ಶ್ರೇಯಾ ಅಂಚನ್
ಸಿನಿಮಾ ಸುದ್ದಿ
ನಾನು ಎಲ್ಲಾ ಬಗೆಯ ಪಾತ್ರಗಳಲ್ಲಿ ಕಾಣಿಸಲು ಬಯಸುವೆ: ಶ್ರೇಯಾ ಅಂಚನ್
ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂದು ಬಯಸಿದ್ದ ಶ್ರೇಯಾ ಅಂಚನ್ ರಾಜ್ ಬಿ. ಶೆಟ್ಟಿ ಅವರ ’ಒಂದು ಮೊತ್ಟೆಯ ಕಥೆ’ ಮೂಲಕ ಇದನು ಸಾಧ್ಯವಾಗಿಸಿಕೊಂಡರು
ಬೆಂಗಳೂರು: ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂದು ಬಯಸಿದ್ದ ಶ್ರೇಯಾ ಅಂಚನ್ ರಾಜ್ ಬಿ. ಶೆಟ್ಟಿ ಅವರ ’ಒಂದು ಮೊತ್ಟೆಯ ಕಥೆ’ ಮೂಲಕ ಇದನು ಸಾಧ್ಯವಾಗಿಸಿಕೊಂಡರು ಇದೀಗ ನಟಿ ತಮ್ಮ ಎರಡನೇ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅಶ್ವಿನ್ ರಾವ್ ಪಲ್ಲಕ್ಕಿ ನಟಿಸಿರುವ ’ಕಥೆಯೊಂದು ಶುರುವಾಗಿದೆ’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವ ಕುತೂಹಲ ಅವರದಾಗಿದೆ.
ಸೆನ್ನಾ ಹೆಗ್ಡೆ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್ ಹಾಗು ಪೂಜಾ ದೇವರಿಯಾ ಪ್ರಮುಖ ಪಾತ್ರದಲ್ಲಿದ್ದಾರೆ."ನಾನು ಸ್ವರ್ಣ ಹೆಸರಿನ ಪಾತ್ರ ಮಾಡುತ್ತಿದ್ದು ದಿಗಂತ್ ಒಡೆತನದ ರೆಸಾರ್ಟ್ ನಲ್ಲಿ ಉದ್ಯೋಗಿಯ ಪಾತ್ರ ನನ್ನದು. ಅಶ್ವಿನ್ ರಾವ್ ಮತ್ತು ಪ್ರಕಾಶ್ ನನ್ನ ಸಹೋದ್ಯೋಗಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.ರೆಸಾರ್ಟ್ ಗೆ ಅತಿಥಿಗಳ ಆಗಮನವಾದಾಗ ಕಥೆ ತಿರುವು ಪಡೆಯುತ್ತದೆ" ಶ್ರೇಯಾ ಹೇಳುತ್ತಾರೆ.
ಸ್ಯಾಂಡಲ್ ವುಡ್ ಗೆ ಯಾರೇ ಹೊಸ ನಟ ನಟಿಯರು ಬಂದರೆ ಅವರಿಗೆ ರಾಜ್ ಬಿ ಶೆಟ್ಟಿ, ಸ್ನ್ನಾ ಅವರಂತಹಾ ನಿರ್ದೇಶಕರು ಸಿಗಬೇಕು.ಅವರುಗಳು ನಟರಿಗೆ ಸ್ವಾತಂತ್ರ ನೀಡುತ್ತಾರೆ. ಆಗ ನಾವುಗಳು ಇನ್ನಷ್ಟು ಉತ್ತಮವಾಗಿ ಅಭಿನಯಿಸಲು ಸಾಧ್ಯವಿದೆ. ರಾಜ್ ಅವರ ಚಿತ್ರ ನನಗೆ ಬ್ರೇಕ್ ಕೊಟ್ಟ್ತು. ಅವರ ಟ್ಯುಟೋರಿಯಲ್ ನಿಂದಾಗಿ ನಾನಿಂದು ಸೆನ್ನಾ ಅವರ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದೇನೆ" ಅವರು ಹೇಳಿದ್ದಾರೆ.
ಮೊಟ್ಟೆಯ ಕಥೆಗೆ ಮುನ್ನ ಈಕೆ ಎರಡು ತುಳು ಚಿತ್ರಗಳಲ್ಲಿ ಅಭಿನಯಿಸಿದ್ದರು.ಅಲ್ಲದೆ ಶ್ರುತಿ ಹರಿಹರನ್ ಜತೆ ಸೇರಿ ’ರೀಟಾ’ ಕಿರುಚಿತ್ರದಲ್ಲಿ ಸಹ ಕಾಣಿಸಿಕೊಂಡಿದಾರೆ. ಈ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ.
ನನಗೆ ಮೊಟ್ಟೆಯ ಕಥೆಯಲ್ಲಿ ಸಿಕ್ಕ ಮನ್ನಣೆಯು ಈ ಚಿತ್ರದಲ್ಲಿ ಸಹ ದೊರಕಲಿದೆ ಎಂದು ನಟಿ ಶ್ರೇಯಾ ಅಭಿಪ್ರಾಯ ಪಡುತ್ತಾರೆ "ನಾನು ಕಥೆಯೊಂದು... ಚಿತ್ರತಂಡದ ಭಾಗವಾಗಲು ಸಂತಸ ಪಡುತ್ತೇನೆ. ದಿಗಂತ್, ಪೂಜಾ ಸೇರಿ ಹಲವು ದೊಡ್ಡ ನಟರನ್ನು ನನಗೆ ಈ ಚಿತ್ರ ಪರಿಚಯಿಸಿದೆ. ನನ್ನಂತಹಾ ನಟಿಯನ್ನು ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿದ್ದ ರಕ್ಷಿತ್ ಶೆಟ್ಟಿ ಹಾಗು ಪುಷ್ಕರ್ ಅವರಿಗೆ ಅನನ್ನ ಅಭಿನಂದನೆಗಳು.ನನ್ನ ಮುಂದಿನ ದಿನಗಳಲ್ಲಿ ದೊಡ್ಡ್ ಅಬ್ಯಾನರ್ ಗಳಲ್ಲಿ ಅಭಿನಯಿಸುವುದಕ್ಕೆ ಇದು ನನಗೆ ಸಹಾಯವಾಗಲಿದೆ" ಅವರು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ