ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟನೆಯಿಂದ ನನ್ನ ಬೆಳವಣಿಗೆಗೆ ಸಹಾಯ: ಸನ್ನಿ ಲಿಯೋನ್

ದಕ್ಷಿಣ ಭಾರತೀಯ ಸಿನಿಮಾಗಳಲ್ಲಿನ ನಟನೆ ನನ್ನ ಸಿನಿಮಾ ವೃತ್ತಿ ಬದುಕು ಬೆಳೆಯಲು ಕಾರಣವಾಯಿತು ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ....
ಸನ್ನಿಲಿಯೋನ್
ಸನ್ನಿಲಿಯೋನ್
ನವದೆಹಲಿ: ದಕ್ಷಿಣ ಭಾರತೀಯ ಸಿನಿಮಾಗಳಲ್ಲಿನ ನಟನೆ ನನ್ನ ಸಿನಿಮಾ ವೃತ್ತಿ ಬದುಕು ಬೆಳೆಯಲು ಕಾರಣವಾಯಿತು ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.
2012 ರಲ್ಲಿ ಹಿಂದಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಸನ್ನಿ ಮೊಟ್ಟ ಮೊದಲ ಬಾರಿಗೆ ತಮಿಳಿನ ವೀರಮಾದೇವಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ದಕ್ಷಿಣ ಭಾರತದ ಸಿನಿಮಾಗಗಳಲ್ಲಿ ನಾನು ನಟಿಸಿದ್ದು ನನ್ನ ವೃತ್ತಿ ಜೀವನದ ಗುರಿ ತಲುಪುಲು ಸಹಾಯವಾಯಿತು ಎಂದು ಹೇಳಿದ್ದಾರೆ,ಇಲ್ಲಿನ ವಿಭಿನ್ನ ಸಂಸ್ಕೃತಿ ನನಗೆ ಇಷ್ಟವಾಗಿದೆ, ಅದನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಐಎಎನ್ ಎಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾಷೆ ನಿಮಗೆ ಸಮಸ್ಯೆಯಾಗಲಿಲ್ಲವೇ ಎಂಬ ಪ್ರಶ್ನೆಗೆ ಈ  ರೀತಿ ಉತ್ತರಿಸಿದ್ದಾರೆ. ಭಾಷೆ ನನಗೆ ಸವಾಲಾಗಿತ್ತು, ಈ ಸಿನಿಮಾಗಾಗಿ ಭಾಷೆ ಕಲಿಯಲು ನಾನು ಚಿಂತಿಸಲಿಲ್ಲ, ಈ ಸಿನಿಮಾದ ಇಡೀ ಪ್ರಕ್ರಿಯೆಯ ಬಗ್ಗೆ ನಾನು ಕೂತಹಲಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಯೋಧ ರಾಜಕುಮಾರಿ ಪಾತ್ರದಲ್ಲಿ ನಟಿಸಿದ್ದಾರೆ, ಯಾವಾಗಲೂ ನಾನು ಈ ರೀತಿಯ ಪಾತ್ರಗಳಲ್ಲಿ ನಟಿಸಬೇಕು ಎಂದು ಬಯಸಿದ್ದೆ, ಈಗ ನನ್ನ ಕನಸು ನನಸಾಗಿದೆ, ಶೂಟಿಂಗ್ ಯಾವಾಗ ಆರಂಭವಾಗುವುದು ಎಂದು ನಾನು ಉತ್ಸುಕಳಾಗಿ ಕಾಯುತ್ತಿದ್ದೇನೆ, ನಾನು ಸವಾರಿ ಮಾಡುವುದನ್ನು ಕಲಿಯುತ್ತಿದ್ದೇನೆ,ತಮಿಳು ಭಾಷೆ ಕಲಿಯಲು ನಾನು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಹಿಂದಿ ಮತ್ತು ಇತರೆ ಯಾವುದೇ ಭಾಷೆಗಳ ಮಿತಿ ನನಗಿಲ್ಲ, ಸನ್ನಿ ಲಿಯೋನ್ ಗೆ ಮತ್ತಷ್ಟು ದಕ್ಷಿಣ ಭಾರತೀಯ ವಿವಿಧ ಭಾಷೆಗಳ ಸಿನಿಮಾದಲ್ಲಿ ನಟಿಸುವ ಆಸೆಯಿದೆಯಂತೆ,
ಆಸಕ್ತಿದಾಯಕ ಪಾತ್ರಗಳು ಬಂದರೆ ಖಂಡಿತ ನಾನು ನಟಿಸುತ್ತೇನೆ ಎಂದು ಹೇಳಿದ್ದಾರೆ.
ಹೆಣ್ಮು ಮಗುವೊಂದನ್ನು ಸನ್ನಿ ಲಿಯೋನ್ ದತ್ತು ಪಡೆದಿದ್ದಾರೆ, ತಮ್ಮ ಪತಿ ಡೇನಿಯಲ್ ವೇಬರ್ ಹಾಗೂ ನಾನು ಜೊತೆಯಾಗಿ ಮಗಳನ್ನು ನೋಡಿಕೊಳ್ಳುತ್ತಿದ್ದೇವೆ, ಶೂಟಿಂಗ್ ಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ನಾವಿಬ್ಬರು ನಿಶಾಳನ್ನು ಹೆಚ್ಚು ಪ್ರೀತಿಸುತ್ತೇವೆ, ಆಕೆ ನಮ್ಮ ಜೀವನದ ಬೆಳಕಾಗಿದ್ದಾಳೆ, ಪ್ರತಿದಿನ ನಮ್ಮನ್ನು ಉತ್ತಮ ಪೋಷಕರಾಗುವಂತೆ ಮಾಡುತ್ತಿದ್ದಾಳೆ, ಸನ್ನಿ ಲಿಯೋನ್ ಶೀಘ್ರವೇ ತಮ್ಮದೇ ಆದ ಕಾಸ್ಮೆಟಿಕ್ ಬ್ರಾಂಡ್ ಬಿಡುಗಡೆ ಮಾಡಲಿದ್ದಾರೆ,
ಚೆರ್ರಿ ಲಿಪ್ ಬಾಮ್ ಆಕೆಯ ಮೆಚ್ಚಿನ ಬಣ್ಣವಂತೆ, ಹೀಗಾಗಿ ಆಕೆಯ ಕಾಸ್ಮೆಟಿಕ್ ಬ್ರ್ಯಾಂಡ್ ಗದೆ ಚೆರ್ರಿ ಬಾಂಬ್ ಎಂದು ಹೆಸರಿಟ್ಟಿದ್ದಾಗಿ ತಿಳಿಸಿದ್ದಾರೆ, ಈ ಕಾಸ್ಮೆಟಿಕ್ ಗಳು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಆನ್ ಲೈನ್ ಮತ್ತು ಅಂಗಡಿಗಳಲ್ಲಿ ಸಿಗುವಂತೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com