ನಾಗರಹಾವು ಸಿನಿಮಾ ಸ್ಟಿಲ್
ಸಿನಿಮಾ ಸುದ್ದಿ
ನಾಗರಹಾವು ಸಿನಿಮಾದಿಂದ ವಿಷ್ಣುವರ್ಧನ್ ರಾತ್ರೋರಾತ್ರಿ ಸ್ಟಾರ್ ಆದದ್ದು ಹೇಗೆ ಗೊತ್ತೆ?
ಕ್ಲಾಸಿಕ್ ಸಿನಿಮಾವಾದ ನಾಗರಹಾವು ರೀ ರಿಲೀಸ್ ಗಾಗಿ ಕಾಯುತ್ತಿದ್ದು, ಈ ವಾರ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ,...
ಬೆಂಗಳೂರು: ಹಳೆಯ ಕ್ಲಾಸಿಕ್ ಸಿನಿಮಾವಾದ ನಾಗರಹಾವು ರೀ ರಿಲೀಸ್ ಗಾಗಿ ಕಾಯುತ್ತಿದ್ದು, ಈ ವಾರ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ, 45 ವರ್ಷದ ಹಿಂದಿವ ಸಿನಿಮಾ ಇಂದಿಗೂ ಎಲ್ಲರಿಗೂ ಪ್ರೀತಿ ಪಾತ್ರವಾಗಿದೆ.
ಪ್ರೇಕ್ಷಕರು ಮತ್ತು ಜನಪ್ರಿಯ ವ್ಯಕ್ತಿಗಳಿಂದ ಇಂದಿಗೂ ನಾಗರಹಾವು ಪ್ರಶಂಸೆ ಪಡೆಯುತ್ತಿದೆ, 7.1 ಸಿನಿಮಾ ಸ್ಕೋಪ್ ನಲ್ಲಿ ನಾಗರಹಾವು ಸಿನಿಮಾ ನೋಡಲು ಬಾಲಾಜಿ ಕಾಯುತ್ತಿದ್ದಾರೆ, ಬಾಲಾಜಿ ರವಿಚಂದ್ರನ್ ಅವರ ಸಹೋದರ, ಶ್ರೀ ಈಶ್ವರಿ ಪ್ರೊಡಕ್ಷನ್ ನಲ್ಲಿ ರವಿಚಂದ್ರನ್ ಕೆಆರ್ ಜಿ ಸ್ಟುಡಿಯೋದಲ್ಲಿ ನಾಗಲಹಾವು ಸಿನಿಮಾ ರೀ ರಿಲೀಸ್ ಮಾಡಲಿದ್ದಾರೆ,
ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಚಿತ್ರ ನಿರ್ದೇಶಿಸಿದ್ದರು. ವಿಷ್ಣುವರ್ಧನ್, ಅಂಬರೀಷ್, ಆರತಿ, ಕೆ.ಎಸ್ ಅಶ್ವತ್ಥ್ ಮತ್ತು ಲೀಲಾವತಿ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ, ಹಳೇಯ ನಾಗರಹಾವು ಸಿನಿಮಾ ಬಿಡುಗಡೆಯಾದಾಗ ನಾನು ಇನ್ನೂ ಜನಿಸಿರಲಿಲ್ಲ, ಆದರೆ ಆ ಸಿನಿಮಾದ ಪ್ರತಿ ಬಿಟ್ ನನಗೆ ಇಷ್ಟ, ಹೀಗಾಗಿ ನಾನು ಅದು ರಿ ರೀಲಿಸ್ ಆಗಲು ಬಯಸುತ್ತಿದ್ದೇನೆ, ನಾನು 80 ರ ದಶಕದ ಈ ಸಿನಿಮಾವನ್ನ ವಿಡಿಯೋ ಕೆಸೆಟ್ ನಲ್ಲಿ ನೋಡಿದ್ದೆ.ಒಂದೇ ದಿನ ನಾನು 3 ಬಾರಿ ಸಿನಿಮಾ ನೋಡಿದ್ದು ನನಗೆ ಇನ್ನು ನೆನಪಿದೆ, ಪ್ರತಿ ಬಾರಿಯೂ ಹೊಸ ಮೋಡಿ ಮಾಡುತ್ತದೆ ನಾಗರ ಹಾವು ಚಿತ್ರ ಎಂದು ಬಾಲಾಜಿ ವಿವರಿಸಿದ್ದಾರೆ.
ನಾಗರಹಾವು ಸಿನಿಮಾಗಾಗಿ 73 ದಿನ ಶೂಟಿಂಗ್ ನಡೆಸಲಾಯಿತು,. ಕಲಾವಿದರು ಸೇರಿದಂತೆ 40 ಮಂದಿಯ ಚಿತ್ರ ತಂಡ ಭಾರಿ ಉಪಕರಣಗಳೊಂದಿಗೆ ಚಿತ್ರದುರ್ಗ ಕೋಟೆಯನ್ನು ಏರಿತ್ತು, ಬಾರೇ ಬಾರೇ ಸಾಂಗ್ ಇಡೀ ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ಸ್ಲೋ ಮೋಷನ್ ನಲ್ಲಿ ಚಿತ್ರೀಕರಿಸಲಾಗಿತ್ತು. ಚಿತ್ರ ಬಿಡುಗಡೆಯಾದ ನಂತರ ರಾತ್ರೋ ರಾತ್ರಿ ವಿಷ್ಣುವರ್ಧನ್ ಸ್ಚಾರ್ ಆದರು, ಮಾರ್ನಿಂಗ್ ಶೋ ನಂತರ ಅವರು ಆ್ಯಂಗ್ರಿ ಯಂಗ್ ಮ್ಯಾನ್ ಆದರು
ಪಾರಂಪರಿಕ ಸ್ಥಳವಾದ ಚಿತ್ರದುರ್ಗ ಕೋಟೆಯಲ್ಲಿ ಶೂಟಿಂಗ್ ಗಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿತ್ತು. ಜೊತೆಗೆ ಪ್ರದಾನ ಮಂತ್ರಿಗಳ ಅನುಮತಿ ಕೂಡ ಬೇಕಿತ್ತು ಅನುಮತಿಗಾಗಿ 48 ದಿನ ಕಾಯಬೇಕಾಯಿತು. ವೀರಸ್ವಾಮಿ ಅವರ ಆಪ್ತ ಸ್ನೇಹಿತ ಗಂಗಪ್ಪ ದೆಹಲಿಯಲ್ಲಿ ಬೀಡು ಬಿಟ್ಟು ಅನುಮೋದನೆ ಪಡೆದರು. ನಂತರ ಕನ್ನಡ ನಾಡಿನ ವೀರ ರಮಣಿಯ ಎವರ್ ಗ್ರೀನ್ ಹಾಡನ್ನು ಚಿತ್ರೀಕರಿಸಲಾಯಿತು,. ಒನಕೆ ಓಬವ್ವನ ಪಾತ್ರದಲ್ಲಿ ನಟಿ ಜಯಂತಿ ಅಭಿನಯಿಸಿದ್ದರು, ಆರು ದಿನಗಳ ಕಾಲ ಶೂಟಿಂಗ್ ಮಾಡಲಾಗಿತ್ತು,
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ