ಇಂದು ಸಿನಿಮಾ ಮತ್ತು ಅದರ ವ್ಯವಹಾರದ ನಿಯಮಗಳು ಬದಲಾಗಿದೆ: ನಟ ಗಣೇಶ್

ಚಮಕ್ ಚಿತ್ರ ಬಿಡುಗಡೆಗೆಯಾಗಿ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿರುವ ಬಗ್ಗೆ ಖುಷಿಯಾಗಿರುವ ನಟ ಗಣೇಶ್ ....
ಗಣೇಶ್
ಗಣೇಶ್
Updated on
ಚಮಕ್ ಚಿತ್ರ ಬಿಡುಗಡೆಗೆಯಾಗಿ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿರುವ ಬಗ್ಗೆ ಖುಷಿಯಾಗಿರುವ ನಟ ಗಣೇಶ್ ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ದಿನಗಳನ್ನು ನಿರೀಕ್ಷಿಸುತ್ತಿದ್ದಾರೆ. ಸುನಿ ನಿರ್ದೇಶನದ ಚಮಕ್ ಚಿತ್ರ 50 ದಿನಗಳ ಪ್ರದರ್ಶನದತ್ತ ಮುನ್ನುಗ್ಗುತ್ತಿದೆ. 
ನನ್ನ ಪಾತ್ರವನ್ನು ಜನರು ಇಷ್ಟಪಟ್ಟರೆ ಸಾಲದು. ಜನರು ಇಡೀ ಚಿತ್ರವನ್ನು ಮೆಚ್ಚಿಕೊಳ್ಳಬೇಕು, ಅದು ಚಮಕ್ ತಂಡಕ್ಕೆ ಸಿಕ್ಕಿದೆ. ಇಲ್ಲಿ ನಟರು ಹಾಡು, ಭಾವನೆಗಳು ಮತ್ತು ತಮಾಷೆಗಳಿಗೆ ಜೊತೆಯಾಗಬೇಕು ಎನ್ನುತ್ತಾರೆ ಗಣೇಶ್. 
ಸುಮಾರು ಒಂದು ವರ್ಷದವರೆಗೆ ತಮ್ಮ ಮುಂಗಾರು ಮಳೆ ಚಿತ್ರ ಥಿಯೇಟರ್ ಗಳಲ್ಲಿ ಪ್ರದರ್ಶನವಾಗಿರುವ ಬಗ್ಗೆ ಇಲ್ಲಿ ಪ್ರಸ್ತಾಪಿಸಿದ ಗಣೇಶ್, ಅಂದು 100 ದಿನಗಳಲ್ಲಿ ಚಿತ್ರದಿಂದ ಸಂಪಾದಿಸಿದ ಹಣವನ್ನು ಇಂದು ಎರಡು ವಾರಗಳಲ್ಲಿ ಸಂಪಾದಿಸುತ್ತೇವೆ. ಏಕೆಂದರೆ ಪ್ರತಿ ಸಿನಿಮಾ 250ರಿಂದ 300 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತವೆ. ಮಲ್ಟಿಪ್ಲೆಕ್ಸ್ ಗಳಲ್ಲಿ ನಮಗೆ 18ರಿಂದ 20 ಸ್ಕ್ರೀನ್ ಗಳು ಸಿಗುತ್ತವೆ. ಚಿತ್ರ ಬಿಡುಗಡೆಯಾದ ದಿನದಿಂದ ಮೂರು ದಿನಗಳಲ್ಲಿ ವಾರಾಂತ್ಯಗಳಲ್ಲಿ ಉತ್ತಮ ಗಳಿಕೆ ಮಾಡಲು ಸಾಧ್ಯ ಎನ್ನುತ್ತಾರೆ ಗಣೇಶ್.
ಇಂದು ಸಿನಿಮಾದ ನಿಯಮ ಮತ್ತು ವ್ಯಾಪಾರ ಬದಲಾಗಿದೆ. 9 ವರ್ಷಗಳ ಹಿಂದೆ ಕೆಲವು ಥಿಯೇಟರ್ ಗಳಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗುತ್ತಿದ್ದವು. ಇಂದು ಸಿನಿಮಾ ಉದ್ಯಮದ ಶೈಲಿ ಬದಲಾಗಿದೆ. ಕಳೆದ 5 ವರ್ಷಗಳಿಂದೀಚೆಗೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮಂದಿ ಮಲ್ಟಿಪ್ಲೆಕ್ಸ್ ಗಳಿಗೆ ಹೋಗುತ್ತಾರೆ. ಜನರು ಕೂಡ ಚಿತ್ರಗಳಲ್ಲಿ ಹೊಸದಲ್ಲಿ ಫ್ರೆಶ್ ಲುಕ್ ನ್ನು ಬಯಸುತ್ತಾರೆ ಎಂಬುದು ಗಣೇಶ್ ಅಭಿಪ್ರಾಯ.
ಗಣೇಶ್ ಅವರು ಇದೀಗ ಆರೆಂಜ್ ಚಿತ್ರದ ಶೂಟಿಂಗ್ ಗೆ ತಯಾರಾಗಿದ್ದಾರೆ. ಪ್ರಶಾಂತ್ ರಾಜ್ ನಿರ್ದೇಶನದ ಚಿತ್ರ ಮುಂದಿನ ತಿಂಗಳು 11ರಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಅಂದು ಗಣೇಶ್ ತಮ್ಮ 10ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆರೆಂಜ್ ಚಿತ್ರ ಒಂದು ವಿಭಿನ್ನ ಮನರಂಜನಾ ಚಿತ್ರವಾಗಿದೆ. ಜೂಮ್ ಚಿತ್ರವನ್ನು ಇಷ್ಟಪಟ್ಟವರು ಆರೆಂಜ್ ನ್ನು ಕೂಡ ಇಷ್ಟಪಡುತ್ತಾರೆ ಎಂಬ ನಂಬಿಕೆ ಗಣೇಶ್ ಅವರದ್ದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com