ಬೆಂಗಳೂರು: ಸೋನಾಲ್ ಮಂತೇರಿಯೋ ಯಶ್ ಶೆಟ್ಟಿ ಮತ್ತು ತೇಜ್ ಅಭಿನಯದ ಅಭಿಸಾರಿಕೆ ಚಿತ್ರದ ಪ್ರಮೋಷನ್ ಗಾಗಿ ಚಿತ್ರತಂಡ ಒಂದು ಅತ್ಯದ್ಭುತ ಹಾಡನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ.
ಅದಕ್ಕಾಗಿ ಒಂದು ವಿಶೇಷ ಹಾಡನ್ನು ಕಾವ್ಯಾಗೌಡ ಮತ್ತು ದರ್ಶಿತ್ ನಟನೆಯಲ್ಲಿ ಚಿತ್ರೀಕರಿಸಲಾಗಿದೆ, ಈ ಹಾಡು ಕೇವಲ ಚಿತ್ರದ ಪ್ರಮೋಶನ್ ಗಾಗಿ ಎಂದು ನಿರ್ದೇಶಕ ಮಧುಸೂದನ್ ತಿಳಿಸಿದ್ದಾರೆ.
ಮಧುರವಾದ ಹಾಡಿನಲ್ಲಿ ಫಾಸ್ಟ್ ಬೀಟ್ ಮ್ಯೂಸಿಕ್ ಹಾಕಿದ್ದೇವೆ, ಇದು ಪ್ರೇಕ್ಷಕರನ್ನು ಕುಣಿಯುವಂತೆ ಮಾಡುತ್ತದೆ ಎಂದು ಹೇಳಿದ ಅವರು ಚಿತ್ರದ ಕಥಯ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.
ಕರಣ್ ಕೃಪಾ ಹಾಡಿಗೆ ಸಂಗೀತ ನೀಡಿದ್ದಾರೆ. ಸಿನಿಮಾವನ್ನು ಆಗಸ್ಟ್ 10 ರಂದು ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.ಅದಕ್ಕೂ ಮುನ್ನ ಪ್ರಮೋಷನಲ್ ಸಾಂಗ್ ಬಿಡುಗಡೆ ಮಾಡಲಾಗುವುದು , ಅದರ ಜೊತೆಗೆ ಸಿನಿಮಾ ಟ್ರೇಲರ್ ಕೂಡ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.