14 ವರ್ಷದ ನಂತರ ಪ್ರಧಾನ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್!

ನಟ ರಾಘವೇಂದ್ರ ರಾಜ್ ಕುಮಾರ್ 14 ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ನಟಿಸಿದ್ದಾರೆ. ಅನಾರೋಗ್ಯ ಕಾರಣ ಬೆಳ್ಳಿ ಪರದೆಯಿಂದ ದೂರ ಸರಿದಿದ್ದ ...
ರಾಘವೇಂದ್ರ ರಾಜ್ ಕುಮಾರ್ ಮತ್ತು ನಿಖಿಲ್ ಮಂಜು
ರಾಘವೇಂದ್ರ ರಾಜ್ ಕುಮಾರ್ ಮತ್ತು ನಿಖಿಲ್ ಮಂಜು
ಬೆಂಗಳೂರು: ನಟ ರಾಘವೇಂದ್ರ ರಾಜ್ ಕುಮಾರ್ 14 ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ನಟಿಸಿದ್ದಾರೆ. ಅನಾರೋಗ್ಯ ಕಾರಣ ಬೆಳ್ಳಿ ಪರದೆಯಿಂದ ದೂರ ಸರಿದಿದ್ದ ರಾಘಣ್ಣ  ಮತ್ತೆ ಬಣ್ಣ ಹಚ್ಚುತ್ತಿದ್ದಾರೆ, 
ರಾಷ್ಟ್ರ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶನದ 'ಅಮ್ಮನ ಮನೆ' ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ.
ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಚಿಲಂ ನಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. 
ಆಗಸ್ಟ್ 15 ರಂದು ನಟ ರಾಘವೇಂದ್ರ ರಾಜ್ ಕುಮಾರ್ ಅವರ ಹುಟ್ಟು ಹಬ್ಬವಿದ್ದು.ಅಂದೇರ ಸಿನಿಮಾ ಮೂಹೂರ್ತ ನಡೆಯಲಿದೆ,.ಜೊತೆಗೆ ಸಿನಿಮಾ ಬಗ್ಗೆ ಅಂದು ಹೆಚ್ಚಿನ ವಿವರ ನೀಡಲಾಗುತ್ತದೆ ಎಂದು ನಿರ್ದೇಶಕ ನಿಖಿಲ್ ಮಂಜು ಹೇಳಿದ್ದಾರೆ,.
ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಕೆಲಸ ಮನೆ, ಸಂಸಾರದ ಕುರಿತಾದ ಕಥೆ ಹೊಂದಿಗೆ, ತಮ್ಮ ಕುಟುಂಬಸ್ತರ ಕಥೆ ಇದಾಗಿದೆ, ಇದಲ್ಲದೇ  ಮಂಜು ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌ ದಂಪತಿ ಬರೆದ "ಐಎಎಸ್‌ ದಂಪತಿ ಕನಸುಗಳು' ಪುಸ್ತಕವನ್ನು ಸಿನಿಮಾ ಮಾಡುತ್ತಿದ್ದಾರೆ.  ಶಾಲಿನಿ ರಜನೀಶ್ ಅವರ ಜೀವನ ಆಧರಿಸಿ ಈ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ನಿಖಿಲ್‌ ಮಂಜು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com