ತಮಿಳು ಚಿತ್ರದಲ್ಲಿ ಒಟ್ಟಾಗಿ ನಟಿಸಲಿರುವ ಪ್ರಿಯಾಮಣಿ, ತ್ರಿಶಾ

ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಮತೂಕ ಮಾಡುವುದನ್ನು ಸಮತೋಲನ ಕಾಯ್ದುಕೊಳ್ಳುತ್ತಿರುವ ನಟಿ ಪ್ರಿಯಾಮಣಿ ....
ತ್ರಿಶಾ, ಪ್ರಿಯಾಮಣಿ
ತ್ರಿಶಾ, ಪ್ರಿಯಾಮಣಿ
Updated on
ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಮತೂಕ ಮಾಡುವುದನ್ನು ಸಮತೋಲನ ಕಾಯ್ದುಕೊಳ್ಳುತ್ತಿರುವ ನಟಿ ಪ್ರಿಯಾಮಣಿ ತೆಲುಗು ಮತ್ತು ತಮಿಳಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನ ತೀರ್ಪುಗಾರ್ತಿಯಾಗಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಬೆಂಗಳೂರು ಎಂದು ಓಡಾಡಿಕೊಂಡು ಇದ್ದಾರೆ. 
ಮದುವೆ ನಂತರ ಅವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಿದ್ದು, ತಮಿಳಿನಲ್ಲಿ ಸಿನಿಮಾವೊಂದರಲ್ಲಿ ಹಲವು ವರ್ಷಗಳ ನಂತರ ಅಭಿನಯಿಸುತ್ತಿದ್ದಾರೆ.
ವೆರ್ನಿಕ್ ನಿರ್ದೇಶನದ ಚಿತ್ರದಲ್ಲಿ ತಮಿಳಿನ ಖ್ಯಾತ ನಟಿ ತ್ರಿಶಾ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಿರ್ದೇಶಕ ಬಾಲಾ ಜೊತೆ ಸಹಾಯಕ ನಿರ್ದೇಶಕರಾಗಿ ವೆರ್ನಿಕ್ ಇಷ್ಟು ದಿನ ಕೆಲಸ ಮಾಡುತ್ತಿದ್ದರು. ಫೆಬ್ರವರಿ 5ರಂದು ಚಿತ್ರದ ಫೊಟೋಶೂಟ್ ನಡೆಯಲಿದ್ದು ಆ ಬಳಿಕ ಹೆಚ್ಚಿನ ವಿವರ ನೀಡುವುದಾಗಿ ಪ್ರಿಯಾಮಣಿ ತಿಳಿಸಿದ್ದಾರೆ.
ಚಿತ್ರದಲ್ಲಿ ಹೀರೋ ಎಂಬ ಪರಿಕಲ್ಪನೆಯಿಲ್ಲ. ನಾನು ಮತ್ತು ತ್ರಿಶಾ ಪ್ರಧಾನ ಪಾತ್ರಗಳನ್ನು ವಹಿಸುತ್ತೇವೆ ಎಂದರು.
ಇನ್ನು ಕನ್ನಡದಲ್ಲಿ ಪ್ರಿಯಾಮಣಿ ಅಭಿನಯದ ಧ್ವಜ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಡಬ್ಬಿಂಗ್ ಕಾರ್ಯ ಮುಗಿಸಿದ್ದಾರೆ. ನನ್ನ ಪ್ರಕಾರ ಚಿತ್ರದಲ್ಲಿ ಪ್ರಿಯಾಮಣಿಯವರ 4 ದಿನಗಳ ಶೂಟಿಂಗ್ ಬಾಕಿಯಿದೆ. ಅದರಲ್ಲಿ ಕಿಶೋರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮಲಯಾಳಂನಲ್ಲಿ ಕೂಡ ಪ್ರಿಯಾಮಣಿಯವರ ಚಿತ್ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com