’ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಒಂದು ಸಾಮಾನ್ಯ ಕಾಯಿಲೆ ಎಂದೆಣಿಸಿದ್ದೆ: ನಿರ್ದೇಶಕ ಅರ್ಜುನ್ ಕುಮಾರ್

ಕಮರ್ಷಿಯಲ್ ಚಿತ್ರಗಳು ಸಾಲು ಸಾಲಾಗಿ ಬರುತ್ತಿರುವ ಈ ಕಾಲದಲ್ಲಿ ನಿರ್ದೇಶಕ ಅರ್ಜುನ್ ಕುಮಾರ್ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ’ಸಂಕಷ್ಟ ಕರ ಗಣಪತಿ’....
’ಸಂಕಷ್ಟ ಕರ ಗಣಪತಿ’
’ಸಂಕಷ್ಟ ಕರ ಗಣಪತಿ’
ಬೆಂಗಳೂರು: ಕಮರ್ಷಿಯಲ್ ಚಿತ್ರಗಳು ಸಾಲು ಸಾಲಾಗಿ ಬರುತ್ತಿರುವ ಈ ಕಾಲದಲ್ಲಿ ನಿರ್ದೇಶಕ ಅರ್ಜುನ್ ಕುಮಾರ್ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ’ಸಂಕಷ್ಟ ಕರ ಗಣಪತಿ’ ಯಲ್ಲಿ ಹೊಸ ಬಗೆಯ ಪ್ರಯತ್ನ ನಡೆಸಿದ್ದಾರೆ. ಏಲಿಯನ್ ಹ್ಯಾಂಡ್ ಸಿಂಡ್ರೋ ಮ್ಎನ್ನುವ ಅಪರೂಪದ ರೊಗವಿರುವ ನಾಯಕನೊಬ್ಬನ ಚಿತ್ರ ಕಥೆ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಇದರ ನಿರ್ದೇಶಕರು ಮೊದಲು 2016 ರಲ್ಲಿ ಪನ್ಮಾಂಡ್ರಿ ಕ್ರಾಸ್ ಎಂಬ ಕಿರುಚಿತ್ರವನ್ನು ತಯಾರಿಸಿದ್ದರು. ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅವರು ತಾವು ಚೊಚ್ಚಲ ಚಿತ್ರ ನಿರ್ದೇಆನದಲ್ಲೇ ಇಂತಹಾ ಪ್ರಯತ್ನಕ್ಕೆ ಕೈ ಹಾಕಿರುವುದರ ಹಿಂದಿನ ಉದ್ದೇಶವನ್ನು ಮನ ಬಿಚ್ಚಿ ಹೇಳಿದ್ದಾರೆ.
ಚಿತ್ರವೊಂದರಲ್ಲಿ ಇಂತಹಾ ಗಂಭೀರ ಖಾಯಿಲೆಯ ಕುರಿತಂತೆ ತೊರಿಸುವುದು ಅಸಾಮಾನ್ಯವಾದ ಪ್ರಯತ್ನ. ರೋಗಿಯೊಬ್ಬನ ಕಥೆಯನ್ನು ಕಮರ್ಷಿಯಲ್ ಚಿತ್ರದ ಚೌಕಟ್ಟಿಗೆ ಹೊಂದಿಸಿಕೊಳ್ಳುವುದು ಅತ್ಯಂತ ಕಠಿಣ ಎನ್ನಲಾಗುತ್ತಿತ್ತು. ಆದರೆ ಅರ್ಜುನ್ ಹಾಗೂ ನಾಯಕ ಲಿಖಿತ್ ಈ ಗಂಭೀರ ಕಥೆಯನ್ನು ರೊಮ್ಯಾಂತಿಕ್ ಹಾಸ್ಯದ ಕಥೆಯಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾವು ಮೊದಲಿಗೆ ಎಎಚ್ಎಸ್ ಬಗ್ಗೆ ಸಂಶೋಧನೆ ಆರಂಭಿಸಿದ್ದೆವು. ನಾವು ಅದೇ ವಿಷಯದ ಬಗ್ಗೆ ಕೇಂದ್ರೀಕರಿಸಿದ ಇಂಗ್ಲಿಷ್ ಚಿತ್ರಗಳನ್ನು ನೋಡಿದೆವು. ಜತೆಗೆ ಅರೇಬಿಕ್, ತೆಲುಗಿನಲ್ಲಿ ಬಂದ ಕಿರುಚಿತ್ರಗಳನ್ನು ಸಹ ನೋಡಿದ್ದೇವೆ.ಇದೆಲ್ಲದರಿಂದ ’ಸಂಕಷ್ಟ ಕರ  ಗಣಪತಿ’ ಚಿತ್ರ  ಕಥೆಯನ್ನು ಅಭಿವೃದ್ಧಿಪಡಿಸಲು ನೆರವಾದವು.
ಕಳೆದ ಎರಡು ವರ್ಷಗಳಲ್ಲಿ, ಅರ್ಜುನ್ ಈ ಚಿತ್ರದ ಪ್ಟ್ ಅನ್ನು ತಯಾರಿಸುತ್ತಾರೆ.ಇಷ್ಟಲ್ಲದೆ ಅವರ ನರ್ಸಿಂಗ್ ಪದವಿ ಚಲನಚಿತ್ರದ  ನಿರ್ಮಾಣಕ್ಕೆ ಸಹಕಾರಿಯಾಗಿತ್ತು.  ಪ್ರೀತಿ,  ಭಾವನೆಗ ಹಾಗೂ ಕ್ರಿಯೆಯನ್ನು ಸಮನಾಗಿ ಬೆರೆಸಿ ಒಂದು ವಾಣಿಜ್ಯೋದ್ದೇಶಿತ ಚಿತ್ರ ವನ್ನಾಗಿಸಿದ್ದೇವೆ.. "ಚಿತ್ರವು ವೈಜ್ಞಾನಿಕ ಸಂಶೋಧನೆ ಮತ್ತು ಮಾಹಿತಿಯಿಂದ ಬೆಂಬಲಿತವಾಗಿದೆ.ವಿಷಯದ ಬಗ್ಗೆ ಜಾಗೃತಿ ಮೂಡಿಸುವ, ಕಮರ್ಷಿಯಲ್ ವಸ್ತುವಿನೊಂದಿಗೆ  ವೈದ್ಯಕೀಯ ಸಮಸ್ಯೆಗಳನ್ನು ತಾಳೆ ಹಾಕಿ ತೋರಿಸುವ ಪ್ರಯತ್ನ ಇದು. ಬಿಬಿಸಿಯಲ್ಲಿ ಪ್ರಸಾರವಾದ ಸಾಕ್ಷ ಚಿತ್ರವೊಂದು ಇದಕ್ಕೆ ನೆರವಾಗಿದೆ."
"ನಟನ ’ಕೈ’ ಈ ಚಿತ್ರದಲ್ಲಿ ಪ್ರಮುಖ ಖಳನಾಯಕನಾಗಿ ಕಾಣಿಸಲಿದೆ. ಇದೇ ವೇಳೆ ಅವನ ಎಡ ಕೈ ಪ್ರಮುಖ ಪಾತ್ರವಾಗಿದೆ. ಚಿತ್ರದ ಪ್ರಾರಂಭದಲ್ಲಿ ಸಮಸ್ಯೆಯ ಅರಿವಿಲ್ಲದ ನಾಯಕ ತನ್ನ ರೊಗವನ್ನು ಹೇಗೆ ಸಂಭಾಳಿಸುತ್ತಾನೆಪ್ರತಿ ದಾರಿಯೂ ಎದುರಾಗಿರುವ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ.ಎಂದು  ತೋರಿಸಲಾಗಿದೆ.ಚಿತ್ರದ ಹಾಡು ಸನ್ನಿವೇಶಕ್ಕೆ ತಕ್ಕಂತೆ ಚಿತ್ರಿತವಾಗಿದೆ.ಕಥೆ ಹಾಗೂ ನಾಯಕನ ಪಾತ್ರ ನಿಜಕ್ಕೂ ಸವಾಲಿನದಾಗಿತ್ತು" ಅರ್ಜುನ್ ಹೇಳಿದ್ದಾರೆ.
ಐದು ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ.ಅಲ್ಲದೆ ಇತರೆ ಕೆಲವರು ಸಹ ಹಣ ಹಾಕಿದ್ದಾರೆ., ಅಲ್ಲಿ ನಾನು ನನ್ನ ಕಥೆಯನ್ನು 25 ನಿರ್ಮಾಪಕರ ಸಭೆಗೆ ಪ್ರಸ್ತುತಪಡಿಸಿದೆ ಅನೇಕ ಮಂದಿ ನನ್ನ ಕಥೆಗೆ ಆಸಕ್ತಿ ತೊರಿಸಿದ್ದರು.ಆದರೆ ನಾನು ಅಂತಿಮವಾಗಿ ಕೇವಲ ಐದು ಹುಡಿಕೆದಾರರಿಗೆ ಅವಕಾಶ ನಿಡಿದ್ದೆ. ನಿರ್ಮಾಪಕರು ಈ ಚಲನಚಿತ್ರ ಪ್ರಚಾರಕ್ಕೆ ನನ್ನಷ್ಟೇ ಆಸಕ್ತಿ ತೋರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ"
ಚಿತ್ರದ ಸಂಗೀತ ನಿರ್ದೇಶಕ  ರಿಟ್ವಿಕ್ ಮುರಳೀಧರ್ ಮತ್ತು ವಿದ್ವತ್ ಚಿತ್ರದ ಸಂಕಲನಕಾರ ಸಿನಿಮಾಟೋಗ್ರಾಫರ್, ಉದಯ್ ಲೀಲಾ ಎಲ್ಲರೂ ಅರ್ಜುನ್ ಅವರಿಗೆ ನೆರವಾಗಿದ್ದಾರೆ."ನನ್ನ ಚಿತ್ರಕ್ಕೆ ಸ್ಕೋರರ್ ರಚಿಸಲು ಸಂಗೀತ ನಿರ್ದೇಶಕರಿಗೆ ಒಂದು ವರ್ಷ ಹಿಡಿಯಿತು"ಹಾಡುಗಳನ್ನು ರಚಿಸುವಾಗ ನಾವೂ ಸಹ ಗೀತರಚನೆಕಾರರನ್ನು ಹೊಂದಿದ್ದು ಉತ್ತಮ ಗೀತೆಗಳು ಮೂಡಿ ಬಂದಿದೆ" ಅರ್ಜುನ್ ತಿಳಿಸಿದರು.
ಈ ಚಿತ್ರ ಯಾವ ತಮಿಳು ಚಿತ್ರದ ರೀಮೇಕ್ ಆಲ್ಲ.ನಿರ್ದೇಶಕ ಅಶೋಕ್ ಸ್ವತಃ ಸಂಕಷ್ಟ ಕರ ಗಣಪತಿ ತಮಿಳಿನ ಚಿತ್ರದ ರೀಮೇಕ್ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ನಾನು ಟೈಟಲ್ ಅಪ್ ಮಾಡುವ ವೇಳೆ ಬಹಳಷ್ಟು ಜನ ಇದನ್ನು ರೀಮೇಕ್ ಎಂದು ಕಮೆಂಟ್ ಮಾಡಿದ್ದರು. "ನಾನು ತಮಿಳು ನಿರ್ದೇಶಕರೊಡನೆ ಮಾತನಾಡಿದ್ದೇನೆ. ಅವರೂ ಸಹ ನನ್ನದು ಸ್ವಂತ ಪ್ರಯತ್ನವೆಂದಿದ್ದಾರೆ. ನನಗೀಗ ಹೆಸರನ್ನು ಬದಲಿಸಲಾಗದು. ಕ್ಯಾನ್ಸರ್ ಅಥವಾ ಆಲ್ಝೈಮರ್ನ ಮೇಲೆ ಅನೇಕ ಚಿತ್ರಗಳು ಬಂದಿದೆ. ಆದರೆ ನಮ್ಮದು ಇಂತಹಾ ಅಪರೂಪದ ಖಾಯಿಲೆ ಇರುವ ನಾಯಕನ ಕಥೆಯಾಧಾರಿಸಿದ ಚಿತ್ರ"ಅರ್ಜುನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com