ವಿಲ್ಲನ್ ಸ್ಟಿಲ್
ಸಿನಿಮಾ ಸುದ್ದಿ
ಇಂದು 'ವಿಲ್ಲನ್' ಟೈಟಲ್ ಸಾಂಗ್ ರಿಲೀಸ್
ಬಹು ನಿರೀಕ್ಷಿತ ವಿಲ್ಲನ್ ಸಿನಿಮಾ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಲಿದೆ, ಹೆಬ್ಬುಲಿ ಸಿನಿಮಾ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದ ಶಂಕರ್ ...
ಬೆಂಗಳೂರು: ಬಹು ನಿರೀಕ್ಷಿತ ವಿಲ್ಲನ್ ಸಿನಿಮಾ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಲಿದೆ, ಹೆಬ್ಬುಲಿ ಸಿನಿಮಾ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದ ಶಂಕರ್ ಮಹದೇವನ್ ಮತ್ತು ಬಸ್ರು ಹಾಡು ಹಾಡಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ವಿಲ್ಲನ್ ಸಿನಿಮಾದ ಟೈಟಲ್ ಸಾಂಗ್ ಹಾಡಿದ್ದಾರೆ. ನಿರ್ದೇಶಕ ಪ್ರೇಮ್ ಕೂಡ ಸಿನಿಮಾಗೆ ಕಂಠದಾನ ಮಾಡಿದ್ದಾರೆ.
ಜೊತೆಗೆ ಪ್ರೇಮ್ ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದಾರೆ, ಇಲ್ಲಿ ಕೇಡಿನು, ರೌಡಿನು, ವಿಲ್ಲನ್ನು ನಾನೇ ಕಣೋ ಎಂಬ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ,
ಜೊತೆಗೆ ವಿವಿಧ ಗಾಯಕರು ಹಿನ್ನೆಲೆ ಗಾಯನ ನೀಡಿದ್ದಾರೆ, ಪ್ರತಿ ಹಾಡಿಗೆ ನಾಲ್ಕರಿಂದ ಐದು ಜನ ಹಿನ್ನೆಲೆ ಗಾಯನ ನೀಡಿದ್ದಾರೆ, ಒಟ್ಟಾರೆ ಸಿನಿಮಾದಲ್ಲಿ ಆರು ಹಾಡುಗಳಿವೆ. ಪ್ರತಿವಾರ ಒಂದೊಂದು ಹಾಡು ರಿಲೀಸ್ ಮಾಡಲು ಸಿನಿಮಾ ತಂಡ ನಿರ್ಧರಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ