ಕೊಡಚಾದ್ರಿಯಲ್ಲಿ ಅಂತಿಮ ಹಂತದ ಶೂಟಿಂಗ್ ಮುಗಿಸಿದ 'ಭೀಮಸೇನ ನಳಮಹಾರಾಜ'

ರು: ಕಾರ್ತಿಕ್ ಸರಗೂರು ನಿರ್ದೇಶನದ ಚೊಚ್ಚಲ ಸಿನಿಮಾ ಭೀಮಸೇನ ನಳಮಹಾರಾಜ ಕೊಡಚಾದ್ರಿಯಲ್ಲಿ 13 ದಿನಗಳ ಶೂಟಿಂಗ್ ಮುಗಿಸಿದೆ. ...
'ಭೀಮಸೇನ ನಳಮಹಾರಾಜ'  ಪೋಸ್ಟರ್
'ಭೀಮಸೇನ ನಳಮಹಾರಾಜ' ಪೋಸ್ಟರ್
ಬೆಂಗಳೂರು: ಕಾರ್ತಿಕ್ ಸರಗೂರು ನಿರ್ದೇಶನದ ಚೊಚ್ಚಲ ಸಿನಿಮಾ ಭೀಮಸೇನ ನಳಮಹಾರಾಜ ಕೊಡಚಾದ್ರಿಯಲ್ಲಿ 13 ದಿನಗಳ ಶೂಟಿಂಗ್ ಮುಗಿಸಿದೆ. ಸಿನಿಮಾದಲ್ಲಿ ಆರು ರಸಗಳ ಕುರಿತು ಕಥೆ ಎಣೆಯಲಾಗಿದೆ. ಸಿಹಿ, ಉಳಿ, ಉಪ್ಪು, ಕಹಿ, ಖಾರ, ಒಗರು ಎಂಬ ಆರು ರಸಗಳು ಆರು ಪಾತ್ರಗಳನ್ನು ಪ್ರತಿನಿಧಿಸುತ್ತವೆ.
ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಅರವಿಂದ್ ಐಯ್ಯರ್, ಅಚ್ಯುತ ಕುಮಾರ್, ಆರೋಹಿ ನಾರಾಯಣ, ಪ್ರಿಯಾಂಕ ತಿಮ್ಮೇಶ್, ಬಾಲಕ ಕಲಾವಿದರಾದ ಆದ್ಯ ಮತ್ತು ಚಿತ್ರಾಲಿ ಎಲ್ಲರೂ ಸೆಟ್ ನಲ್ಲಿ ಭಾಗವಹಿಸಿದ್ದರು. 
ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜೊತೆಗೆ ಟೀಸರ್ ಬಿಡುಗಡೆಗಾಗಿಯೂ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ, ಚಿತ್ರೀಕರಣಕ್ಕೆ ಮಾನ್ಸೂನ್ ಸೆಟ್ ತುಂಬಾ ಅನುಕೂಲವಾಯಿತು. ಸೂರ್ಯೋಧಯದ ನಂತರ ಹೆಚ್ಚಿನ ಭಾಗದ ಶೂಟಿಂಗ್ ನಡೆಸಲಾಗಿದೆ, ಮಧ್ಯರಾತ್ರಿ ವರೆಗೂ ನಾವು ಚಿತ್ರೀಕರಣ ನಡೆಸಿದೆವು ಎಂದು ಕಾರ್ತಿಕ್ ತಿಳಿಸಿದ್ದಾರೆ.
ಸದಭಿರುಚಿಯ ಅಡುಗೆ ಭಟ್ಟನಾಗಿ ಅರವಿಂದ್ ನಟಿಸಿದ್ದಾರೆ,  ಸರಳ ಕ್ರಿಶ್ಚಿಯನ್ ಹುಡುಗಿಯಾಗಿ ಪ್ರಿಯಾಂಕಾ, ಅಯ್ಯಂಗಾರಿ ಹುಡುಗಿಯಾಗಿ ಆರೋಹಿ ಕಾಣಿಸಿಕೊಂಡಿದ್ದಾರೆ, ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ಎಂ ರಾವ್, ಮತ್ತು ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಪಕರಾಗಿದ್ದಾರೆ, ಚರಣ್ ರಾಜ್ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com