ಉತ್ತರ ಕನ್ನಡದ ನದಿಯ ಕಥಾನಕ 'ಅಘನಾಶಿನಿ' ಗೆ ಅಂತರಾಷ್ಟ್ರೀಯ ಪ್ರಶಸ್ತಿ

ಉತ್ತರ ಕನ್ನಡದ ಅಘನಾಶಿನಿ ನದಿಯ ಹರಿವು, ಅದರ ಸುತ್ತಲಿನ ನಾನಾ ಕಥೆಗಳನ್ನು ಹೊಂದಿರುವ ‘ಅಘನಾಶಿನಿ’ ಸಾಕ್ಷ್ಯಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ.
ಉತ್ತರ ಕನ್ನಡದ ನದಿಯ ಕಥಾನಕ 'ಅಘನಾಶಿನಿ' ಗೆ ಅಂತರಾಷ್ಟ್ರೀಯ ಪ್ರಶಸ್ತಿ
ಉತ್ತರ ಕನ್ನಡದ ನದಿಯ ಕಥಾನಕ 'ಅಘನಾಶಿನಿ' ಗೆ ಅಂತರಾಷ್ಟ್ರೀಯ ಪ್ರಶಸ್ತಿ
ಶಿರಸಿ: ಉತ್ತರ ಕನ್ನಡದ ಅಘನಾಶಿನಿ ನದಿಯ ಹರಿವು, ಅದರ ಸುತ್ತಲಿನ ನಾನಾ ಕಥೆಗಳನ್ನು ಹೊಂದಿರುವ ‘ಅಘನಾಶಿನಿ’ ಸಾಕ್ಷ್ಯಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ಅಮೆರಿಕದ ಕೊಲೊರಾಡೊ ಪರಿಸರ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾ ಬೊರ್ರೆಗೊ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್ ಹಾಗೂ ಇಂಪ್ಯಾಕ್ಟ್ ಡಾಕ್ ಅವಾರ್ಡ್‌ನ ಎಕ್ಸಲೆನ್ಸ್ ಪ್ರಶಸ್ತಿಗೆ ಚಿತ್ರವು ಭಾಜನವಾಗಿದೆ.
ಫೆ.24ರಂದು ಕೊಲೊರಾಡೊ ಪರಿಸರ ಚಲನಚಿತ್ರೋತ್ಸವದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಗೊಳ್ಳಲಿದೆ.  ಇಂಜಿನಿಯರ್ ಅಶ್ವಿನಿಕುಮಾರ ಭಟ್ ನಿರ್ದೇಶನದ 40 ನಿಮಿಷಗಳ ಸಾಕ್ಷ್ಯಚಿತ್ರವನ್ನು ಎರಡೂವರೆ ವರ್ಷಗಳ ಅವಧಿಯಲ್ಲಿ ಚಿತ್ರೀಕರಿಸಲಾಗಿದೆ. ಲ್ಯಾಂಡ್‌ಸ್ಕೇಪ್ ವಿಝಾರ್ಡ್ಸ್‌ ಸಂಸ್ಥೆಯು ಕ್ರೌಡ್ ಫಂಡಿಂಗ್ ಮತ್ತು ರೋಹಿಣಿ ನಿಲೇಕಣಿ ಫಿಲಾಂಥ್ರೊಪಿಸ್‌ ಸಹಭಾಗಿತ್ವದಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾನಾವಾಗಿದೆ.
ಪರಿಸರ, ಜನರು ಹಾಗೂ ನದಿಯೊಡನೆ ಇರುವ ಅಪರೂಪದ ಸಂಬಂಧವನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು ನದಿಯು ತನ್ನ ಕಥೆಯನ್ನು ತಾನೇ ಹೇಳುವಂತೆ ನಿರೂಪಣೆ ಮಾಡಲಾಗಿದೆ.
ಹಾಲಿವುಡ್ ಅಂತರರಾಷ್ಟ್ರೀಯ ಸ್ವತಂತ್ರ ಸಾಕ್ಷ್ಯಚಿತ್ರ ಪ್ರಶಸ್ತಿ, ಅಮೆರಿಕದ ಜಾರ್ಜಿಯಾ ಸ್ಪಾಟ್ ಲೈಟ್ ಡಾಕ್ ಗೋಲ್ಡ್ ಅವಾರ್ಡ್‌, ಇಸ್ರೇಲ್ ನಜರೆತ್ ಫಿಲ್ಮ್ ಫೆಸ್ಟಿವಲ್‌ ಫೈನಲ್ಸ್ ಗೆ ಆಯ್ಕೆಯಾಗಿರುವ 'ಅಘನಾಶಿನಿ'  ಕಾಂಬೋಡಿಯಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಮೂವಿಂಗ್ ವಾಟರ್ ಫಿಲ್ಮ್ ಫೆಸ್ಟಿವಲ್ ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಭಾಗವಹಿಸಿ ತ್ಯುತ್ತಮ ಪರಿಸರ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಚಿತ್ರಕ್ಕೆ ಇದುವರೆಗೆ ಒಟ್ಟು 9  ಪ್ರಶಸ್ತಿಗಳು ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com