ಕನ್ನಡದಲ್ಲಿ ಸಹ ರೊಮ್ಯಾನ್ಸ್ ಮಾಡಬಹುದು :ಗುರುನಂದನ್

ಶುಕ್ರವಾರ ಎಂದರೆ ಸ್ಯಾಂಡಲ್ ವುಡ್ ನಟ ನಟಿಯರ ಪಾಲಿಗೆ ಆತಂಕದ ದಿನ.
ಗುರುನಂದನ್
ಗುರುನಂದನ್
Updated on
ಬೆಂಗಳೂರು: ಶುಕ್ರವಾರ ಎಂದರೆ ಸ್ಯಾಂಡಲ್ ವುಡ್ ನಟ ನಟಿಯರ ಪಾಲಿಗೆ ಆತಂಕದ ದಿನ. ತಿಂಗಳುಗಟ್ಟಲೆ ಶ್ರಮ ಪಟ್ಟಿ ಕೆಲ್ಸ ಮಾಡಿದ ಚಿತ್ರವು ಪ್ರೇಕ್ಷಕರ ಮುಂದೆ ಬರುವ ದಿನವಾದ ಅಂದು ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಳ್ಳುವ್ಚರೋ, ತಿರಸ್ಕರಿಸುತ್ತಾರೆಯೋ ಎನ್ನುವ ಆತಂಕ ಅವರದಾಗಿರುತ್ತದೆ. ಹಾಗೆಯೇ ಈ ವಾರ ನಟ ಗುರುನಂದನ್ ಸಹ ಆತಂಕಗೊಂಡಿದ್ದರು. ಅವರ ಬಹು ನಿರೀಕ್ಷಿತ ಚಿತ್ರ 'ರಾಜು ಕನ್ನಡ ಮೀಡಿಯಂ' ಈ ವಾರ ತೆರೆ ಕಾಣಲಿದೆ. ಇವರ ಮೊದಲ ಚಿತ್ರ ಫಸ್ಟ್ ರ್ಯಾಂಕ್ ರಾಜುಗೆ ಒಳ್ಳೆಯ ಹೆಸರು ಬಂದಿದ್ದು ಎರಡನೇ ಚಿತ್ರವಾದ ಸ್ಮೈಲ್ ಪ್ಲೀಸ್ ಮಾತ್ರ ನಿರೀಕ್ಷಿಸಿದಷ್ಟು ಯಶಸ್ವಿಯಾಗಿರಲಿಲ್ಲ.
"ನಮ್ಮ ವೃತ್ತಿಜೀವನವು ನೀರಿನ ಮೇಲಿನ ಗುಳ್ಳೆಯಂತೆ. ಒಂದು ಸಣ್ಣ ತಪ್ಪು ನಮ್ಮ ಹಿಂದಿನ ಪ್ರಯತ್ನಗಳನ್ನೆಲ್ಲಾ ನಿಷ್ಫಲಗೊಳಿಸುತ್ತದೆ. ಆಗ ನಾವು ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಗುತ್ತದೆ. ಸುಮಾರು ಒಂದೂವರೆ ವರ್ಷಗಳ ನಿರೀಕ್ಷೆಯ ರಾಜು ಕನ್ನಡ ಮೀಡಿಯಂ ಇಂದು ಬಿಡುಗಡೆಯಾಗುತ್ತಿದೆ, ನನಗೆ ಈ ಚಿತ್ರದ ಬಗೆಗೆ ಅಪಾರ ಭರವಸೆ ಇದೆ, ಜತೆಗೆ ಭಯ ಕೂಡ ಇದೆ. ಪ್ರೇಕ್ಷಕ ಯಾವ ರೀತಿ ತೆಗೆದುಕೊಳ್ಳುತ್ತಾರೆ ನೋಡಬೇಕು." ಗುರುನಂದನ್ ಹೇಳಿದರು.
ಇವರ ಆತ್ಮೀಯರು, ಸ್ನೇಹಿತರ ವಲಯದಲ್ಲಿ ರಾಜು ಎಂಡೇ ಕರೆಸಿಕೊಳ್ಳುವ ಗುರುನಂಡನ್ ಬಾಲಿವುಡ್ ನ ಅಮೀರ್ ಕಾನ್ ಶೈಲಿಯನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಕಥೆಗಳ ಆಯ್ಕೆ ವಿಚಾರದಲ್ಲಿ ಈ ನಾಯಕ ನಟ ಅಮೀರ್ ಅವರನ್ನು ಹಿಂಬಾಲಿಸುತ್ತಿದ್ದಾರೆ. "ನಾನು ಮಾಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ.  ಆದರೆ ಹಾಸ್ಯ ಮಿಶ್ರಿತ ಕೌಟುಂಬಿಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರೊಡನೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇನೆ.
"ಈ ಚಿತ್ರವು ಕನ್ನಡ ಮಾದ್ಯಮದಲ್ಲಿ ಕಲಿತ ರಾಜುವಿನ ಕಥೆಯಾಗಿದೆ.ಇನ್ನು ಈ ಚಿತ್ರದ ಪಾತ್ರವಾದ ರಾಜುವಿನ ಕಥೆಗೆ ನಾನು ನನ್ನ ಜೀವನವನ್ನೂ ಹೋಲಿಸಿಕೊಳ್ಳಬಹುದು. ನಾನು ಕೂಡ ಕನ್ನಡ ಮಾದ್ಯಮದಲ್ಲಿ ಕಲಿತೆ. ಬೆಂಗಳೂರಿಗೆ ಬಂಡ ಆರಂಭದಲ್ಲಿ ನಾನು ಸಹ ಸಾಕಷ್ಟು ಗೊಂದಲಕ್ಕೆ ಸಿಕ್ಕಬೇಕಾಯಿತು. ನನ್ನ ಸ್ವ ಅನುಭವವು ನನಗೆ ಈ ಚಿತ್ರದಲ್ಲಿ ನೆರವಿಗೆ ಬಂದಿದೆ ಎನ್ನುವುದು ತಪ್ಪಲ್ಲ.
"ಕಾಸ್ಮೊಪಾಲಿಟನ್ ಬೆಂಗಳುರಿನಲ್ಲಿ ಇಂಗ್ಲಿಷ್ ಮಾತನಾಡುವ ಜನರೊಡನೆ ನಾವು ಹೋರಾಡಬೇಕು. ಗ್ರಾಮಗಳಿಂದ ಬಂದು ಇಲ್ಲಿನ ಇಂಗ್ಲೀಷ್ ವ್ಯಾಮೋಹಿಗಳ ಜತೆ ಮಾತನಾಡುತ್ತಾ, ವ್ಯವಹರಿಸಿ ಗೆದ್ದವರೂ ಅನೇಕ ಜನರಿದ್ದಾರೆ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಯಾವುದನ್ನು ಬೇಕಾದರೂ ಸಾಧಿಸಬಹುದು ಎಂದು ನಾನು ನಂಬುತ್ತೇನೆ. ಈ ಉದಾಹರಣೆ ಕಾಣಲು ಬೆಂಗಳೂರಿಗಿಂತ ಉತ್ತಮ ಸ್ಥಳ ಬೇರೆ ಬೇಕಿಲ್ಲ. ಇಲ್ಲಿ ವಿವಿಧ ಭಾಷೆಗಳಲ್ಲಿ ಂಆತನಾಡುವ ಜನರಿದ್ದಾರೆ. ನಾವು ವೈಫಲ್ಯಕ್ಕೆ ಭಯಪಡಬಾರದು ಅಥವಾ ಯಶಸ್ಸು ಸಿಕ್ಕಾಗ ಬೀಗಬಾರದು. ಸಮತೋಲನ ಮನಸ್ಥಿತಿಯನ್ನು ಕಾಯ್ದುಕೊಳ್ಳಬೇಕು"
ಪ್ರತಿಯೊಬ್ಬರೂ ಇಂಗ್ಲೀಷ್ ಚೆನ್ನಾಗಿ ಬಲ್ಲವರಾಗಿರಬೇಕು ಎಂಡೇನಿಲ್ಲ ಎನ್ನುವ ಗುರುನಂದನ್ "ಚೀನಾ ಮತ್ತು ಫ್ರಾನ್ಸ್ ನಂತಹಾ ಅನೇಕ ದೇಶಗಳಲ್ಲಿ, ಸ್ಥಳೀಯರು ತಮ್ಮ ಸ್ಥಳಿಯ ಭಾಷೆಯಲ್ಲಿ ಮಾತನಾಡಲು ಬಯಸುತ್ತಾರೆ ಮತ್ತು ಅಗತ್ಯವಿದ್ದರೆ ಮಾತ್ರ ಭಾಷಾಂತರಕಾರನನ್ನು ಬಳಸುತ್ತಾರೆ. ಇಂಗ್ಲೀಷ್ ಇಂದಿನ ಜೀವನಕ್ಕೆ ಅಗತ್ಯ ಎನ್ನುವುದು ನಿಜ ಆದರೆ ದು ಅನಿವಾರ್ಯವಾಗಿಲ್ಲ. ಕನ್ನಡದಲ್ಲಿ ತಮ್ಮ ಚೆಕ್ ಗಳಿಗೆ ಸಹಿ ಮಾಡುವ ದೊಡ್ಡ ಉದ್ಯಮಿಗಳು ನನಗೆ ವೈಯಕ್ತಿಕವಾಗಿ ಗೊತ್ತಿದೆ. ಅವರಿ ವಿಶ್ವದಾದ್ಯಂತ ಹೆಸರಾದ ಉದ್ಯಮಿಗಳಾಗಿದ್ದಾರೆ.
"ರೊಮ್ಯಾನ್ಸ್ ಸಹ ಕನ್ನಡದಲ್ಲಿ ಇರಲಿ, ಆತ್ಮವಿಶ್ವಾಸವಿದ್ದರೆ ಏನನ್ನೂ ಮಾಡಬಹುದು. ಭಾಷೆ ಎನ್ನುವುದು ಕೇವಲ ಸಂವಹನ ಮಾದ್ಯಮ" ಗುರುನಂದನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com