ಚಿತ್ರ ತಂಡ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಶೀರ್ಷಿಕೆ ಬದಲಾವಣೆ ಸೇರಿದಂತೆ ಒಟ್ಟು 5 ಬದಲಾವಣೆಗಳನ್ನು ಮಾಡಿದ ನಂತರ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. " ಪದ್ಮಾವತ್ ನನ್ನ ಕನಸಾಗಿದ್ದು, ಈಗ ನನಸಾಗುತ್ತಿದೆ. ರಜಪೂತರ ಶೌರ್ಯ, ಬಲಿದಾನಗಳ ಕುರಿತು ಆಕರ್ಷಿತನಾಗಿದ್ದೇನೆ, ಈ ಚಿತ್ರ ರಜಪೂತರ ಶೌರ್ಯ ಬಲಿದಾನಗಳಿಗೆ ಗೌರವಾರ್ಪಣೆ ಎಂದು ನಿರ್ದೇಶಕ ಬನ್ಸಾಲಿ ಹೇಳಿದ್ದಾರೆ. ಇದೇ ವೇಳೆ ಚಿತ್ರ ಬಿಡುಗಡೆಗೆ ಬೆಂಬಲಿಸಿದ ಎಲ್ಲರಿಗೂ ಬನ್ಸಾಲಿ ಧನ್ಯವಾದ ತಿಳಿಸಿದ್ದಾರೆ.