ಕಾನೂರಾಯಣದಲ್ಲಿ ಮುಗ್ಧ ಮುಖಗಳಿವೆ: ಸೋನು ಗೌಡ

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಜಾಗ ಕಂಡುಕೊಂಡಿರುವ ನಟಿ ಸೋನು ಗೌಡ ವಿಷಯಾಧಾರಿತ....
ಸೋನು ಗೌಡ
ಸೋನು ಗೌಡ

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಸ್ಥಾನ ಕಂಡುಕೊಂಡಿರುವ ನಟಿ ಸೋನು ಗೌಡ ವಿಷಯಾಧಾರಿತ ಪಾತ್ರಗಳಿರುವ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆ, ಸಾಮರ್ಥ್ಯಗಳನ್ನು ಹೊರಹಾಕಲು ಅವರಿಗೆ ಸಾಧ್ಯವಾಗಿದೆ. 

ತಮ್ಮ ಮುಂಬರುವ ಇನ್ನೂ ಬಿಡುಗಡೆಯಾಗದ ಚಿತ್ರವಾದ ಗುಲ್ಟೂನಲ್ಲಿನ ಪಾತ್ರ ಎಂತಹದ್ದು ಎಂದು ಅವರು ಬಿಟ್ಟುಕೊಟ್ಟಿಲ್ಲ. ಸಿನಮಾಸಕ್ತರ ಕುತೂಹಲವನ್ನು ಕೆರಳಿಸಿದ್ದಾರೆ. ಇದರ ಜೊತೆಗೆ ಶಾಲಿನಿ ಐಎಎಸ್ ಮತ್ತು ಒಂಥರಾ ಬಂಗಗಳು ಮತ್ತು ಫಾರ್ಚುನ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ.

ಈ ಮಧ್ಯೆ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಕಾನೂರಾಯಣ ಚಿತ್ರದಲ್ಲಿ ಅವರ ಪಾತ್ರ ವಿಶೇಷವಾಗಿದೆ. ನಾಗಾಭರಣ ನಿರ್ದೇಶನದ  ಅನೇಕ ನಾಟಕಗಳಲ್ಲಿ ನಟಿಸಿದ್ದರೂ ಕೂಡ ಇದೇ ಮೊದಲ ಬಾರಿಗೆ ಅವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಪುತ್ರ ಪನ್ನಗಾ ಅವರ ಹ್ಯಾಪಿ ನ್ಯೂ ಇಯರ್ ಚಿತ್ರವನ್ನು ನೋಡಿದ ನಂತರ ಕಾನೂರಾಯಣ ಚಿತ್ರಕ್ಕೆ ಒಪ್ಪಿಕೊಂಡರು  ಎನ್ನುತ್ತಾರೆ.

ಸುಮನಾ ಕಿತ್ತೂರು ಅವರ ಕಿರಿಗೂರಿನ ಗಯ್ಯಾಳಿಗಳು ಚಿತ್ರವನ್ನು ನೋಡಿದ ನಂತರ ಕಾನೂರಾಯಣ ಚಿತ್ರದಲ್ಲಿ ಕೂಡ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದಾರೆ ಸೋನು ಗೌಡ. ಮುಗ್ಧ ಮುಖದ ನಟಿಗಾಗಿ ನಾಗಾಭರಣ ಅವರು ಹುಡುಕಾಟ ನಡೆಸುತ್ತಿದ್ದರು. ಈ ಪಾತ್ರಕ್ಕೆ ನಾನು ಹೊಂದಿಕೆಯಾಗಬಹುದು ಎಂದು ಭಾವಿಸಿ ನನ್ನನ್ನು ಸೇರಿಸಿಕೊಂಡಿದ್ದಾರೆ ಎನ್ನುತ್ತಾರೆ ಅವರು.

ಕಥೆ ಮಂಜುನಾಥ್ ಬರೆದಿದ್ದು, ಪನ್ನಗಾಭರಣ ಅವರ ಚಿತ್ರಕಥೆಯಿದೆ. ಮಹಿಳಾ ಸಶಕ್ತೀಕರಣದ ಬಗ್ಗೆ ಇರುವ ಕಥೆಯಿದು. 4  ಕೋಟಿ ರೂಪಾಯಿ ಬಜೆಟ್ ನ ಚಿತ್ರಕ್ಕೆ  ವಿವಿಧ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ತಲಾ 20 ರೂಪಾಯಿಗಳಂತೆ 20 ಲಕ್ಷ ರೂಪಾಯಿ ಸಂಗ್ರಹಿಸಿಕೊಟ್ಟಿದ್ದಾರೆ. ನಾನು ಕೂಡ ಸ್ವಲ್ಪ ಬಂಡವಾಳ ಹಾಕಿದ್ದೇನೆ. ಮಹಿಳೆಯರಿಗೆ ದೇವರು ವಿಶೇಷ ಶಕ್ತಿ ನೀಡಿದ್ದಾರೆ. ಅದನ್ನು ಒಳ್ಳೆಯದಕ್ಕೆ ಮತ್ತು ಕೆಟ್ಟದಕ್ಕೆ ಕೂಡ ಬಳಸಬಹುದು ಎಂಬುದು ಈ ಚಿತ್ರದ ಮೂಲಕ ಕಂಡುಕೊಂಡೆ ಎನ್ನುತ್ತಾರೆ ಸೋನು ಗೌಡ.

ಬೆಳವಾಡಿ ಮತ್ತು ಜಾವಗಲ್ ಗಳಲ್ಲಿ ಚಿತ್ರ ಬಹುತೇಕ ಚಿತ್ರೀಕರಣಗೊಂಡಿದ್ದು ಇನ್ನೊಂದು  ದಿನ ಚಿಕ್ಕಮಗಳೂರಿನ ಕೊಪ್ಪದಲ್ಲಿ ಶೂಟಿಂಗ್ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರದಲ್ಲಿ ಸ್ಕಂದ ಕೂಡ ನಟಿಸಿದ್ದಾರೆ.ವಾಸುಕಿ ವೈಭವ್ ಅವರ ಸಂಗೀತವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com