ಎ ಕ್ಲಾಸ್ ಟ್ರೀಟ್ಮೆಂಟ್ ವಿರೋಧಿಸಿ ನಿರ್ದೇಶಕ, ನಿರ್ಮಾಪಕರ ಪ್ರತಿಭಟನೆ!

ಚಿತ್ರಗಳಿಗೆ ಪ್ರಮಾಣೀಕರಣ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ವಿರೋಧಿಸಿ 100 ಕ್ಕೂ ಹೆಚ್ಚು ನಿರ್ದೇಶಕರು, ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಎ ಕ್ಲಾಸ್ ಟ್ರೀಟ್ಮೆಂಟ್ ವಿರೋಧಿಸಿ ನಿರ್ದೇಶಕ, ನಿರ್ಮಾಪಕರ ಪ್ರತಿಭಟನೆ!
ಎ ಕ್ಲಾಸ್ ಟ್ರೀಟ್ಮೆಂಟ್ ವಿರೋಧಿಸಿ ನಿರ್ದೇಶಕ, ನಿರ್ಮಾಪಕರ ಪ್ರತಿಭಟನೆ!
ಬೆಂಗಳೂರು: ಚಿತ್ರಗಳಿಗೆ ಪ್ರಮಾಣೀಕರಣ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ವಿರೋಧಿಸಿ 100 ಕ್ಕೂ ಹೆಚ್ಚು ನಿರ್ದೇಶಕರು, ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದ್ದಾರೆ. 
ಸೆನ್ಸಾರ್ ಬೋರ್ಡ್ ನಿಂದ ಚಿತ್ರಗಳ ಪ್ರಮಾಣೀಕರ ಪ್ರಕ್ರಿಯೆ ವಿಳಂಬವಾಗುತ್ತಿದೆ, ಅಷ್ಟೇ ಅಲ್ಲದೇ ಚಿತ್ರಗಳಿಗೆ ಎ ಪ್ರಮಾಣಪತ್ರ ನೀಡುತ್ತಿರುವುದರಿಂದ ಸರ್ಕಾರದಿಂದ ಸಬ್ಸಿಡಿ ಸಿಗುತ್ತಿಲ್ಲ, ಸ್ಯಾಟಲೈಟ್ ಹಕ್ಕುಗಳನ್ನೂ ಪಡೆಯುವುದು ದುಸ್ತರವಾಗಿದೆ ಎಂದು ನಿರ್ದೇಶಕ, ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾರ್ತಿಕ್ ಚಂದ್ರ ಈ ಬಗ್ಗೆ ಮಾತನಾಡಿದ್ದು, ಕೆಎಫ್ ಸಿಸಿ ಅಧ್ಯಕ್ಷರಿಗೆ ನಮ್ಮ ಸಮಸ್ಯೆಗಳ ಕುರಿತಂತೆ ವಿವರಿಸಿ ಪತ್ರವನ್ನು ನೀಡಿದ್ದೇವೆ. ಸೆನ್ಸಾರ್ ಬೋರ್ಡ್ ನಲ್ಲಿ ನಿರ್ದಿಷ್ಟ ತುಣುಕುಗಳಿಗೆ ಕತ್ತರಿ ಹಾಕುವಂತೆ ಆದೇಶ ನೀಡಲಾಗುತ್ತದೆ. ನಿಯಮಗಳ ಪ್ರಕಾರ ಈ ಬಗ್ಗೆ ನಿರ್ದೇಶಕರು, ನಿರ್ಮಾಪಕರೊಂದಿಗೆ ಚರ್ಚೆ ನಡೆಸಬಹುದು ಆದರೆ ಅದು ಆಗುತ್ತಿಲ್ಲ, ಸೆನ್ಸಾರ್ ಬೋರ್ಡ್ ನ ತೀರ್ಮಾನದಂತೆಯೇ ನಡೆದುಕೊಳ್ಳಲು ಅಪೇಕ್ಷಿಸುತ್ತಾರೆ ಎಂದು ಆರೋಪಿಸಿದ್ದಾರೆ. 
ಚರ್ಚೆಗೆ ಕೂತೊಡನೆಯೇ ಎ ಸರ್ಟಿಫಿಕೇಟ್ ನೀಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ, ಇನ್ನೂ ಹೆಚ್ಚು ಮಾತನಾಡಿದರೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಸುತ್ತಾರೆ. ನಮಗೆ ಬೇರೆ ಆಯ್ಕೆಗಳಿಲ್ಲದೇ ಪ್ರತಿಭಟನೆ ನಡೆಸುತ್ತಿದ್ದೇವೆ. ಹೇಳಿದ್ದಾರೆ. ಪ್ರಾರಂಭದಲ್ಲಿ ನನಗೆ ಮಾತ್ರ ಈ ಸಮಸ್ಯೆ ಕಾಡುತ್ತಿದೆ ಎಂದುಕೊಂಡಿದ್ದೆ, ಆದರೆ ನನ್ನಂತೆಯೇ ಹಲವು ನಿರ್ಮಾಪಕರೂ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುತ್ತಾರೆ ಕಾರ್ತಿಕ್ ಚಂದ್ರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com