
ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರೀಕರಣದ ಮುಕ್ತಾಯ ಹಂತವಿದು. ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿರುವ ಚಿತ್ರದ ಕೊನೆಯ ಭಾಗದ ಚಿತ್ರೀರಣ ಮೊನ್ನೆ ಸೋಮವಾರ ರಾತ್ರಿ ಮುಕ್ತಾಯವಾಯಿತು.
ಕಾಲಕಾಲಕ್ಕೆ ಚಿತ್ರೀಕರಣದ ಫೋಟೋಗಳನ್ನು ಹಾಕುತ್ತಿದ್ದ ಚಿತ್ರತಂಡ ಕ್ಲೈಮಾಕ್ಸ್ ಹಂತದ ಕೊನೆಯ ಸೆಲ್ಫಿಯನ್ನು ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಹಂಚಿಕೊಂಡಿದೆ. ಇದುವರೆಗೆ ಸೆಲ್ಫಿಯಲ್ಲಿ ನಾವು ಮೂವರು ಮಾತ್ರವಿದ್ದರೆ ಈ ಬಾರಿ ನಿರ್ದೇಶಕ ದಿನಕರ್ ತೂಗುದೀಪ ಕೂಡ ಇದ್ದರು ಎನ್ನುತ್ತಾರೆ ನಟ ಪ್ರೇಮ್. ಲೈಫ್ ಜೊತೆ ಖಂಡಿತಾ ಒಂದು ಟ್ರೆಂಡ್ ಸೆಟ್ಟರ್ ಸಿನಿಮಾವಾಗುತ್ತದೆ ಎಂದು ಅವರು ವಿಶ್ವಾಸದಿಂದ ನುಡಿದರು.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾವಿದ್ದು, ಚಿತ್ರಕಥೆಯನ್ನು ದಿನಕರ್ ಪತ್ನಿಯೇ ಬರೆದಿದ್ದಾರೆ. ಮೂವರು ಸ್ನೇಹಿತರ ಪ್ರಯಾಣದ ಕಥೆ ಇದಾಗಿದ್ದು ಸಮೃದ್ಧಿ ಕ್ರಿಯೇಷನ್ಸ್ ಬಂಡವಾಳ ಹೂಡಿದೆ. ವಿ.ಹರಿಕೃಷ್ಣ ಅವರ ಸಂಗೀತ ಮತ್ತು ನಿರಂಜನ್ ಬಾಬು ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Advertisement