ಬೆಂಗಳೂರು: ಕನ್ನಡದಲ್ಲಿ ದೊಡ್ಡ ಸ್ಟಾರ್ ನಟರೊಡನೆ ತೆರೆ ಮೇಲೆ ಕಾಣಿಸಿಕೊಂಡ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಇದೀಗ ಒಂದರ ಹಿಂದೊಂದರಂತೆ ಚಿತ್ರಗಳಲ್ಲಿ ನಟಿಸುವ ಮೂಲಕ ಸದಾ ಬಿಡುವಿಲ್ಲದವರಾಗಿದ್ದಾರೆ. ಈ ನಟಿ ಇತ್ತೀಚೆಗೆ ಪ್ರೀತಮ್ ಗುಬ್ಬಿ ನಿರ್ದೇಶನ, ದುನಿಯಾ ವಿಜಯ್ ನಟನೆಯ 'ಜಾನಿ ಜಾನಿ ಯಸ್ ಪಪ್ಪಾ' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದರೆನ್ನುವುದು ಗಮನಾರ್ಹ.ಇನ್ನು ಮಹೇಶ್ ನಿರ್ದೇಶನದ ಸತೀಶ್ ನೀನಾಸಂ ಅಭಿನಯದ ಚಿತ್ರ 'ಅಯೋಗ್ಯ' ದಲ್ಲಿ ಸಹ ರಚಿತಾ ಕೆಲಸ ಮಾಡುತ್ತಿದ್ದು ಇದರ ಚಿತ್ರೀಕರಣ ಭರದಿಂದ ಸಾಗಿದೆ. ಇನ್ನು ಈಕೆಯ ಮುಂದಿನ ಚಿತ್ರ ನಿಖಿಲ್ ಕುಮಾರ್ ನಟನೆ, ಹರ್ಷ ನಿರ್ದೇಶನದ 'ಸೀತಾರಾಮ ಕಲ್ಯಾಣ' ಇದೇ ಜ.19ರಿಂದ ಪ್ರಾರಂಭವಾಗಲಿದೆ.
Advertisement