ನಾಳೆಯಿಂದ 10ನೇ ಬಿಫ್ಸ್ ಸಿನಿಮೋತ್ಸವ ಆರಂಭ

10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ(ಬಿಫ್ಸ್) ರಂಗ ಸಜ್ಜಾಗಿದ್ದು ನಾಳೆಯಿಂದ ಹಲವು ಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ...
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ
ಬೆಂಗಳೂರು: 10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ(ಬಿಫ್ಸ್) ರಂಗ ಸಜ್ಜಾಗಿದ್ದು ನಾಳೆಯಿಂದ ಹಲವು ಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. 
ಫೆಬ್ರವರಿ 22 ರಿಂದ ಮಾರ್ಚ್ 1ರವರೆಗೆ ಬಿಫ್ಸ್ ಸಿನಿಮೋತ್ಸವ ನಡೆಯಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಸಿನಿಮೋತ್ಸವನ್ನು ಆಯೋಜಿಸಿದೆ.
ಫೆಬ್ರವರಿ 22ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಚಿತ್ರ ನಿರ್ದೇಶಕರು ಮತ್ತು ನಟನಟಿಯರು ಭಾಗವಹಿಸಲಿದ್ದಾರೆ. 
ರಾಜಾಜಿನಗರದ ಒರಿಯನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನವಾಗಲಿದ್ದು ಚಿತ್ರದ ಪಾಸ್ 600 ರುಪಾಯಿಯಾಗಿದ್ದು ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ 300 ರುಪಾಯಿ ಪಾಸ್ ನೀಡಲಾಗುತ್ತದೆ. 
ಬಿಫ್ಸ್ ಪಟ್ಟಿಯಲ್ಲಿ ಕನ್ನಡದ ಭರ್ಜರಿ. ಚಮಕ್, ಕಾಲೇಜ್ ಕುಮಾರ, ಹೆಬ್ಬುಲಿ, ಮಫ್ತಿ, ಒಂದು ಮೊಟ್ಟೆಯ ಕಥೆ, ರಾಜಕುಮಾರ್ ಮತ್ತು ತಾರಕ್ ಚಿತ್ರಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com