ನನ್ನ ಹೆತ್ತವರು ನನ್ನನ್ನು ನೊಡಿರುವುದಕ್ಕಿಂತ ಹೆಚ್ಚು ಬಾರಿ ನಾನು ಈ ಚಿತ್ರ ವೀಕ್ಷಿಸಿದ್ದೇನೆ: ಸಾದ್ ಖಾನ್

"ಚಿತ್ರವು ಬಿಡುಗಡೆ ಆಗುವುದಕ್ಕೆ ಮನ್ನವೇ ನಾನು ಎಲ್ಲಾ ರೀತಿಯಲ್ಲಿಯೂ ಪರಿಶೀಲಿಸಿದ್ದೇನೆ ಮತ್ತು ನನ್ನೊಂದಿಗೆ ನನ್ನ ಸಹಾಯಕಿ ಚಾಂದಿನಿ, ಕಿರಿಕ್ ಪಾರ್ಟಿಯ ಎಡಿಟರ್ ಸಚಿನ್ ಸಹ ಇದ್ದು .....
ಹಂಬಲ್ ಪೊಲಿಟಿಷಿಯನ್ ನೋಗರಾಜ್
ಹಂಬಲ್ ಪೊಲಿಟಿಷಿಯನ್ ನೋಗರಾಜ್
Updated on

ಬೆಂಗಳೂರು: "ಚಿತ್ರವು ಬಿಡುಗಡೆ ಆಗುವುದಕ್ಕೆ ಮನ್ನವೇ ನಾನು ಎಲ್ಲಾ ರೀತಿಯಲ್ಲಿಯೂ ಪರಿಶೀಲಿಸಿದ್ದೇನೆ ಮತ್ತು ನನ್ನೊಂದಿಗೆ ನನ್ನ ಸಹಾಯಕಿ ಚಾಂದಿನಿ, ಕಿರಿಕ್ ಪಾರ್ಟಿಯ ಎಡಿಟರ್ ಸಚಿನ್ ಸಹ ಇದ್ದು ಈ ಚಿತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಚಿತ್ರದ ಬಗ್ಗೆ ನಾನು ಭರವಸೆ ಹೊಂದಿದ್ದೇವೆ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇನೆ"  'ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌' ಚಿತ್ರದ ನಿರ್ದೇಶಕ ಸಾದ್ ಖಾನ್ ಚೆನ್ನೈನಲ್ಲಿದ್ದು ಈ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾತುಗಳನ್ನಾಡಿದ್ದಾರೆ

"ಕಳೆದ ಎಂಟು ತಿಂಗಳಲ್ಲಿ ನಾನು ಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸಿದ್ದೇನೆ. ಈ ವರ್ಷ ನನ್ನ ಹೆತ್ತವರು ನನ್ನನ್ನು ನೋಡಿದ್ದಕ್ಕಿಂತ ಹೆಚ್ಚು ಬಾರಿ ನಾನು ಚಿತ್ರವನ್ನು ನೋಡಿದ್ದೇನೆ. ಈ ಚಲನಚಿತ್ರವು ಶುದ್ಧ ಹಾಸ್ಯದಿಂದ ಕೂಡಿದೆ ದಾನೀಶ್‌ ಮತ್ತು ನಾನು ಅದರ ಕಥೆ ಬರೆಯುವಾಗ ಅದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ನಾವು ಕೆಟ್ಟ ಹಾಸ್ಯದಿಂದ ಸಾಕಷ್ಟು ದೂರವಿರಲು ಬಯಸಿದ್ದೆವು" ದಾನಿಶ್ ಪಾತ್ರ, ಅವರ ಅಭಿನಯವನ್ನು ನಿರ್ದೇಶಕರು ಪ್ರಶಂಸಿಸಿದ್ದಾರೆ.
"ನನ್ನ ಮೊದಲ ಕಿರು ಚಿತ್ರ ಎನದರ್ ಕೈಂಡ್ ಆಫ್ ಬ್ಲ್ಯಾಕ್ ಅನ್ನು ಕೇನ್ಸ್ 2008 ರಲ್ಲಿ ಪ್ರದರ್ಶಿಸಲಾಯಿತು. ಇದು ಮರೆಯಲಾಗದ ಕ್ಷಣವಾಗಿದೆ ಮತ್ತು ನಾನು 22 ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಮತ್ತು ಇದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಚಿತ್ರದ ಟ್ರೇಲರ್ ಹಾಗೂ ಟೀಸರ್ ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ" ಸ್ಟೇಷನ್ ಮತ್ತು ಲವ್ ನಂತರದ ಸಾದ್ ಅವರ ಮೂರನೇ ಚಿತ್ರ ಇದಾಗಿದ್ದು ಅವರ ನಿರ್ದೇಶನದಲ್ಲಿ ಬರುತ್ತಿರುವ ಕನ್ನಡದ ಮೊದಲ ಚಿತ್ರವಾಗಿದೆ.
"ಈ ಚಲನಚಿತ್ರದ ನಿರ್ಮಾಣದ ಸಮಯದಲ್ಲಿ ನಿರ್ಮಾಪಕರು ನನಗೆ ಬಹಳ ಸ್ವಾತಂತ್ರ್ಯವನ್ನು ನೀಡಿದ್ದಾರೆ ಮತ್ತು ಅವರು ನನ್ನ ಪ್ರತಿಭೆಗೆ ಗೌರವವನ್ನು ತೋರಿಸಿದ್ದಾರೆ. ನಾನು ಅವರ ನಂಬಿಕೆಗೆ ಬೆಲೆ ನೀಡುತ್ತೇನೆ." ನಿರ್ಮಾಪಕರ ಕುರಿತಂತೆ ಸಾದ್ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
ಈ ಚಿತ್ರ ಯಾರೊಬ್ಬರಿಂದ ಆದದ್ದಲ್ಲ, ಇದೊಂದು ತಂಡದ ಕೆಲಸ. ಸೃಜನಶೀಲ ಮಾದರಿ.  ನಟ ಮತ್ತು ಲೇಖಕ ದಾನಿಶ್ ಸೇಟ್, ಚಲನಚಿತ್ರ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಟ ನಿರ್ದೇಶಕ ನಿರ್ಮಾಪಕ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ನಿರ್ಮಾಪಕ ಹೇಮಂತ್ ಎಂ.ರಾವ್ ಎಲ್ಲರ ಶ್ರಮ ಇದರಲ್ಲಿದೆ ಎನ್ನುಉವುದು ಸಾದ್,ಮಾತು. ಈ ಚಿತ್ರದಲ್ಲಿ ಸುಮಖಿ ಸುರೇಶ್ ಮತ್ತು ವಿಜಯ್ ಚಂದೂರು ಅಭಿನಯವಿದೆ, ಶ್ರೀಚರಣ್ ಪಕಲಾ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com