ಪದ್ಮಾವತ್ ಚಿತ್ರದಲ್ಲಿ ಜೌಹಾರ್ ನ್ನು ವೈಭವೀಕರಿಸಲಾಗಿದೆ: ನಟಿ ಸ್ವರ ಭಾಸ್ಕರ್

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ವರೆಗೂ ಇತಿಹಾಸದ ದೃಷ್ಟಿಯಿಂದ ಚರ್ಚೆಯಾಗುತ್ತಿದ್ದ ಚಿತ್ರ ಈಗ ಮಹಿಳಾ ದೃಷ್ಟಿಕೋನದಿಂದಲೂ ಚರ್ಚೆಗೆ...
ಸ್ವರ ಭಾಸ್ಕರ್
ಸ್ವರ ಭಾಸ್ಕರ್
ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ವರೆಗೂ ಇತಿಹಾಸದ ದೃಷ್ಟಿಯಿಂದ ಚರ್ಚೆಯಾಗುತ್ತಿದ್ದ ಚಿತ್ರ ಈಗ ಮಹಿಳಾ ದೃಷ್ಟಿಕೋನದಿಂದಲೂ ಚರ್ಚೆಗೆ ಗ್ರಾಸವಾಗುತ್ತಿರುವಂತಿದೆ. 
ಪದ್ಮಾವತ್ ಚಿತ್ರ ವೀಕ್ಷಿಸಿರುವ ನಟಿ ಸ್ವರ ಭಾಸ್ಕರ್ ಚಿತ್ರದಲ್ಲಿ ಮಹಿಳೆಯರು ಅಗ್ನಿ ಪ್ರವೇಶ (ಜೌಹಾರ್) ಮಾಡುವುದನ್ನು ವೈಭವೀಕರಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ಅಷ್ಟೇ ಅಲ್ಲದೇ ವಿಧವೆಯರು, ಅತ್ಯಾಚಾರಕ್ಕೊಳಗಾದ ಮಹಿಳೆಯರು, ಯುವತಿಯರು, ವೃದ್ಧ ಮಹಿಳೆಯರು, ಗರ್ಭಿಣಿಯರು, ಪ್ರೌಢಾವಸ್ಥೆಯಲ್ಲಿರುವ ಯಾವುದೇ ಮಹಿಳೆಯರಿಗೆ ಬದುಕುವ ಹಕ್ಕಿದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ ಎಂದು ಸ್ವರ ಭಾಸ್ಕರ್ ಬನ್ಸಾಲಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 
ಪದ್ಮಾವತ್ ಚಿತ್ರ ಸತಿ ಹಾಗೂ ಜೌಹಾರ್ ಪದ್ಧತಿಯನ್ನು ವೈಭವೀಕರಿಸುವಂತಿದೆ ಎಂದು ಸ್ವರ ಭಾಸ್ಕರ್ ಹೇಳಿದ್ದಾರೆ. ಚಿತ್ರ ನೋಡಿದ ಬಳಿಕ ಅಸಮಾಧಾನಗೊಂಡಿರುವ ಸ್ವರ ಭಾಸ್ಕರ್ ಬನ್ಸಾಲಿ ಗೆ ಪತ್ರ ಬರೆದಿದ್ದು, ಹೆಣ್ಣನ್ನು ಕೇವಲ ಭೋಗದ ವಸ್ತುವನ್ನಾಗಿಯಷ್ಟೇ ನೋಡಲಾಗುತ್ತದೆ ಎಂಬ ಭಾವನೆ ಮೂಡಿಸುತ್ತದೆ, ಹಾಗಾದರೆ ಮಹಿಳೆಯರಿಗೆ ಬದುಕುವ ಹಕ್ಕೇ ಇಲ್ಲವೇ ಎಂಬ ಗತಕಾಲದ ಪ್ರಶ್ನೆಗೆ ಪದ್ಮಾವತ್ ಚಿತ್ರ ನಮ್ಮನ್ನು ತಂದು ನಿಲ್ಲಿಸಿಬಿಡುತ್ತದೆ ಎಂದು ಸ್ವರ ಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com