ಚೂರಿಕಟ್ಟೆಯಲ್ಲಿ ಗನ್ ನೋಡುವಾಗ ಭಯವಾಗುತ್ತಿತ್ತು: ಪ್ರವೀಣ್ ತೇಜ್

ಸಿಂಪಿಲ್ಲಾಗ್ ಇನ್ನೊಂದು ಲವ್ ಸ್ಟೋರಿ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ...
ಚೂರಿಕಟ್ಟೆ ಸಿನಿಮಾ ಪೋಸ್ಟರ್
ಚೂರಿಕಟ್ಟೆ ಸಿನಿಮಾ ಪೋಸ್ಟರ್
Updated on
ಸಿಂಪಿಲ್ಲಾಗ್ ಇನ್ನೊಂದು ಲವ್ ಸ್ಟೋರಿ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಪ್ರವೀಣ್ ತೇಜ್, ಅವರ ಮುಂದಿನ ಚಿತ್ರ ಚೂರಿಕಟ್ಟೆ. ಇದು ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಿಂಪ್ ಲ್ಲಾಗ್ ಇನ್ನೊಂದು ಸ್ಟೋರಿಯಲ್ಲಿ ಲವರ್ ಬಾಯ್ ಪಾತ್ರ ನಿರ್ವಹಿಸಿದ್ದ ಪ್ರವೀಣ್ ತೇಜ್ ಇಲ್ಲಿ ಸಿಟ್ಟಿನ ಯುವಕನ ಪಾತ್ರ ನಿರ್ವಹಿಸಿದ್ದಾರೆ. ಸಿಟ್ಟು ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆಯಂತೆ.
ಚೂರಿಕಟ್ಟೆ ನಿರ್ದೇಶಕ ರಘು ಶಿವಮೊಗ್ಗ ಮಲೆನಾಡು ಕಡೆಯ ಪ್ರವೀಣ್ ತೇಜ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಸಿಂಪಿಲ್ಲಾಗ್ ಇನ್ನೊಂದು ಲವ್ ಸ್ಟೋರಿ ನಂತರ ಉತ್ತಮ ತಂಡದ ಜೊತೆ ಕೆಲಸ ಮಾಡಲು ನಾನು ಬಯಸುತ್ತಿದ್ದೆ. ಅದಕ್ಕೆ ತಕ್ಕಂತೆ ಚೂರಿಕಟ್ಟೆ ಚಿತ್ರತಂಡ ಸಿಕ್ಕಿದೆ ಎಂದು ಖುಷಿಯಾಗಿದ್ದಾರೆ ಪ್ರವೀಣ್ ತೇಜ್.
ಈ ಚಿತ್ರದಲ್ಲಿ ರಘು ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ಹಂತದಲ್ಲಿ ಸಂಭಾಷಣೆ ಬರವಣಿಗೆ, ಸಂಗೀತ ರಚನೆ, ಸ್ಥಳಗಳ ಹುಡುಕಾಟದಲ್ಲಿ ನಾನು ತೊಡಗಿಕೊಂಡಿದ್ದೆ. ನಾನು ಹುಟ್ಟಿ ಬೆಳೆದ ಮಲೆನಾಡಿನಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದಿದೆ. ಅಲ್ಲಿರುವ ಸುಂದರ ತಾಣಗಳನ್ನು ಚಿತ್ರತಂಡಕ್ಕೆ ತೋರಿಸಲು ಸಹಾಯವಾಯಿತು ಎನ್ನುತ್ತಾರೆ.
ಚಿತ್ರದಲ್ಲಿ ಪಿಸ್ತೂಲ್ ಕಥೆ ಹೇಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿರ್ದೇಶಕ ಈ ಹಿಂದೆ ಹೇಳಿದ್ದರು. ಆಯುಧವನ್ನು ಹಿಡಿದುಕೊಳ್ಳುವುದು ನನಗೆ ಭೀತಿಯ ವಾತಾವರಣ ಮೂಡಿಸಿತು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com