ಜಗತ್ತು ಕನ್ನಡ ಚಿತ್ರವೊಂದರ ಬಗ್ಗೆ ಮಾತನಾಡಬೇಕೆಂದು ನಾನು ಬಯಸುವೆ: ರಿಶಿಕಾ ಶರ್ಮಾ

ಪ್ರಸಿದ್ದ ನಿರ್ದೇಶಕ ಜಿವಿ ಅಯ್ಯರ್ ಅವರ ಮೊಮಗಳಾದ ರಿಷಿಕಾ ಶರ್ಮಾ ತಾನು ಬೆಳ್ಳಿ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದರೂ ಎಲ್ಲಾ ದಿನವೂ .....
ರಿಶಿಕಾ ಶರ್ಮಾ
ರಿಶಿಕಾ ಶರ್ಮಾ
ಬೆಂಗಳೂರು: ಪ್ರಸಿದ್ದ ನಿರ್ದೇಶಕ ಜಿವಿ ಅಯ್ಯರ್ ಅವರ ಮೊಮಗಳಾದ ರಿಷಿಕಾ ಶರ್ಮಾ ತಾನು ಬೆಳ್ಳಿ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದರೂ ಎಲ್ಲಾ ದಿನವೂ ಬೆಳ್ಳಿ ತಟ್ಟೆಯಲ್ಲಿ ಊಟ ಸವಿಯಲು ಸಾಧ್ಯವಾಗಿರಲಿಲ್ಲ. ಇದು ಅವರ ಚಿತ್ರ ಜೀವನಕ್ಕೆ ಅನ್ವಯಿಸಿ ಹೇಳಬಹುದಾದ ಮಾತು..
ತಮ್ಮ ನಿರ್ದೇಶನದ ಪ್ರಥಮ ಚಿತ್ರ ’ಟ್ರಂಕ್ೀ ವಾರ ಬಿಡುಗಡೆಯಾಗುತಿರುವ ಹಿನ್ನೆಲೆಯಲ್ಲಿ ಎಕ್ಸ್ ಪ್ರೆಸ್ ಜತೆಗೆ ಮಾತನಾಡಿದ ರಿಷಿಕಾ ಇದೊಂದು ಸತ್ಯ ಘಟನೆ ಆಧಾರಿತ ಹಾರರ್ ಚಿತ್ರ ಎನ್ನುತ್ತಾರೆ.
ಚಿತ್ರ ನಿರ್ದೇಶನಕ್ಕೆ ತೊಡಗುವ ಮುನ್ನ ರಿಷಿಕಾ  ಆದರ್ಶ್ ಎಚ್ ಈಶ್ವರಪ್ಪ ಅವರ ಕೈಕೆಳಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.ಬಿಇ, ಎಂಟೆಕ್ ಮಾಡಿರುವ ರಿಷಿಕಾ ನಿರ್ದೇಶನ, ನಟನೆಗಳಲ್ಲಿ ಪರಿಣತಿ ಸಾಧಿಸುವ ಸಲುವಾಗಿ ಕಿರುತೆರೆಯತ್ತ ಮುಖ ಮಾಡಿದ್ದರು. ಚರಣಾದಾಸಿ, ಸರಸ್ವತಿ ಮತ್ತು ಭಾರತಿ. ಧಾರಾವಾಹಿಗಳಲ್ಲಿ ಅವರು ದ್ವಿತೀಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಬೆಳ್ಳಿತೆರೆಯಲ್ಲಿ ನಟನೆಗೆ ತೊಡಗಿದ ಈಕೆ ವಾಸ್ಕೊಡಗಾಮಾ, ಸೈಕೋ ಶಂಕರ್ ಚಿತ್ರಗಳಲ್ಲಿ ನಟಿಸಿದ್ದರು,. ಅಲ್ಲದೆ ಸುಮನಾ ಕಿತ್ತೂರ್ ನಿರ್ದೇಶನದ ಕಿರುಗೂರಿನ ಗಯ್ಯಾಳಿಗಳು ಚಿತ್ರದಲ್ಲಿಯೂ ಅವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
"ನಾನು ತುಳು ಚಿತ್ರದ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತಿದ್ದಾಗ , ನಿರ್ಮಾಪಕ ರಾಜೇಶ್ ಭಟ್ ನನ್ನನ್ನು ಗುರುತಿಸಿದರು. ಅವರು ನನ್ನ ಮೊದಲ ಸ್ವತಂತ್ರ ಚಲನಚಿತ್ರ ಟ್ರಂಕ್ ನಿರ್ಮಾಣಕ್ಕೆ ಒಪ್ಪಿದ್ದರು" ಅವರು 2015ರಲ್ಲಿ ಚಿತ್ರದ ಕಥೆ ತಯಾರಿಸಿದರು. 2017 ರಲ್ಲಿ ಚಿತ್ರೀಕರಣ ಮುಗಿಸಿ ಇದೀಗ 2018ರಲ್ಲಿ ಬಿಡುಗಡೆಗೆ ಸಿದ್ದವಾಗಿದೆ.
ಹಾರರ್ ನನ್ನ ಮೆಚ್ಚಿನ ವಿಷಯವಾಗಿದೆ ಎನ್ನುವ ರಿಷಿಕಾ ತಾನು ಜೀವನದಲ್ಲಿ ಕಂಡ ಕೆಲ ನೈಜ ಭಯಾನಕ ಘಟನೆಗಳು ಈ ಚಿತ್ರಕಥೆ ತಯಾರಾಗಲು ಕಾರಣವಾಗಿದೆ. "ಹಾರರ್ ಚಿತ್ರಗಳಿಗೆ ಒಳ್ಳೆಯ ಭವಿಷ್ಯವಿದೆ, ಹಾಲಿವುಡ್ ನ ಮಮ್ಮಿ ಸೇರಿ ಅನೇಕ ಹಾರರ್ ಚಿತ್ರಗಳು ನನ್ನನ್ನು ಅತಿಯಾಗಿ ಆಕರ್ಷಿಸಿದ್ದವು. ಹೀಗಾಗಿ ನಾನೂ ಇಂತಹಾ ಹಾರರ್ ಚಿತ್ರ ಮಾಡಲು ನಿರ್ಧರಿಸಿದ್ದೆ.
"ಟ್ರಂಕ್ ನಲ್ಲಿ ಸಮಾನಾಂತರವಾಗಿ ಸಾಗುವ ಎರಡು ಕಥೆಗಳಿದೆ. ಒಂದು  ಕಥೆಯು  90ರ ದಶಕದ ಕಥೆ ಒಂದು ಕುಟುಂಬವು  ಅನುಭವಿಸುವ ಅತಿಮಾನುಷ ಘಟನೆಗಳಿಂದ ಕೂಡಿದೆ. ನಾನು ಈ ಭೂತ, ಆತ್ಮಗಳ ಹುಡುಕಾಟದ ಕಥೆಯಿಂದ ಸ್ಪೂರ್ತುಇ ಹೊಂದುತ್ತೇನೆ" ಎಅವರು ಹೇಳುತ್ತಾರೆ.
ನಟರಾದ ನಿಹಾಲ್ ಮತ್ತು ವೈಶಾಲಿ ದೀಪಕ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ."ನಾನು ಕಥೆ ಬರೆಯುವಾಗಲೇ ನಿಹಾಲ್ ಈ ಪಾತ್ರಕ್ಕೆ ಸೂಟ್ ಆಗಲಿದ್ದಾರೆನ್ನುವುದು ನನ್ನ ಮನಸ್ಸಿನಲ್ಲಿತ್ತು"ರುಣ್ ಸುಧೀರ್ ಅವರ ಚೌಕದಲ್ಲಿ ಪ್ರಜ್ವಲ್ ದೇವರಾಜ್ ಜತೆ ನಟಿಸಿದ್ದ ನಟ ಇವರು. ಇನ್ನು ಅಮರಾವತಿ, ಭರ್ಜರಿ ಚಿತ್ರಗಳಲ್ಲಿ ನಟಿಸಿದ್ದ ವೈಶಾಲಿ ಸಹ ರಿಷಿಕಾ ಅವರ ಗಮನ ಸೆಳೆದಿದ್ದರು. 
ಚಿತ್ರೀಕರಣದ ವೇಳೆ ನಡೆದ ಅಸಾಮಾನ್ಯ ಘಟನೆ ಸಂಬಂಧ ಹೇಳುವ ರಿಷಿಕಾ " ನಾವು ಶೂಟಿಗ್ ನಡೆಸುವ ಕೆಲ ಸಮಯ ನಾವು ಅಳವಡಿಸಿದ್ದ ಸಿಸಿಟಿವಿಗಳಲ್ಲಿ ಸೆರೆಯಾದ ಕೆಲವು ಅಸಾಮಾನ್ಯ ಘಟನೆಗಳನ್ನು ನಾನು ನೋಡಿದ್ದೇನೆ. ಅಂತಹಾ ಎರಡು ಘಟನೆಗಳು ನಮ್ಮ ಕ್ಯಾಮರಾದಲ್ಲಿ ಸೆರೆಯಾಗಿದೆ." ಎನ್ನುತ್ತಾರೆ.
ಭಯಾನಕ, ಪ್ರೇತಗಳಲ್ಲಿ ನನಗೆ ನಂಬಿಕೆ ಇಲ್ಲದೆ ಹೋದರೂ ಇಂತಹಾ ಕಥೆ ಆಯ್ಕೆ ಮಾಡಿಕೊಳ್ಳ್ಲು ನಾನು ಮುಂದಾದೆ. ಇನ್ನು ನಾವು ಎರಡು ಕ್ಯಾಮರಾಗಳನ್ನು ಬದಲಾಯಿಸಬೇಕಾಯಿತು, ಏಕೆಂದರೆ ಅವುಗಳಲ್ಲಿ ಒಂದು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎನ್ನುತ್ತಾರೆ ರಿಷಿಕಾ  ವೈಜ್ಞಾನಿಕ ಉಪಕರಣ ಬಳಸಿ ಪ್ರೇತಾತ್ಮಗಳ ಹುಡುಕಾಟ ನಡೆಸುವ ಈ ಶೋಧನಾಕಾರರ ಕಾರ್ಯ ನಿಜಕ್ಕೂ ಸಾಹಸಮಯ, ಕೆಲವೊಮ್ಮೆ ಅನುಭವಗಳು ಘೋರವಾಗಲಿದೆ.ಇಂತಹಾ ನೈಜ ಅನುಭವವನ್ನೇ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ.
ಹಾರರ್ ಚಲನಚಿವೊಂದಕ್ಕೆ ಸಿಂಕ್ ಸೌಂಡ್ ನೀಡಿರುವ ಮೊದಲ ಭಾರತೀಯ ಚಿತ್ರ ನಮ್ಮದು. ದಿನೇಶ್ ಕುಮಾರ್ ಈ ದನಿ ನಿಡಿದ್ದಾರೆ. ಖ್ಯಾತ ಸಂಗೀತಗಾರ ಎಆರ್ ರೆಹಮಾನ್ ಶಿಷ್ಯರಾದ ಅಲ್ಬಿನ್ ಡೊಮೆನಿಕ್ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಭಜರಂಗ್ ಕೊನಾಥಮ್ ಮತ್ತು ಸಂದೀಪ್ ಅಲೂರಿ ಟ್ರಂಕ್ ಗೆ ಛಾಯಾಗ್ರಹಣ ಮಾಡಿದ್ದಾರೆ. ಬೀಟ್ ಗುರು  ಸಮೂಹದ ಕಾರ್ತಿಕ್ ಗಣೇಶನ್ ಹಾಗು ಪ್ರದೀಪ್ ಸಂಯೋಜಿಸಿರುವ ನಾಲ್ಕು ಬೀಟ್ ಗಳ ಒಂದು ಹಾಡು ಈ ಚಿತ್ರದಲ್ಲಿದೆ.ಚಿತ್ರಕ್ಕೆ ಸುಖೇಶ್ ಶೆಟ್ಟಿ ಸಂಭಾಷಣೆ ಬರೆದಿದ್ದರೆ ಹೇಮಂತ್ ಕುಮಾರ್ ಸಂಕಲನ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com