ಸ್ಯಾಂಡಲ್ ವುಡ್ ಗೆ ಮಾರಿಮುತ್ತು ಮೊಮ್ಮಗಳ ಎಂಟ್ರಿ

ಉಪೇಂದ್ರ ಸಿನಿಮಾ ಮೂಲಕ ಮಾರಿಮುತ್ತು ಎಂದು ಪ್ರಸಿದ್ದವಾಗಿದ್ದ ಸರೋಜಮ್ಮ ಅವರ ಮೊಮ್ಮಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ..
ಜಯಶ್ರೀ ಆರಾಧ್ಯ
ಜಯಶ್ರೀ ಆರಾಧ್ಯ
Updated on
ಬೆಂಗಳೂರು: ಉಪೇಂದ್ರ ಸಿನಿಮಾ ಮೂಲಕ ಮಾರಿಮುತ್ತು  ಎಂದು ಪ್ರಸಿದ್ದವಾಗಿದ್ದ ಸರೋಜಮ್ಮ ಅವರ ಮೊಮ್ಮಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 
ಉಪೇಂದ್ರ ಸಿನಿಮಾ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದ ಸರೋಜಮ್ಮ ಕೆಲ ವರ್ಷಗಳ ಹಿಂದೆ ವಿಧಿವಶರಾದರು. ತಮ್ಮ ಕುಟುಂಬದಿಂದ ಯಾರಾದರೊಬ್ಬರು ಸಿನಿಮಾ ರಂಗಕ್ಕೆ ಬರಬೇಕು ಎಂಬುದು ಅವರ ಕನಸಾಗಿತ್ತು, ಹೀಗಾಗಿ ಅಜ್ಜಿ ಆಸೆಯನ್ನು ಪೂರೈಸಲು ಮೊಮ್ಮಗಳು ಜಯಶ್ರೀ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. 
ಪುಟ್ಟರಾಜು ಲವರ್‌ ಆಫ್‌ ಶಶಿಕಲಾ ಎಂಬ ಸಿನಿಮಾದಲ್ಲಿ ಜಯಶ್ರೀ ಆರಾಧ್ಯ ನಟಿಸುತ್ತಿದ್ದಾರೆ. ಸಹದೇವ್ ನಿರ್ದೇಶನದ ‘ಪುಟ್ಟರಾಜು’ ಶೀರ್ಷಿಕೆಯಡಿ ‘ಲವರ್ ಆಫ್‌ ಶಶಿಕಲಾ’ ಅಡಿಬರಹ ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ಕಾಲು ಭಾಗದಷ್ಟು ಮುಗಿದಿದೆ. 
ಚಿಕ್ಕಮಗಳೂರು ಮೂಲದ ಅಮಿತ್‌ಗೆ ಇದು ಮೊದಲ ಚಿತ್ರ. ‘ನನಗೆ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ನಿರ್ದೇಶಕರೇ ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ಪ್ರೇಮದ ಜೊತೆಗೆ ಕಾಮಿಡಿಯೂ ಇದೆ. ಇದೊಂದು ನವೀರಾದ ಪ್ರೇಮ ಕಥಾನಕ’ ಎಂದರು.
ಸಿನಿಮಾದಲ್ಲಿ 10ನೇ ತರಗತಿ ಬಾಲಕಿಯ ಪಾತ್ರದಲ್ಲಿ ನಟಿಸಿದ್ದನೆ, ಇದು ನನ್ನ ವಯಸ್ಸಿಗೆ ಸೂಕ್ತವಾದ ಪಾತ್ರವಾಗಿತದೆ ಎಂದು ಹೇಳಿದ್ದಾರೆ,ಪುಟ್ಟರಾಜು ಲವರ್‌ ಆಫ್‌ ಶಶಿಕಲಾ ಸಿನಿಮಾ ತುಮಕೂರಿನಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ತಯಾರಾಗುತ್ತಿರುವ ಸಿನಿಮಾವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com