ಬೆಲ್ ಬಾಟಂ ಸುಂದರಿ ಹರಿಪ್ರಿಯಾ

ಇತ್ತೀಚೆಗೆ ನಿರ್ದೇಶಕ ಜಯತೀರ್ಥ ತಮ್ಮ ಫೇಸ್ ಬುಕ್ ಪುಟದಲ್ಲಿ ಆರಂಭದಲ್ಲಿ ಬೆಲ್ ಬಾಟಂ ಚಿತ್ರದ ಪೋಸ್ಟರ್ ಹಾಕಿ...
ಹರಿಪ್ರಿಯಾ
ಹರಿಪ್ರಿಯಾ
ಇತ್ತೀಚೆಗೆ ನಿರ್ದೇಶಕ ಜಯತೀರ್ಥ ತಮ್ಮ ಫೇಸ್ ಬುಕ್ ಪುಟದಲ್ಲಿ ಆರಂಭದಲ್ಲಿ ಬೆಲ್ ಬಾಟಂ ಚಿತ್ರದ ಪೋಸ್ಟರ್ ಹಾಕಿ ಪ್ರಶ್ನಾರ್ಥಕ ಚಿಹ್ನೆ ಕೊಟ್ಟು ಚಿತ್ರದ ಶೀರ್ಷಿಕೆ ಊಹಿಸುವಂತೆ ಚಿತ್ರಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದರು. 
ನಿನ್ನೆ ಫೇಸ್ ಬುಕ್ ಪೇಜ್ ನಲ್ಲಿ ಮತ್ತೊಂದು ಪೋಸ್ಟರ್ ಹಾಕಿ ಬೆಲ್ ಬಾಟಂ ಸುಂದ್ರಿ ಯಾರು ಎಂದು ಕೇಳಿದ್ದರು. ಅದಕ್ಕೆ ಅನೇಕರು ಹರಿಪ್ರಿಯಾ, ಶೃತಿ ಹರಿಹರನ್, ರಶ್ಮಿಕಾ ಮಂದಣ್ಣ, ಮಯೂರಿ ಇತ್ಯಾದಿ ಪ್ರತಿಕ್ರಿಯೆ ನೀಡಿದ್ದರು. 
ಇದೀಗ ಚಿತ್ರಕ್ಕೆ ನಾಯಕಿ ಹರಿಪ್ರಿಯಾ ಎಂದು ಮೂಲಗಳು ಖಚಿತಪಡಿಸಿವೆ. ನಿರ್ದೇಶಕ ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಹರಿಪ್ರಿಯಾ ರಿಷಬ್ ಶೆಟ್ಟಿ ನಿರ್ದೇಶನದ ರಿಕಿ ಸಿನಿಮಾದಲ್ಲಿ ನಟಿಸಿದ್ದರು.
ಚಿತ್ರದ ಮುಹೂರ್ತ ಇದೇ 29ರಂದು ನೆರವೇರಲಿದೆ. 80ರ ದಶಕದ ವಾತಾವರಣವನ್ನು ಚಿತ್ರದಲ್ಲಿ ಸೃಷ್ಟಿಸಲಾಗುತ್ತಿದ್ದು, ಆ ಸಮಯದ ನೋಟದಲ್ಲಿ ನಾಯಕ-ನಾಯಕಿಯನ್ನು ತೋರಿಸಲಾಗುತ್ತದೆ. ನೀರ್ ದೋಸೆ ಚಿತ್ರದ ನಂತರ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದಲ್ಲಿ ಅಭಿನಯಿಸುತ್ತಿರುವ ಹರಿಪ್ರಿಯಾಗೆ ಇದು ಮತ್ತೊಂದು ಒಳ್ಳೆಯ ಸಿನಿಮಾವಾಗಿದೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ಚಿತ್ರಕ್ಕೆ ಸುಂದರ ತಾಣಗಳಿಗಾಗಿ ಹುಡುಕಾಟ ನಡೆಸುತ್ತಿರುವ ಚಿತ್ರತಂಡ ಫೆಬ್ರವರಿ ಮಧ್ಯಭಾಗದಿಂದ ಶೂಟಿಂಗ್ ಪ್ರಾರಂಭಿಸಲು ಮುಂದಾಗಿದೆ. 
ಸಂತೋಷ್ ಕೆಸಿ ನಿರ್ಮಾಣದ ಬೆಲ್ ಬಾಟಂಗೆ ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ ಕಶ್ಯಪ್ ಅವರ ಛಾಯಾಗ್ರಹಣವಿದೆ. ಕೆಎಂ ಪ್ರಕಾಶ್ ಅವರು ಚಿತ್ರಕ್ಕೆ ಸಂಕಲನ ಒದಗಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com