ವಿರಳ ಕಾಯಿಲೆ ಬಗ್ಗೆ ಜಾಗೃತಿಯ ರೇಸ್ 7 ಮ್ಯಾರಾಥಾನ್ ನಲ್ಲಿ ರಾಮಾ ರಾಮಾ ರೇ ಖ್ಯಾತಿಯ ನಟರಾಜ್

ಮಕ್ಕಳಲ್ಲಿ ಕಂಡುಬರುವ ವಿರಳ ಕಾಯಿಲೆಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರೇಸ್ 7 ಮ್ಯಾರಾಥಾನ್ ನಲ್ಲಿ ರಾಮಾ ರಾಮಾ ರೇ... ಖ್ಯಾತಿಯ ನಟರಾಜ್...
ನಟರಾಜ್
ನಟರಾಜ್
Updated on
ಮಕ್ಕಳಲ್ಲಿ ಕಂಡುಬರುವ ವಿರಳ ಕಾಯಿಲೆಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರೇಸ್ 7 ಮ್ಯಾರಾಥಾನ್ ನಲ್ಲಿ ರಾಮಾ ರಾಮಾ ರೇ... ಖ್ಯಾತಿಯ ನಟರಾಜ್ ಭಾಗಿಯಾಗಿದ್ದರು. 
ವಿರಳ ಕಾಯಿಲೆಗಳನ್ನು ಎದುರಿಸುವ ಮಕ್ಕಳಿಗಾಗಿ ಆರ್ಗನೈಸೇಷನ್ ಫಾರ್ ರೇರ್ ಡಿಸೀಸ್ ಇಂಡಿಯಾ(ಒಆರ್ ಡಿಐ) ಸಂಘಟನೆ ಕಳೆದ 2 ವರ್ಷಗಳಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಬೆಂಗಳೂರು ಹಾಗೂ ಮುಂಬೈ ನಲ್ಲಿ ಫೆ.25 ರಂದು ಕಬ್ಬನ್ ಪಾರ್ಕ್ ನಿಂದ ಆಯೋಜಿಸಲಾಗಿದ್ದ 7 ಕಿ.ಮೀ ರೇಸ್ 7 ಮ್ಯಾರಥಾನ್ ನಲ್ಲಿ ನಟ ನಟರಾಜ್ ಭಾಗಿಯಾಗಿದ್ದು ವಿಶೇಷವಾಗಿತ್ತು. 
ಬೆಳಕು ಅಂಧ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ 
ಸಾಮಾನ್ಯವಾಗಿ ಸಿನಿಮಾ ಚಿತ್ರೀಕರಣದಲ್ಲಿ ವ್ಯಸ್ತರಾಗಿರುವ ನಟ ನಟರಾಜ್ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಫೆ.23 ರಂದು ತಮ್ಮ ಜನ್ಮದಿನಾಚರಣೆಯನ್ನು ಬೆಳಕು ಅಕಾಡೆಮಿಯಲ್ಲಿ ಅಂಧ ಮಕ್ಕಳೊಂದಿಗೆ ಆಚರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com