ಕಳೆದ ಶನಿವಾರ ಶಿರಸಿಯ ರಾಘವೇಂದ್ರ ಮಠದಲ್ಲಿ ಪ್ರಕಾಶ್ ರೈ ಅವರು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಬಿಜೆಪಿ ಕಾರ್ಯಕರ್ತರು ನಿನ್ನೆ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದರು. ಈ ಕುರಿತು ಇಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ನಾನು ಶಿರಸಿ ಪಟ್ಟಣದಲ್ಲಿ ಮಾತನಾಡಿದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿ, ಶುದ್ಧೀಕರಿಸುತ್ತಿದ್ದಾರೆ... ಹಸುವಿನ ಮೂತ್ರವನ್ನು(ದೈವಿಕ ಗೋಮೂತ್ರ) ಚಿಮುಕಿಸುವ ಮೂಲಕ......, ನಾನು ಎಲ್ಲಿಗೇ ಹೋಗುತ್ತಿದ್ದರೂ ಈ ಶುದ್ಧೀಕರಣ ಮತ್ತು ಸ್ವಚ್ಛತೆ ಸೇವೆಯನ್ನು ನೀವು ಮುಂದುವರಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.