ಅನಿವಾಸಿ ಭಾರತೀಯರ 'ರತ್ನಮಂಜರಿ'

ಇತ್ತೀಚೆಗೆ ಅನಿವಾಸಿ ಭಾರತೀಯರು ಕನ್ನಡ ಸಿನಿಮಾ ಬಗ್ಗೆ ಒಲವು ತೋರಿಸುತ್ತಿರುವುದು ಹೆಚ್ಚಾಗುತ್ತಿದೆ...
ಚಿತ್ರದ ಒಂದು ಸನ್ನಿವೇಶ
ಚಿತ್ರದ ಒಂದು ಸನ್ನಿವೇಶ

ಇತ್ತೀಚೆಗೆ ಅನಿವಾಸಿ ಭಾರತೀಯರು ಕನ್ನಡ ಸಿನಿಮಾ ಬಗ್ಗೆ ಒಲವು ತೋರಿಸುತ್ತಿರುವುದು ಹೆಚ್ಚಾಗುತ್ತಿದೆ. ನಟರಾಜ ಹಳೆಬೀಡು ಮತ್ತು ಎಸ್ ಸಂದೀಪ್ ಕುಮಾರ್ ಎಂಬುವವರು ಅಮೆರಿಕಾದಲ್ಲಿ ನೆಲೆಸಿದ್ದು ರತ್ನಮಂಜರಿ ಎಂಬ ಸಿನಿಮಾವನ್ನು ತಯಾರಿಸುತ್ತಿದ್ದಾರೆ.

ನಾರ್ವೆಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಪ್ರಸಿದ್ಧ್ ಎಂಬುವವರು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರುವವರು ಕೂಡ ಹೊಸಬರು. ಮಡಿಕೇರಿಯಲ್ಲಿ ಚಿತ್ರದ ಶೇಕಡಾ 50 ಭಾಗ ಚಿತ್ರೀಕರಣಗೊಂಡಿದ್ದು ಉಳಿದ ಭಾಗ ಯುಎಸ್ಎಯಲ್ಲಿ ಚಿತ್ರೀಕರಣವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ಅಕ್ಕ ಸಮ್ಮೇಳನದಲ್ಲಿ ಬಹುದೊಡ್ಡ ಆಡಿಯೊ ಬಿಡುಗಡೆ ಮಾಡುವ ಕಾರ್ಯಕ್ರಮ ನಿಗದಿ ಮಾಡಲು ಯೋಜಿಸುತ್ತಿದೆ.

ಅಕ್ಕ ಸಮ್ಮೇಳನ ಸೆಪ್ಟೆಂಬರ್ 1ರಂದು ನಡೆಯುವ ಸಾಧ್ಯತೆಯಿದೆ. ನಂತರ ಅಕ್ಟೋಬರ್ ನಲ್ಲಿ ಮತ್ತೊಮ್ಮೆ ಬೆಂಗಳೂರಿನಲ್ಲಿ ಆಡಿಯೊ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.
2005ರಲ್ಲಿ ಅಮೆರಿಕಾದಲ್ಲಿ ನಡೆದ ನಿಜ ಘಟನೆಯನ್ನಾದರಿಸಿದ ಚಿತ್ರ ರತ್ನಮಂಜರಿಯಂತೆ.

ಅನಿವಾಸಿ ಭಾರತೀಯರ ಮಧ್ಯೆ ಈ ಘಟನೆ ನಡೆದಿದ್ದರಿಂದ ಭಾರತ ಮತ್ತು ಅಮೆರಿಕಾದಲ್ಲಿ ಶೂಟ್ ಮಾಡಲಾಗುತ್ತಿದೆ ಎನ್ನುತ್ತಾರೆ ಸಂದೀಪ್. ರಾಜ್ ಚರಣ್ ನಾಯಕನಾಗಿ ಅಭಿನಯಿಸುತ್ತಿದ್ದು ಅಖಿಲಾ ಪ್ರಕಾಶ್, ಪಲ್ಲವಿ ರಾಜು ಮತ್ತು ಶ್ರದ್ಧಾ ಸಾಲಿಯಾನ್ ಎಂಬ ಮೂವರು ನಾಯಕಿಯರಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com