ಮುಸ್ಸಂಜೆ ಮಹೇಶ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂಎಂಸಿಎಚ್ ಈ ವಾರ ತೆರೆಗೆ

ಮುಸ್ಸಂಜೆ ಮಹೇಶ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ’ಎಂಎಂಸಿಎಚ್’ ಈ ವಾರ ತೆರೆ ಕಾಣುತ್ತಿದೆ. ಆದರೆ ಚಿತ್ರದ ಟೈಟಲ್ ನ ಸೂತ್ರವೇನೆಂದು ಅವರು ಇನ್ನೂ ಬಿಟ್ಟುಕೊಟ್ಟಿಲ್ಲ.
ಮುಸ್ಸಂಜೆ ಮಹೇಶ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂಎಂಸಿಎಚ್ ಈ ವಾರ ತೆರೆಗೆ
ಮುಸ್ಸಂಜೆ ಮಹೇಶ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂಎಂಸಿಎಚ್ ಈ ವಾರ ತೆರೆಗೆ
ಬೆಂಗಳೂರು: ಮುಸ್ಸಂಜೆ ಮಹೇಶ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ’ಎಂಎಂಸಿಎಚ್’ ಈ ವಾರ ತೆರೆ ಕಾಣುತ್ತಿದೆ. ಆದರೆ ಚಿತ್ರದ ಟೈಟಲ್ ನ ಸೂತ್ರವೇನೆಂದು ಅವರು ಇನ್ನೂ ಬಿಟ್ಟುಕೊಟ್ಟಿಲ್ಲ." ಈ ಸಂಕ್ಷೇಪಾಕ್ಷರಗಳ ವಿವರಣೆ ಏನೆಂದು ಪ್ರೇಕ್ಷಕರೇ ನಿರ್ಣಯ್ಸಲಿಕ್ಕೆ ನಾನು ಅವರಿಗೆ ಅವಕಾಶ ನಿಡುತ್ತೇನೆ. ಪ್ರತಿಯೊಬ್ಬರೂ ಅವರದೇ ಟೈಟಲ್ ನೊಂದಿಗೆ ಚಿತ್ರ ನೋಡಲು ಕುತೂಹಲದಿಂದ ಆಗಮಿಸುತ್ತಾರೆ. ಇದೂ ಚಿತ್ರದ ಯಶಸ್ಸಿನ ಫಾರ್ಮಲಾಗಳಲ್ಲಿ ಒಂದಾಗಲಿದೆ. ಮಾಮೂಲಿ ಟೈಟಲ್ ಗಿಂತ ಈ ಸಂಕ್ಷೇಪಾಕ್ಷರದ ಟೈಟಲ್ ಜನರಲ್ಲಿ ಕುತೂಹಲ ಹುಟ್ಟಿಸಲಿದೆ." ಮಹೇಶ್ ಹೇಳಿದ್ದಾರೆ.
ಚಿತ್ರದಲ್ಲಿ ರಾಗಿಣಿ ದ್ವಿವೇದಿ, ಮೇಘನಾ ರಾಜ್, ಸಂಯುಕ್ತಾ ಹೊರನಾಡು, ನಕ್ಷತಾ ಪಿ. ರಾವ್ - ನಾಲ್ವರು ನಾಯಕಿಯರಿದ್ದಾರೆ. ಇವರೆಲ್ಲರೂ ಚಿತ್ರರಂಗದಲ್ಲಿ ಯಶಸ್ಸು ಕಂಡ ತಾರೆಯರ ಮಕ್ಕಳೆನ್ನುವುದು ವಿಶೇಷ.ರಾಗಿಣಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರವು ಎಪ್ಪತ್ತರ ದಶಕದ ನೈಜ ಘಟನೆಯೊಂದನ್ನು ಆಧರಿಸಿದೆ.
"ಘಟನೆಯು ಕರ್ನಾಟಕದ  ಅತ್ಯಂತ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆಯಿತು. ಆ ಅವಧಿಯಲ್ಲಿ ಈ ಸುದ್ದಿ ಜನರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಕಾಲೇಜು ಆಡ:ಳಿತ  ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿತ್ತು. ಅಂದು ಸಾಮಾಜಿಕ ತಾಣಗಳು ಜನಪ್ರಿಯವಾಗಿಲ್ಲದೆ ದಿನಗಳಾಗಿದ್ದು ಜನರು ಹೆಚ್ಚಾಗಿ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ." ಮಹೇಶ್ ಹೇಳಿದ್ದಾರೆ.
ನೈಜ ಘಟನೆಯಲ್ಲಿ ಪುರುಷ ಅಧಿಕಾರಿ ಪ್ರಕರಣದ ತನಿಖೆ ನಡೆಸಲಿದ್ದಾರೆ. ಆದರೆ ನಮ್ಮ ಚಿತ್ರದಲ್ಲಿ ನಾಲ್ವರು ನಾಯಕಿಯರಿರುವ ಕಾರಣ, ನಾವು ಮಹಿಳಾ ಅಧಿಕಾರಿಯೇ ತನಿಖೆ ನಡೆಸುವಂತೆ ಬದಲಿಸಿದ್ದೇವೆ. ರಾಗಿಣಿ ಈ ಮಹಿಳಾ ಅಧಿಕಾರಿಯಾಗಿ ಕಾಣ್ಸಿಇಕೊಳ್ಳಲಿದ್ದಾರೆ.
"ಇದು ನನ್ನ ತವರೂರಿನಲ್ಲೇ ನಡೆದ ಘಟನೆ, ಹೀಗಾಗಿ ನಾನು ಈ ಘಟನೆಯ ಮೂಲವನ್ನು ಹೆಚ್ಚು ವಿಸ್ತಾರವಾಗಿ ತಿಳಿಯಲು ಸಾಧ್ಯವಾಗಿದೆ. ನಾನು ಈ ಕಥೆಯನ್ನು ಸಮಕಾಲೀನ ಪರಿಸ್ಥಿತಿಗೆ ಅಳವಡಿಸಿ ಚಿತ್ರ ನಿರ್ಮಿಸಿದ್ದೇನೆ" ಮಹೇಶ್ ನುಡಿದರು.
ಯುವ ಮನಸ್ಸುಗಳನ್ನು ಆಕರ್ಷಿಸುವ ಕಥೆ ಹೊಂದಿದ ಎಂಈಂಸಿಎಚ್ ಚಿತ್ರ ಯುವರಾಜ್ ಮತ್ತು ರಘು ಭಟ್ ಅಭಿನಯವನ್ನು ಒಳಗೊಂಡಿದೆ.ಶ್ರೀಧರ್ ಸಂಭ್ರಮ್ ಸಂಗೀತ, ನಾಗೇಶ್ ಆಚಾರ್ಯ ಛಾಯಾಗ್ರಹಣ ನೆರವೇರಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com