ಲವರ್ ಬಾಯ್ ಗೂ ಸೈ, ಕೋಪಿಷ್ಠನ ಪಾತ್ರಕ್ಕೂ ಸೈ: ಮನೋರಂಜನ್

2018ರ ಹೊಸ ವರ್ಷದಲ್ಲಿ ನಂದ ಕಿಶೋರ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ...
ಮನೋರಂಜನ್
ಮನೋರಂಜನ್
Updated on
2018ರ ಹೊಸ ವರ್ಷದಲ್ಲಿ ನಂದ ಕಿಶೋರ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಮೊದಲ ಚಿತ್ರ ಬೃಹಸ್ಪತಿಯಾಗಿದೆ. ನಟ ಮನೋರಂಜನ್ ಗೆ ಇದು ಎರಡನೇ ಚಿತ್ರ. ಇದರಲ್ಲಿ ಮನೋರಂಜನ್ ಗೆ ಮಾಸ್ ಲುಕ್ ಇದೆ.
ವಿವಿಧ ಪ್ರಕಾರಗಳನ್ನು ಪ್ರಯೋಗ ಮಾಡುವ ಪ್ರಯತ್ನದಲ್ಲಿ ಮನೋರಂಜನ್ ತೊಡಗಿದ್ದಾರೆ. ನಂತರ ತಮಗೆ ಯಾವುದು ಹೊಂದಿಕೆಯಾಗುತ್ತದೆ, ಉತ್ತಮವೆಂದು ನೋಡಿಕೊಂಡು ಅದನ್ನು ಆಯ್ದುಕೊಳ್ಳಲಿದ್ದಾರಂತೆ ಮನೋರಂಜನ್. 
ಸಿನಿಮಾ ಬಗ್ಗೆ ನಟ ಮನೋರಂಜನ್ ಅವರನ್ನು ಮಾತಿಗೆಳೆದಾಗ: ನಾನು ಸಾಹೇಬ ಚಿತ್ರದಲ್ಲಿ ನಟನೆ ಆರಂಭಿಸಿದೆ. ರವಿ ವರ್ವ ಕೊರಿಯೊಗ್ರಫಿ ಮಾಡಿದ್ದ ಸಿನಿಮಾದಲ್ಲಿ ಎರಡು ಫೈಟಿಂಗ್ ಸೀನ್ ಗಳಿದ್ದವು. ಹೊಸಬನಾಗಿ ಈ ಚಿತ್ರದಲ್ಲಿ ಅಭಿನಯಿಸಿದ ನಂತರ ನನಗೆ ಮಾಸ್ ಫಿಲ್ಮ್ ಬಗ್ಗೆ ಪ್ರೇಕ್ಷಕರಲ್ಲಿ ಬೇರೆಯದ್ದೇ ಆದ ಗ್ರಹಿಕೆಯಿದೆ ಎಂದು ಗೊತ್ತಾಯಿತು. ಪ್ರೇಕ್ಷಕರ ಪ್ರಕಾರ ಮಾಸ್ ಫಿಲ್ಮ್ ಎಂದರೆ ಬೊಂಬಾಟ್ ಸಂಭಾಷಣೆಗಳು, ಹೀರೋನ ಪ್ರವೇಶ, ಫೈಟ್ಸ್ ಇತ್ಯಾದಿಗಳಿರುತ್ತವೆ. ನನ್ನ ಎರಡನೇ ಸಿನಿಮಾ ಬೃಹಸ್ಪತಿಯಲ್ಲಿ ಇವೆಲ್ಲವುಗಳು ಇಲ್ಲದಿದ್ದರೂ ಕೂಡ ಕೆಲವೊಂದು ಅಂಶಗಳಿರುವುದರಿಂದ ನನ್ನನ್ನು ಮಾಸ್ ಹೀರೋ ಸ್ಥಾನದಲ್ಲಿ ನಿಲ್ಲಿಸಲಿದೆ. ಮಾಸ್ ಅಂದರೆ ಕಮರ್ಷಿಯಲ್ ಚಿತ್ರಗಳು ಎಂದು ಕೂಡ ಅರ್ಥೈಸಿಕೊಳ್ಳುತ್ತೇನೆ. ಹಾಗೆಂದು ಯಾರನ್ನೊ ಒಬ್ಬರನ್ನು ಹೊಡೆಯುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸುತ್ತೇನೆ. ಅದಕ್ಕಿಂತಲೂ ಹೆಚ್ಚಾಗಿ ಬೃಹಸ್ಪತಿಯಲ್ಲಿ ಸಮಾಜಕ್ಕೆ ಬೇಕಾದ ಸಂದೇಶವಿದೆ ಎನ್ನುತ್ತಾರೆ.
ಕೆಲವರನ್ನು ಮಾತ್ರ ಪ್ರೇಕ್ಷಕರು ಮಾಸ್ ಹೀರೋ ಎಂದು ಯಾಕೆ ಒಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಉತ್ತರಿಸಿದ ಮನೋರಂಜನ್, ನಾನು ಸಿನಿಮಾ ಅಭಿನಯಕ್ಕೆ ಬರುವ ಮುನ್ನ ನಾನು ಲವರ್ ಬಾಯ್ ಪಾತ್ರಕ್ಕೆ ಯೋಗ್ಯ ಎಂದು ಹೇಳುತ್ತಿದ್ದರು. ನಂತರ ಆ ಅಭಿಪ್ರಾಯ ಬದಲಾಯಿತು.ಇದೀಗ ಸ್ಟಂಟ್ ಪಾತ್ರಗಳನ್ನು ಆಕ್ಷನ್ ಚಿತ್ರಗಳನ್ನು ಕೂಡ ಮಾಡುವಂತೆ ನನಗೆ ಸಲಹೆ ನೀಡುತ್ತಿದ್ದಾರೆ. ಹೀಗಾಗಿ ನಾನು ಕಮರ್ಷಿಯಲ್ ಅಂಶಗಳಿರುವ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಮೂರನೇ ಚಿತ್ರದಲ್ಲಿ ಫೈಟಿಂಗ್ ಮತ್ತು ಡ್ಯಾನ್ಸ್ ಎರಡೂ ಇರಬೇಕೆಂದು ಬಯಸುತ್ತೇನೆ. ಎರಡೂ ಪಾತ್ರಗಳಿಗೆ ನ್ಯಾಯ ಒದಗಿಸಬಹುದೆಂದು ಭಾವಿಸಿದ್ದೇನೆ ಎನ್ನುತ್ತಾರೆ ಮನೋರಂಜನ್.
ಮನೋರಂಜನ್ ಚಿತ್ರ ಬೃಹಸ್ಪತಿಯ ಟ್ರೇಲರ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ಅದರಲ್ಲಿ ರವಿಚಂದ್ರನ್ ಅವರ ಸಿಗ್ನೇಚರ್ ಸ್ಟ್ರೈಲ್ ಕೂಡ ಸ್ವಲ್ಪ ಇದೆ. ನಿರ್ದೇಶಕ ನಂದ ಕಿಶೋರ್ ನನ್ನನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಮೇಲಿನ ಪ್ರೀತಿಯಿಂದ ನನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ಚಿತ್ರ ತಯಾರಿಸುತ್ತಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com