ಚಾಮುಂಡಿ ಬೆಟ್ಟದಲ್ಲಿ ನಿರೂಪ್ ಭಂಡಾರಿಯ ದೆವ್ವದ ಕಥೆಗಳು

ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಸಿನಿಮಾ ನಾಯಕ ಅವರ ಸೋದರ ನಿರೂಪ್ ಭಂಡಾರಿ...
ರಾಜರಥ ಸಿನಿಮಾದಲ್ಲಿ ನಿರೂಪ್ ಭಂಡಾರಿ
ರಾಜರಥ ಸಿನಿಮಾದಲ್ಲಿ ನಿರೂಪ್ ಭಂಡಾರಿ

ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಸಿನಿಮಾ ನಾಯಕ ಅವರ ಸೋದರ ನಿರೂಪ್ ಭಂಡಾರಿ ಮತ್ತೊಮ್ಮೆ ಕಾಲೇಜು ದಿನಗಳಿಗೆ ಹೋಗುತ್ತಿದ್ದಾರೆ.

ರಾಜರಥ ಸಿನಿಮಾದಲ್ಲಿ ತಮ್ಮ ಕಾಲೇಜು ದಿನಗಳ ಜೀವನ ತೆರೆ ಮೇಲೆ ಪ್ರತಿಫಲನವಾಗುತ್ತಿದೆ ಎಂದು ನಿರೂಪ್ ಭಂಡಾರಿ ಹೇಳುತ್ತಿದ್ದಾರೆ. ಕಾಲೇಜು ದಿನಗಳ ಹಳೆಯ ಸುಮಧುರ ನೆನಪುಗಳನ್ನು  ಸಿಟಿ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿರುವ ನಿರೂಪ್ ಭಂಡಾರಿ ಕೆಲವು ಘಟನೆಗಳನ್ನು ಅದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾರೆ.

ನಿರೂಪ್ ಮತ್ತು ಅವರ ಗೆಳೆಯರು ಕಾಲೇಜು ದಿನಗಳಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಾಗ ಹೋಗಿಬರುತ್ತಿದ್ದರಂತೆ.  ಮಧ್ಯರಾತ್ರಿಯಲ್ಲಿ ಸ್ನೇಹಿತರೆಲ್ಲಾ ಜೊತೆ ಸೇರಿಕೊಂಡು ಕಾರುನ ಚಲಾಯಿಸಿಕೊಂಡು ಹೋಗಿ ದೆವ್ವ ಇದೆಯೇ ಎಂದು ಪರೀಕ್ಷಿಸಬೇಕೆಂದು ರಾತ್ರಿ ವೇಳೆ ಹೋಗುತ್ತಿದ್ದರಂತೆ. ಹಳೆಯ ಎಸ್ಟೀಮ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ. ಕಾರು ಬೇಗ ಸ್ಟಾರ್ಟ್ ಆಗುವುದಿಲ್ಲವೆಂದು ಸ್ವಲ್ಪ ಹೊತ್ತು ಮೊದಲೇ ಸ್ಟಾರ್ಟ್ ಮಾಡಿ ಇಡುತ್ತಿದ್ದರಂತೆ.
 
ದೆವ್ವದ ಕಾಟ ಎಂದು ಸ್ನೇಹಿತರನ್ನು ಹೆದರಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಕಾರಿನ ಲೈಟ್ ನಂತರ ಎಂಜಿನ್ ಆಫ್ ಮಾಡಿ ಕಾರು ಸ್ಟಾರ್ಟ್ ಆಗುವುದಿಲ್ಲ ಎಂದು ನಟನೆ ಮಾಡಿದ್ದರಂತೆ.
ರಾಜರಥ ಸಿನಿಮಾದಲ್ಲಿ ಕೂಡ ಅಂತಹದ್ದೇ ರೀತಿಯ ಬೆದರಿಸುವ ಹಾಸ್ಯ, ವಿನೋದವಿದೆಯಂತೆ.

ಮತ್ತೊಂದು  ಕುತೂಹಲಕರ ಸಂಗತಿಯೆಂದರೆ ಅನೂಪ್ ಅವರ ಸ್ನೇಹಿತರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ನಿರೂಪ್ ಮೇಲೆ ಕಾಲೇಜಿನಲ್ಲಿ ರ್ಯಾಗಿಂಗ್ ಮಾಡಿರಲಿಲ್ಲವಂತೆ. ಚಿತ್ರದಲ್ಲಿ ಕೂಡ ಕಾಲೇಜಿನಲ್ಲಿ ರ್ಯಾಗಿಂಗ್ ಮಾಡುವ ಸನ್ನಿವೇಶ ಬರುತ್ತದೆ. ಸೀನಿಯರ್ ಗಳು ಬಾಸ್ಕೆಟ್ ಬಾಲನ್ನು ಎಸೆಯುತ್ತಾರೆ, ಅದನ್ನು ಹೆಕ್ಕಿ ತರಬೇಕು. ಶೂಟಿಂಗ್ ವೇಳೆ ಈ ದೃಶ್ಯಗಳನ್ನು ಚಿತ್ರಿಸುವಾಗ ಮೈಮೇಲೆ ಗಾಯಗಳಾದವು ಎನ್ನುತ್ತಾರೆ.
ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ರಾಜರಥ ಸಿನಿಮಾ ಮಾರ್ಚ್  23ಕ್ಕೆ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com