು ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಒಂದು ಮೊಟ್ಟೆಯ ಕಥೆಯಂತೆ ಈ ಚಿತ್ರದಲ್ಲಿ ಕೂಡ ರಾಜ್ ಬಿ ಶೆಟ್ಟಿಯವರದ್ದು ಸರಳ, ಸೀದಾ ಸಾದ ಪಾತ್ರ. ಇಲ್ಲಿ ವಿಲನ್ ಪಾತ್ರವನ್ನು ಅವರು ನಿಭಾಯಿಸುತ್ತಿದ್ದಾರೆ. 
ರಾಜ್ ಶೆಟ್ಟಿಯವರೊಂದಿಗೆ ಚಿತ್ರದಲ್ಲಿ ನಾಲ್ವರು ಮಹಿಳಾ ಪಾತ್ರಧಾರಿಗಳಿದ್ದಾರೆ. ನಟರಾದ ರಾಧಾಕೃಷ್ಣ ಉರಾಲಾ ಅಜ್ಜಿಯ ಪಾತ್ರ ಮಾಡಿದ್ದಾರೆ. ದೀಪಿಕಾ ಆರಾಧ್ಯ, ವೈಜಯಂತಿ ಅಡಿಗ ಮತ್ತು ದಿವ್ಯ ಇತರ ಪ್ರಮುಖ ಪಾತ್ರಧಾರಿಗಳು. 
ಪಂಡಿತ್ ಕಾಶಿನಾಥ್ ಪಟ್ಟರ್ ಅವರ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಅವರ ಸಂಕಲನ ಚಿತ್ರಕ್ಕಿದೆ. ಅಮ್ಮಾಚಿ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದು ರಾಜ್ ಬಿ ಶೆಟ್ಟಿಯವರ ಎರಡನೇ ಅಧಿಕೃತ ಚಿತ್ರವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com