'ವಾಸು ನಾನ್ ಪಕ್ಕಾ ಕಮರ್ಷಿಯಲ್ 'ಚಿತ್ರಕ್ಕೆ ದರ್ಶನ್ ಪ್ರೋತ್ಸಾಹ!

ಸಿನಿಮಾ ಬಿಡುಗಡೆಗೂ ಮುನ್ನ ಕನ್ನಡದ ಕೆಲ ಸ್ಟಾರ್ ನಟರು ತಮ್ಮ ಬೆಂಬಲ ನೀಡುತ್ತಿದ್ದು ಈ ಬೆಂಬಲ ಸಿನಿಮಾದ ಮೌಲ್ಯವನ್ನು ಹೆಚ್ಚಿಸುತ್ತದೆ. ...
ಅನೀಶ್ ತೇಜೇಶ್ವರ್ ಜೊತೆ ದರ್ಶನ್
ಅನೀಶ್ ತೇಜೇಶ್ವರ್ ಜೊತೆ ದರ್ಶನ್
Updated on
ಬೆಂಗಳೂರು: ಸಿನಿಮಾ ಬಿಡುಗಡೆಗೂ ಮುನ್ನ ಕನ್ನಡದ ಕೆಲ ಸ್ಟಾರ್ ನಟರು ತಮ್ಮ ಬೆಂಬಲ ನೀಡುತ್ತಿದ್ದು  ಈ ಬೆಂಬಲ ಸಿನಿಮಾದ ಮೌಲ್ಯವನ್ನು ಹೆಚ್ಚಿಸುತ್ತದೆ. 
ಅನೀಶ್ ತೇಜೇಶ್ವರ್ ನಟನೆಯ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಬೆಂಬಲ ನೀಡಿದ್ದಾರೆ. ನಿರ್ಮಾಪಕರು ವಾರಾಂತ್ಯದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದು, ನಟ ದರ್ಶನ್ ಕೂಡ ಭಾಗವಹಿಸಲಿದ್ದಾರೆ.
ಅಜಿತ್ ವಾಸನ್ ಉಗ್ಗಿನ ಈ ಸಿನಿಮಾ ನಿರ್ದೇಶಿಸಿದ್ದು, ಆಗಸ್ಟ್ ಮೊದಲ ವಾರದಲ್ಲಿ ಚಿತ್ರ ರಿಲೀಸ್ ಆಗಲಿದೆ.  ಸೆನ್ಸಾರ್ ಪ್ರಮಾಣ ಪತ್ರಕ್ಕಾಗಿ ಚಿತ್ರತಂಡ ಕಾಯುತ್ತಿದೆ, ಪ್ರಮಾಣ ಪತ್ರ ಬಂದ ನಂತರ ಅಧಿಕೃತವಾಗಿ ಪ್ರಕಟಿಸಲಿದೆ, ವಿಂಕ್ ವಿಶಲ್ ಪ್ರೊಡಕ್ಷನ್  ಅಡಿಯಲ್ಲಿ ಸಿನಿಮಾ ತಯಾರಾಗಿದ್ದು, ಅನೀಶ್ ನಿರ್ಮಾಪಕರಾಗಿದ್ದು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com